ನ್ಯೂಜಿಲ್ಯಾಂಡ್​​​​ ವಿರುದ್ಧ ಸರಣಿ ಗೆದ್ದ ಭಾರತ: ಬಾಬರ್​ ಆಜಂ ವಿರುದ್ಧ ಮಾಜಿ ಕ್ರಿಕೆಟಿಗರಿಂದ ಟೀಕಾ ಪ್ರಹಾರ

author img

By

Published : Jan 23, 2023, 5:05 PM IST

Updated : Jan 23, 2023, 5:33 PM IST

babar azam

ಪಾಕ್​ ತವರು ನೆಲದಲ್ಲಿ ಸತತ ಸೋಲನುಭವಿಸುವುದಕ್ಕೆ ಬ್ಯಾಟರ್​ಗಳು ಕಾರಣ ಎಂದು ಪಾಕಿಸ್ತಾನದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ ಆರೋಪಿಸಿದ್ದು, ಭಾರತೀಯರ ಕೌಶಲವನ್ನು ಹೊಗಳಿದ್ದಾರೆ.

ನವದೆಹಲಿ: ಭಾರತ ಪ್ರವಾಸದಲ್ಲಿರುವ ಕಿವೀಸ್​ ಈಗಾಗಲೇ ಏಕದಿನ ಸರಣಿ ಸೋತಿದೆ. ನಾಳೆ ಇಂದೋರ್​ನಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯದಲ್ಲಿ ಗೆದ್ದು ಬ್ಲಾಕ್​ಕ್ಯಾಪ್ಸ್​ ಕ್ಲೀನ್​ ಸ್ವೀಪ್​ನಿಂದ ತಪ್ಪಿಸಿಕೊಳ್ಳಬೇಕಿದೆ. ಮೊದಲ ಪಂದ್ಯದಲ್ಲಿ ಬೃಹತ್​ ಮೊತ್ತವನ್ನು ಬೆನ್ನಟ್ಟಿದ್ದ ನ್ಯೂಜಿಲ್ಯಾಂಡ್​ ಕೂದಲಳೆಯ ಅಂತರದಲ್ಲಿ ಸೋಲನುಭವಿಸಿತ್ತು. ಎರಡನೇ ಪಂದ್ಯದಲ್ಲಿ ಭಾರತೀಯ ಬೌಲರ್​ಗಳ ಪರಾಕ್ರಮದ ಮುಂದೆ ಮಣಿದು ಅಲ್ಪ ಮೊತ್ತಕ್ಕೆ ಕುಸಿದಿತ್ತು. ಈ ಎರಡು ಪಂದ್ಯ ಭಾರತ ಗೆದ್ದು 2-0ಯಿಂದ ಸರಣಿಯನ್ನು ತನ್ನ ತೆಕ್ಕೆಗೆ ತೆಗೆದು ಕೊಂಡಿತ್ತು.

