ETV Bharat / sports

ಕ್ರಿಕೆಟ್ ಗ್ರೌಂಡ್​ಗೆ ಹೆಲಿಕಾಪ್ಟರ್‌ನಲ್ಲಿ ಡೇವಿಡ್ ವಾರ್ನರ್​ ಗ್ರ್ಯಾಂಡ್ ಎಂಟ್ರಿ

author img

By ETV Bharat Karnataka Team

Published : Jan 12, 2024, 7:53 PM IST

David Warner lands at SCG by Helicopter: ಸಿಡ್ನಿ ಕ್ರಿಕೆಟ್ ಗ್ರೌಂಡ್​ಗೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್​ ಡೇವಿಡ್ ವಾರ್ನರ್ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದಾರೆ.

David Warner lands at SCG by helicopter in typical Bollywood style for BBL match
ಕ್ರಿಕೆಟ್ ಗ್ರೌಂಡ್​ಗೆ ಹೆಲಿಕಾಪ್ಟರ್‌ನಲ್ಲಿ ಡೇವಿಡ್ ವಾರ್ನರ್​ ಗ್ರ್ಯಾಂಡ್ ಎಂಟ್ರಿ

ಸಿಡ್ನಿ (ಆಸ್ಟ್ರೇಲಿಯಾ): ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಪಂದ್ಯಕ್ಕಾಗಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್​ ಡೇವಿಡ್ ವಾರ್ನರ್​ ಮೈದಾನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್​ಗೆ ಬಂದಿಳಿರುವ ವಾರ್ನರ್​ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಇತ್ತೀಚಿಗೆ ಪಾಕಿಸ್ತಾನ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್​ ತಮ್ಮ ಟೆಸ್ಟ್​ ಕ್ರಿಕೆಟ್​ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಬಳಿಕ ನ್ಯೂ ಸೌತ್ ವೇಲ್ಸ್‌ನ ಹಂಟರ್ ವ್ಯಾಲಿಯಲ್ಲಿ ತಮ್ಮ ಸಹೋದರನ ಮದುವೆಯಲ್ಲಿ ಅವರು ಭಾಗವಹಿಸಿದ್ದರು. ಶುಕ್ರವಾರ ಬಿಗ್ ಬ್ಯಾಷ್ ಲೀಗ್​ನ ಸಿಡ್ನಿ ಥಂಡರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್​ ನಡುವೆ ಪಂದ್ಯಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ತಮ್ಮ ತವರು ಸಿಡ್ನಿ ಕ್ರಿಕೆಟ್ ಮೈದಾನಕ್ಕೆ ಆಗಮಿಸಿ ಗಮನ ಸೆಳೆದಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಸ್ಟಾರ್ ಬ್ಯಾಟರ್ ಕ್ರಿಕೆಟ್​ ಗ್ರೌಂಡ್​ನಲ್ಲಿ ಬಂದಿಳಿದ್ದಾರೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

37 ವರ್ಷದ ಎಡಗೈ ಬ್ಯಾಟರ್ ವಾರ್ನರ್​ ಏಕದಿನ, ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಟಿ-20 ಮತ್ತು ಫ್ರಾಂಚೈಸ್ ಲೀಗ್‌ಗಳಲ್ಲಿ ತಮ್ಮ ಆಟ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ. ಆದಾಗ್ಯೂ, ಅವರು ಪಾಕಿಸ್ತಾನದಲ್ಲಿ ನಡೆಯಲಿರುವ ಏಕದಿನ ಚಾಂಪಿಯನ್ಸ್ ಟ್ರೋಫಿ - 2025ರ ಟೂರ್ನಿಯನ್ನೂ ಆಡಲಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ಪರವಾಗಿ ಅತ್ಯಧಿಕ ರನ್​ ಗಳಿಸಿದ ಐದನೇ ಆಟಗಾರ ಎಂಬ ಖ್ಯಾತಿ ಹೊಂದಿದ್ದಾರೆ. 112 ಟೆಸ್ಟ್​ ಪಂದ್ಯಗಳನ್ನಾಗಿ 8,786 ರನ್ ಬಾರಿಸಿದ್ದಾರೆ. ವಾರ್ನರ್​ ಟೆಸ್ಟ್​ ವೃತ್ತಿಜೀವನದಲ್ಲಿ 26 ಶತಕ, 3 ದ್ವಿಶತಕ, 37 ಅರ್ಧಶತಕಗಳು ಒಳಗೊಂಡಿವೆ. ಇದೇ ವೇಳೆ, ಅಗತ್ಯವಿದ್ದಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಡುವುದಾಗಿಯೂ ತಿಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸುವ ಮೂಲಕ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿತ್ತು. ಈ ಮೂಲಕ ಅಂತಿಮ ಟೆಸ್ಟ್​ ಪಂದ್ಯ ಆಡುತ್ತಿದ್ದ ಡೇವಿಡ್​ ವಾರ್ನರ್ ಅವರಿ​ಗೆ ಭರ್ಜರಿ ಉಡುಗೊರೆ ನೀಡಿತ್ತು. ಅಲ್ಲದೇ, ಈ ಪಂದ್ಯದಲ್ಲಿ 75 ಎಸೆತಗಳಲ್ಲಿ 57 ರನ್​ ಗಳಿಸಿ ವಾರ್ನರ್ ಸಹ ಮಿಂಚಿದ್ದರು. ಜೊತೆಗೆ ​ತಮ್ಮದೇ ಶೈಲಿಯಲ್ಲಿ ಅಭಿಮಾನಿಗಳತ್ತ ಬ್ಯಾಟ್​, ಹೆಲ್ಮೆಟ್​ ಅನ್ನು ಎತ್ತುವ ಮೂಲಕ ವಾರ್ನರ್ ಧನ್ಯವಾದ ಹೇಳಿದ್ದರು. ಈ ವೇಳೆ, ಕ್ರೀಡಾಂಗಣದಲ್ಲಿದ್ದ ಸೇರಿದ್ದ ಅಭಿಮಾನಿಗಳು ಕರತಾಡನದೊಂದಿಗೆ ಗೌರವ ಸಲ್ಲಿಸಿದ್ದರು.

ಇದನ್ನೂ ಓದಿ: ಪಾಕ್ ವಿರುದ್ಧ ಆಸೀಸ್​ 3-0 ಕ್ಲೀನ್​ಸ್ವೀಪ್: ಗೆಲುವಿನೊಂದಿಗೆ ಟೆಸ್ಟ್​ಗೆ ವಾರ್ನರ್​ ವಿದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.