ETV Bharat / sports

Duleep Trophy semifinal: ವೆಸ್ಟ್​​ ಝೋನ್​ನಲ್ಲಿ ಪೂಜಾರ, ಸರ್ಫರಾಜ್​, ಸೂರ್ಯ ವೈಫಲ್ಯ.. ನಾರ್ಥ್​ ಝೋನ್​ಗೆ ಪ್ರಭಾಸಿಮ್ರಾನ್​ ಏಕಾಂಗಿ ಆಟ

author img

By

Published : Jul 5, 2023, 7:15 PM IST

2023ರ ದುಲೀಪ್​ ಟ್ರೋಫಿ ಸೆಮಿಫೈನಲ್​ ಪಂದ್ಯಗಳು ನಡೆಯುತ್ತಿದ್ದು, ಆಲೂರು ಮೈದಾನದಲ್ಲಿ ವೆಸ್ಟ್​​ - ಸೆಂಟ್ರಲ್ ಝೋನ್​ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌಥ್​ - ನಾರ್ಥ್​ ಝೋನ್ ಮುಖಾಮುಖಿಯಾಗುತ್ತಿವೆ. ​​

Etv Bharaduleep-trophy-semifinal-central-zone-vs-west-zone-and-south-zone-vs-north-zone-in-bengalurut
Etv BharatDuleep Trophy semifinal:

ದುಲೀಪ್​ ಟ್ರೋಫಿ 2023ರ ಸೆಮಿಫೈನಲ್​ ಒಂದು ಮತ್ತು ಎರಡು ಇಂದಿನಿಂದ ಆಂಭವಾಗಿದೆ. ಮೊದಲ ಸೆಮಿಫೈನಲ್​ನಲ್ಲಿ ವೆಸ್ಟ್​​ ಝೋನ್​ ಮತ್ತು ಸೆಂಟ್ರಲ್​ ಝೋನ್​ ಬೆಂಗಳೂರು ಹೊರ ವಲಯದಲ್ಲಿರುವ ಆಲೂರು ಸ್ಟೇಡಿಯಂನಲ್ಲಿ ಆಡುತ್ತಿದೆ. ಸೆಮಿಫೈನಲ್​ 2ರಲ್ಲಿ ಸೌಥ್​ ಝೋನ್​ ಮತ್ತು ನಾರ್ಥ್​ ಝೋನ್​​ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಫಸ್ಟ್​ ಸೆಮಿಫೈನಲ್​ನ ಮೊದಲ ದಿನ: ವೆಸ್ಟ್​​ ಝೋನ್​ ಮತ್ತು ಸೆಂಟ್ರಲ್​ ಝೋನ್​ ನಡುವಿನ ಪಂದ್ಯದಲ್ಲಿ, ಟಾಸ್​ ಗೆದ್ದ ವೆಸ್ಟ್​ ಝೋನ್​ ನಾಯಕ ಪ್ರಿಯಾಂಕ್​ ಪಾಂಚಾಲ್​ ಮೊದಲು ಬ್ಯಾಟಿಂಗ್​ ಮಾಡುವ ನಿರ್ಧಾರವನ್ನು ಮಾಡಿದರು. ಅದರಂತೆ ಮೊದಲನೇ ದಿನಕ್ಕೆ ತಂಡ 216 ರನ್​ಗೆ 8 ವಿಕೆಟ್​ಗಳನ್ನು ಕಳೆದುಕೊಂಡಿದೆ.