ಭಾರತದ ಈ ವಿಜಯಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಪಾಕ್​ ನಾಯಕನನ್ನು ಹಳಿದಿದ್ದಾರೆ. ಭಾರತದಲ್ಲಿ ಕೀವಿಸ್​ ಎರಡು ಪಂದ್ಯದಲ್ಲಿ ಸೋತು ಸರಣಿ ಕೈಚೆಲ್ಲಿದ ನಂತರ ಪಾಕ್​ನ ಹಿರಿಯ ಕ್ರಿಕೆಟಿಗ ಪಾಕಿಸ್ತಾನ ತಂಡಕ್ಕೆ ಹಿಡಿಶಾಪ ಹಾಕಿದ್ದಾರೆ. ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ನಾಯಕ ಬಾಬರ್ ಆಜಂ ವಿರುದ್ಧ ಕಿಡಿಕಾರಿದ್ದಾರೆ. ಅರೆ ಭಾರತ ಗೆಲ್ಲುವುದಕ್ಕೂ ಪಾಕ್​ ನಾಯಕನಿಗೂ ಏನು ಸಂಬಂಧ ಎಂಬ ಪ್ರಶ್ನೆ ಹುಟ್ಟದೇ ಇರದು. ಇದಕ್ಕೆ ಕಾರಣ ನ್ಯೂಜಿಲ್ಯಾಂಡ್​ ಭಾರತ ಪ್ರಸಾಕ್ಕೂ ಮೊದಲು ಪಾಕಿಸ್ತಾನದಲ್ಲಿ ಪಂದ್ಯಗಳನ್ನಾಡಿತ್ತು. ಇದರಲ್ಲಿ ಪಾಕ್​ ಸರಣಿ ಸೋತಿತ್ತು. ಇದರಿಂದ ಮಾಜಿ ಕ್ರಿಕೆಟಿಗ ಭಾರತದ ಬ್ಯಾಟಿಂಗ್​ನ್ನು ಹೊಗಳಿದ್ದು, ಪಾಕ್​ ನಾಯಕನಿಗೆ ಬ್ಯಾಟಿಂಗ್​ ಬಗ್ಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಡ್ಯಾನಿಶ್ ಕನೇರಿಯಾ ಹೇಳಿದ್ದೇನು?: ಪಾಕ್​ ಬ್ಯಾಟರ್​ಗಳು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ತಂಡದ ಸೋಲಿಗೆ ತಂಡದ ಬ್ಯಾಟರ್​ಗಳೇ ಕಾರಣ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಟಿ20 ನಾಯಕತ್ವದ ಬಗ್ಗೆ ಯೋಚಿಸಬೇಕಾಗಿದೆ. ಬಾಬರ್ ಆಜಂ ನಾಯಕತ್ವ ವಹಿಸಿಕೊಂಡ ನಂತರ ನಾಯಕನ ಜವಾಬ್ದಾರಿಯನ್ನು ಯಾರಿಗೆ ನೀಡಲಾಗುವುದು? ಪಾಕಿಸ್ತಾನ ತಂಡ ಏಕದಿನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ತಮ್ಮ ದೇಶದ ತಂಡವನ್ನು ತೀವ್ರವಾಗಿ ಟೀಕಿಸಿದ್ದಾರೆ.

ತವರಿನಲ್ಲಿ ಸತತ ಸರಣಿ ಸೋಲು: ಪಾಕಿಸ್ತಾನ ತವರಿನಲ್ಲಿ ಹೋದ ವರ್ಷದಿಂದ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುತ್ತಿದೆ. ಸುಮಾರು 12 ವರ್ಷಗಳ ನಂತರ ಪಾಕ್​ನಲ್ಲಿ ಅಂತಾರಾಷ್ಟ್ರೀಯ ಸರಣಿಗಳು ಆರಂಭವಾಗಿದ್ದವು. 2009ರಲ್ಲಿ ಶ್ರೀಲಂಕಾ ಕ್ರಿಕೆಟ್​ ತಂಡದ ಸದಸ್ಯರಿರುವ ಬಸ್ ಮೇಲೆ ಉಗ್ರರ ದಾಳಿ ಮಾಡಿದ ನಂತರ ಯಾವುದೇ ದೇಶ, ಪಾಕ್​ ನೆಲದಲ್ಲಿ ದ್ವೀಪಕ್ಷೀಯ ಸರಣಿ ಆಡಿರಲ್ಲಿಲ್ಲ. ಕಳೆದ ವರ್ಷ ಇಂಗ್ಲೆಂಡ್​ ಪಾಕ್​ಗೆ ಹೋಗುವ ಮೂಲಕ ನಿರ್ಬಂದಕ್ಕೆ ಕೊನೆ ಹಾಡಿತ್ತು.

