ETV Bharat / sports

5 ಪಂದ್ಯ, 3 ಶತಕ, 2 ಅರ್ಧಶತಕ: ಡೆವೊನ್‌ ಕಾನ್ವೆ ಟೆಸ್ಟ್​​ ಕ್ರಿಕೆಟ್​ನ ವಿಶೇಷ ಸಾಧಕ

author img

By

Published : Jan 10, 2022, 9:43 PM IST

ಕ್ರಿಕೆಟಿಗ ಡೆವೊನ್ ಕಾನ್ವೆ ತಮ್ಮ ಜೀವನದ ಮೊದಲ 5 ಟೆಸ್ಟ್​ ಪಂದ್ಯಗಳಲ್ಲಿ 50+ ರನ್​ಗಳಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಒಟ್ಟಾರೆ 5 ಪಂದ್ಯಗಳಲ್ಲಿ ಒಂದು ದ್ವಿಶತಕದ ಸಹಿತ 3 ಶತಕ, 2 ಅರ್ಧಶತಕಗಳ ಸಹಿತ 623 ರನ್​ಗಳಿಸಿದ್ದಾರೆ.

Devon Conway becomes first player to achieve this massive feat
ಡೆವೊನ್ ಕಾನ್ವೆ ದಾಖಲೆ

ಕ್ರೈಸ್ಟ್​ಚರ್ಚ್: ನ್ಯೂಜಿಲ್ಯಾಂಡ್ ತಂಡದ ಬ್ಯಾಟರ್​ ಡೆವೊನ್ ಕಾನ್ವೆ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಮೊದಲ 5 ಟೆಸ್ಟ್​​ಗಳಲ್ಲೂ ಕನಿಷ್ಠ ಅರ್ಧಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಕಾನ್ವೆ, 2021ರಲ್ಲಿ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅದೇ ಪಂದ್ಯದಲ್ಲಿ ಡಬಲ್ ಸೆಂಚುರಿ ಸಿಡಿಸಿ ಮಿಂಚಿ ನಂತರ 2ನೇ ಟೆಸ್ಟ್​ ಪಂದ್ಯದಲ್ಲೂ 80 ರನ್​ಗಳಿಸಿದ್ದರು. ನಂತರ ಏಜಸ್​ಬೌಲ್​​ನಲ್ಲಿ ಭಾರತದ ವಿರುದ್ಧ ನಡೆದಿದ್ದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ 54 ರನ್​ ಸಿಡಿಸಿ ಕಿವೀಸ್​ಗೆ ಮೊದಲ ಐಸಿಸಿ ಟ್ರೋಫಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಕಳೆದ ವಾರದಿಂದ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ 2 ಪಂದ್ಯಗಳ ಸರಣಿಯಲ್ಲೂ ಸತತ ಎರಡು ಶತಕ ಸಿಡಿಸಿದ್ದಾರೆ. ಮೊದಲ ಪಂದ್ಯದಲ್ಲಿ 122 ಮತ್ತು ಪ್ರಸ್ತುತ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ 109 ರನ್​ಗಳಿಸಿದ್ದಾರೆ.

ಈ ಮೂಲಕ ವೃತ್ತಿ ಜೀವನದ ಮೊದಲ 5 ಟೆಸ್ಟ್​ ಪಂದ್ಯಗಳಲ್ಲಿ 50+ ರನ್​ಗಳಿಸಿದ ವಿಶ್ವದ ಏಕೈಕ ಬ್ಯಾಟರ್ ಆದರು. ಒಟ್ಟಾರೆ ಡೆವೊನ್ ಕಾನ್ವೆ 5 ಪಂದ್ಯಗಳಲ್ಲಿ ಒಂದು ದ್ವಿಶತಕದ ಸಹಿತ 3 ಶತಕ, 2 ಅರ್ಧಶತಕಗಳ ಸಹಿತ 623 ರನ್​ಗಳಿಸಿದ್ದಾರೆ.

ಇದನ್ನೂ ಓದಿ: 3ನೇ ಟೆಸ್ಟ್​ಗೆ ನಾನು ಸಂಪೂರ್ಣ ಫಿಟ್​, ಆದರೆ ಆತ ಆಡುವುದು ಡೌಟ್​: ವಿರಾಟ್ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.