ವೆಸ್ಟ್​​ ಝೋನ್​ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ದೊಡ್ಡ ಮೊತ್ತ ಗಳಿಸುವಲ್ಲಿ ಮತ್ತೆ ವಿಫಲರಾದರು. 54 ಬಾಲ್​ನಲ್ಲಿ ಕೇವಲ 26 ರನ್​ ಗಳಿಸಿ ವಿಕೆಟ್​ ಕೊಟ್ಟರು. ಅವರ ನಂತರ ಬಂದ ಚೇತೇಶ್ವರ ಪೂಜಾರ ಸಹ ಹೆಚ್ಚು ರನ್​ ಗಳಿಸಲಿಲ್ಲ. ಆದರೆ ಫಾರ್ಮ್​ಗೆ ಮರಳುವ ಉದ್ದೇಶದಿಂದ ವಿಕೆಟ್​ ನಿಲ್ಲಸಿಕೊಂಡಿದ್ದರು. ಬರೋಬ್ಬರಿ 103 ಬಾಲ್​ಗಳನ್ನು ಆಡಿದ ಪೂಜಾರ ಕೇವಲ 28 ರನ್​ ಗಳಿಸಿದರು. ಟಿ20ಯ ಅಗ್ರ ಶ್ರೇಯಾಂಕದ ಬ್ಯಾಟರ್​ ಸೂರ್ಯ ಕುಮಾರ್​ ಯಾದವ್​ ಕೆಂಪು ಚೆಂಡಿನಲ್ಲಿ ರನ್​ ಗಳಿಸಲು ಪರದಾಡಿದರು. 13 ಬಾಲ್​ ಎದುರಿಸಿ 7 ರನ್​ಗೆ ವಿಕೆಟ್​ ಕೊಟ್ಟರು. ಸರ್ಫರಾಜ್​ ಖಾನ್​ ಶೂನ್ಯಕ್ಕೆ ವಿಕೆಟ್​ ಕೊಟ್ಟು ನಿರಾಸೆ ಮೂಡಿಸಿದರು.

ವೆಸ್ಟ್​ ಝೋನ್​ ತಂಡಕ್ಕೆ ಕೊನೆ ಬ್ಯಾಟರ್​ಗಳು ಆಸರೆಯಾದರು. ಅತಿತ್​ ಸೇಥ್​ ಅವರ ಅದ್ಭುತ ಇನ್ನಿಂಗ್ಸ್​ 200ರ ಗಡಿ ದಾಟಲು ಸಹಕರಿಸಿತು. ಅವರು ಇನ್ನಿಂಗ್ಸ್​ನಲ್ಲಿ 129 ಬಾಲ್ 74 ರನ್​ ಗಳಿಸಿದ್ದರು. ಸೇಥ್​ಗೆ ಸಾಥ್ ಕೊಟ್ಟಿದ್ದು ಧರ್ಮೇಂದ್ರಸಿನ್ಹ ಜಡೇಜ. ತಾಳ್ಮೆಯಿಂದ 91 ಬಾಲ್​ ಆಡಿದ ಅವರು 39 ರನ್​ ಗಳಿಸಿದರು. ಇವರಿಬ್ಬರ 7 ಮತ್ತು 8ನೇ ವಿಕೆಟ್​ನ ಜೊತೆಯಾಟ ತಂಡಕ್ಕೆ ಆಸರೆಯಾಯಿತು. ದಿನದಾಟದ ಅಂತ್ಯಕ್ಕೆ ಚಿಂತನ್​ ಗಜ (13) ಮತ್ತು ಅರ್ಜಾನ್ ನಾಗ್ವಾಸ್ವಾಲ್ಲಾ (5) ಕ್ರೀಸ್​ನಲ್ಲಿದ್ದಾರೆ. ಸೆಂಟ್ರಲ್​ ಝೋನ್​ ಪರ ಶಿವಮ್​ ಮಾವಿ 4 ವಿಕೆಟ್​ ಪಡೆದು ವಿಂಚಿದ್ದಾರೆ. ಉಳಿದಂತೆ ಅವೇಶ್​ ಖಾನ್​, ಯಶ್​ ಠಾಕೂರ್​, ಸೌರಭ್​ ಕುಮಾರ್​ ಮತ್ತು ಸರಂಶ್ ಜೈನ್​ ತಲಾ ಒಂದು ವಿಕೆಟ್​ ಪಡೆದಿದ್ದಾರೆ. ಇನ್ನೂ ಮೂರು ದಿನದ ಪಂದ್ಯ ಬಾಕಿ ಇದೆ.

