ETV Bharat / sports

ಮುಂಬೈನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಎಂಎಸ್​ ಧೋನಿ

author img

By

Published : Jun 1, 2023, 9:30 PM IST

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿಗೆ ಮುಂಬೈನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಬಗ್ಗೆ ಸಿಎಸ್​ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾದ ಎಂಎಸ್​ ಧೋನಿ
ಶಸ್ತ್ರಚಿಕಿತ್ಸೆಗೆ ಒಳಗಾದ ಎಂಎಸ್​ ಧೋನಿ

ಮುಂಬೈ: ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ 5ನೇ ಐಪಿಎಲ್​ ಗರಿ ತಂದಿತ್ತ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಗುರುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಮೊಣಕಾಲಿನ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರ ಚಿಕಿತ್ಸೆಗಾಗಿ ಧೋನಿ ಬುಧವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು. ಕ್ರೀಡಾ ವೈದ್ಯ ಡಾ.ದಿನ್‌ಶಾ ಪರ್ದಿವಾಲಾ ಅವರು ಇದನ್ನು ನೆರವೇರಿಸಿದ್ದಾರೆ.

ಧೋನಿಗೆ ಮೊಣಕಾಲು ಚಿಕಿತ್ಸೆ ಮಾಡಲಾಗಿದೆ. ಇದೀಗ ಅವರು ಸಾವರಿಸಿಕೊಳ್ಳುತ್ತಿದ್ದಾರೆ. ಕಾಲಿನಲ್ಲಿ ನೋವು ಇದ್ದ ಕಾರಣ ಆಪರೇಷನ್​ ಮಾಡಬೇಕಾಯಿತು. ಇನ್ನೆರಡು ಮೂರು ದಿನದಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ನಂತರ ಅವರು ಸಂಪೂರ್ಣವಾಗಿ ಫಿಟ್ ಆಗಿ ಮತ್ತೆ ಮೈದಾನಕ್ಕೆ ಮರಳಬಹುದು ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ. ಪರ್ದಿವಾಲಾ ತಿಳಿಸಿದ್ದಾರೆ.

ಇನ್ನೂ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್​ ಕೂಡ ಟ್ವೀಟ್​ ಮಾಡಿ ಈ ವಿಷಯ ತಿಳಿಸಿದ್ದು, ನಾಯಕ ಮಹೇಂದ್ರ ಸಿಂಹ್​ ಧೋನಿ ಅವರಿಗೆ ನಡೆಸಿದ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಮುಂಬೈನಲ್ಲಿ ಅವರು ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಓದಿ; ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಬಂಧಿಸುವಷ್ಟು ಪುರಾವೆಗಳಿಲ್ಲ, 15 ದಿನದ ಒಳಗೆ ಕೋರ್ಟ್​ಗೆ ವರದಿ ಸಲ್ಲಿಕೆ: ದೆಹಲಿ ಪೊಲೀಸ್​​​

ಐಪಿಎಲ್‌ ಸಮಯದಲ್ಲಿ ಎಂಎಸ್‌ ಧೋನಿ ಎಡ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಚೆನ್ನೈ ಐಪಿಎಲ್‌ ಚಾಂಪಿಯನ್‌ ಆದ ಎರಡೇ ದಿನದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ನಿನ್ನೆಯಷ್ಟೇ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸಲಹೆಯ ಬಳಿಕ ಆಪರೇಷನ್​ಗೆ ಒಳಗಾಗಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ್ದರು. ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಆಪರೇಷನ್​ ನಡೆದಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ಚಾಂಪಿಯನ್​: ಐಪಿಎಲ್​ನಲ್ಲಿ ಸಿಎಸ್​ಕೆ ನಾಯಕನಾಗಿರುವ ಎಂಎಸ್​ ಧೋನಿ ತಂಡವನ್ನು ಚಾಂಪಿಯನ್​ ಮಾಡಿ 5 ನೇ ಪ್ರಶಸ್ತಿ ತಂದುಕೊಟ್ಟಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಕೊನೆ ಎಸೆತದಲ್ಲಿ ಸಿಎಸ್​ಕೆ ಸೋಲಿಸಿತ್ತು. ರವೀಂದ್ರ ಜಡೇಜಾ ಕೊನೆಯ 2 ಎಸೆತಗಳಲ್ಲಿ ಸಿಕ್ಸರ್​​, ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ 5 ಬಾರಿಯ ಚಾಂಪಿಯನ್​ ದಾಖಲೆಯನ್ನು ಸಿಎಸ್​ಕೆ ಸರಿಗಟ್ಟಿತು.

ಮುಂದಿನ ಸೀಸನ್​ನಲ್ಲಿ ಧೋನಿ ಆಡ್ತಾರಾ?: ಮುಂದಿನ ಐಪಿಎಲ್‌ ಸೀಸನ್​ನಲ್ಲಿ ಎಂಎಸ್​​ ಧೋನಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ. 16 ನೇ ಆವೃತ್ತಿಯೇ ಕೊನೆಯಾಗಲಿದ್ದು ರಾಜೀನಾಮೆ ನೀಡಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಭಾರತ ತಂಡದ ಯಶಸ್ವಿ ನಾಯಕ ಜನರ ಪ್ರೀತಿಗೆ ಬೆಲೆಕಟ್ಟಲಾಗದು. ಮುಂದಿನ ಸೀಸನ್​ಗಾಗಿ 8-9 ತಿಂಗಳು ಬಾಕಿ ಇದೆ. ಈಗಲೇ ಯಾವ ನಿರ್ಧಾರ ಮಾಡುವುದಿಲ್ಲ. ದೈಹಿಕವಾಗಿ ಸಮರ್ಥನಾಗಿದ್ದರೆ ಇನ್ನೊಂದು ಸೀಸನ್​ ಆಡುವೆ ಎಂದಿದ್ದರು.

ಓದಿ: ಬದ್ಧವೈರಿಗಳಾದ ಭಾರತ- ಪಾಕ್​ 'ವಿಶ್ವಕಪ್​ ಕಾದಾಟ'ಕ್ಕೆ ಲಖನೌ ಮೈದಾನ ಆತಿಥ್ಯ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.