ಸೆಮಿಫೈನಲ್​ 2ರಲ್ಲಿ ಸೌಥ್​ - ನಾರ್ಥ್​ ಝೋನ್: ಟಾಸ್​ ಗೆದ್ದ ಸೌಥ್​ ಝೋನ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬೌಲಿಂಗ್​ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಂತೆ ಮಳೆ ನಡುವೆಯೂ ಯಶಸ್ಸು ಸಾಧಿಸಿತು. ಬ್ಯಾಟಿಂಗ್​ಗೆ ಇಳಿದ ನಾರ್ಥ್​ ಝೋನ್​ ಉತ್ತಮ ಪ್ರದರ್ಶನ ಏನು ನೀಡಲಿಲ್ಲ. ಐಪಿಎಲ್​ನಲ್ಲಿ ಪಂಜಾಬ್​ ಪರ ಶತಕ ಬಾರಿಸಿದ್ದ ಪ್ರಭಾಸಿಮ್ರಾನ್ ಸಿಂಗ್ ಏಕಾಂಗಿಯಾಗಿ ಮಧ್ಯಮ ಕ್ರಮಾಂಕದಲ್ಲಿ 49 ರನ್​ ಗಳಿಸಿದ್ದು ಗಮನಾರ್ಹ ಆಟ ಬಿಟ್ಟರೆ, ಮತ್ತಾರೂ ಹೇಳುವಂತ ಆಟ ಪ್ರದರ್ಶಿಸಲಿಲ್ಲ. ಅಂಕಿತ್​ ಕುಮಾರ್​ (33), ಹರ್ಷಿತ್​ ರಾಣಾ (31), ನಿಷಾಂತ್​ ಸಿಂಧು (27) ಮತ್ತು ವೈಭವ್​ ಅರೋರಾ (23) ಅವರ ಸಾಧಾರಣ ಪ್ರದರ್ಶನದಿಂದ ನಾರ್ಥ್​ ಝೋನ್​ 58.3 ಓವರ್​ 198 ರನ್​ ಗಳಿಸಿ ಆಲ್​ಔಟ್ ಆಯಿತು. ಸೌಥ್​ ಪರ ವಿಧ್ವತ್​ ಕಾವೇರಪ್ಪ 5 ವಿಕೆಟ್​ ಕಿತ್ತು ಗಮನ ಸೆಳೆದರು.

ಆಲ್​ ಔಟ್​ ಆಗುತ್ತಿದ್ದಂತೆ ಮೊದಲ ಇನ್ನಿಂಗ್ಸ್​ ಆರಂಭಿಸಿದ ಸೌಥ್​ ಝೋನ್​ ಸಹ ಕಳಪೆ ಪ್ರದರ್ಶನ ನೀಡಿದೆ. ದಿನದಾಟದ ಅಂತ್ಯಕ್ಕೆ 17 ಓವರ್​ಗೆ 4 ವಿಕೆಟ್​ ಕಳೆದುಕೊಂಡು 63 ರನ್​ ಗಳಿಸಿದೆ. ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಾಯಿ ಸುದರ್ಶನ್​ 9 ರನ್​ಗೆ ವಿಕೆಟ್​ ಕೊಟ್ಟರೆ, ನಾಯಕ ಹನುಮ ವಿಹಾರಿ ಮತ್ತು ರಿಕ್ಕಿ ಸೊನ್ನೆ ಸುತ್ತಿದರು. ಈಗ ಕ್ರೀಸ್​ನಲ್ಲಿ ಅನುಭವಿ ಮಾಯಾಂಕ್​ ಅಗರ್ವಾಲ್ (37)​ ಮತ್ತು ತಿಲಕ್​ ವರ್ಮಾ (12) ಇದ್ದಾರೆ. ನಾರ್ಥ್​ ಪರ ಬೌಲಿಂಗ್​ ಮಾಡಿದ ಬಲ್ತೇಜ್ ಸಿಂಗ್ ಮತ್ತು ಹರ್ಷಿತ್​ ರಾಣಾ ತಲಾ ಎರಡು ವಿಕೆಟ್​ ಪಡೆದಿದ್ದಾರೆ. ನಾರ್ಥ್​ 135 ರನ್​​ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಇದನ್ನೂ ಓದಿ: ICC Raking: ಅಗ್ರ ಸ್ಥಾನದಲ್ಲೇ ಮುಂದುವರಿದ ಅಶ್ವಿನ್​, ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಉತ್ತುಂಗಕ್ಕೇರಿದ ಗಾಯಾಳು ವಿಲಿಯಮ್ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.