2022ರ ಸೆಪ್ಟೆಂಬರ್ ರಿಂದ ಡಿಸೆಂಬರ್​ವರೆಗೆ 7 ಟಿ-20 ಮತ್ತು 3 ಟೆಸ್ಟ್​ನ ಎರಡು ಸರಣಿಯನ್ನು ಇಂಗ್ಲೆಂಡ್​ ಪಾಕ್​ನಲ್ಲಿ ಆಡಿತ್ತು. ಬ್ರಿಟಿಷರು 4 ಟಿ-20 ಪಂದ್ಯಗಳನ್ನು ಗೆದ್ದು ಸರಣಿ ಜಯಿಸಿ, ಟೆಸ್ಟ್​ನಲ್ಲಿ ಕ್ಲೀನ್​​ ಸ್ವೀಪ್​ ಸಾಧನೆ ಮಾಡಿದ್ದರು. ನಂತರ ಪಾಕ್​ಗೆ ಕಿವೀಸ್​ ಪ್ರವಾಸ ಬೆಳೆಸಿತ್ತು. ಎರಡೂ ಟೆಸ್ಟ್​ ಪಂದ್ಯಗಳು​​ ಡ್ರಾನಲ್ಲಿ ಅಂತ್ಯವಾದರೆ, ಟಿ-20 ಸರಣಿ ಬ್ಲಾಕ್​ಕ್ಯಾಪ್ಸ್​ ವಶವಾಗಿತ್ತು. ಹಲವು ವರ್ಷಗಳ ನಂತರ ತವರು ನೆಲದಲ್ಲಿ ಪಂದ್ಯಗಳನ್ನಾಡಿದರೂ ಸರಣಿ ಗೆಲ್ಲಲು ಆಗದಿರುವುದು ಹಿರಿಯ ಕ್ರಿಕೆಟಿಗರ ಟೀಕೆಗೆ ಕಾರಣವಾಗಿದೆ.

ಇದರ ನಡುವೆ ಪಾಕಿಸ್ತಾನದಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾ ಕಪ್​ ಕೂಡ ನಡೆಯಲಿದ್ದು, ತವರಿನಲ್ಲಿ ತಂಡ ಸೋಲನುಭವಿಸುತ್ತಿರುವುದನ್ನು ಕಂಡ ಮಾಜಿ ಆಟಗಾರರು, ಪ್ರಸ್ತುತ ಪಾಕ್​ ಆಟಗಾರರನ್ನು ಹಳಿಯುತ್ತಿದ್ದಾರೆ. ಅಲ್ಲದೇ ಇದೇ ವರ್ಷ ಏಕದಿನ ವಿಶ್ವಕಪ್​ ಇದ್ದು ಬ್ಯಾಟರ್​ಗಳ ಪ್ರದರ್ಶನಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಬಾಬರ್​ ಆಜಂ​ ಮತ್ತು ರಿಜ್ವಾನ್​ ಬಿಟ್ಟು ಬಾಕಿ ಆಟಗಾರರು ಸ್ಥಿರ ಪ್ರದರ್ಶನ ತೋರದಿರುವುದು ಟೀಕೆಗೆ ಕಾರಣವಾಗಿದೆ.

ತಮ್ಮ ಪಿಚ್‌ಗಳಲ್ಲಿ ಸೋಲುತ್ತಿರುವ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಯಾವ ಆಟಗಾರನೂ ಪಂದ್ಯವನ್ನು ಗೆಲ್ಲುತ್ತಿಲ್ಲ. ಪಾಕಿಸ್ತಾನದ ಆಟಗಾರರು ತಮ್ಮದೇ ಪಿಚ್‌ಗಳಲ್ಲಿ ಸೋಲುತ್ತಿದ್ದಾರೆ. ಭಾರತವು ತನ್ನ ನೆಲದ ಅಂಗಳಗಳ ಪ್ರಯೋಜನವನ್ನು ಮಿಸ್​ ಮಾಡದೇ ಬಳಸಿಕೊಳ್ಳುತ್ತಿದೆ. ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ತಮ್ಮ ಬೆಂಚ್ ಸಾಮರ್ಥ್ಯ ಪರೀಕ್ಷಿಸುವ ಅವಕಾಶವಿದೆ ಎಂದು ಡ್ಯಾನಿಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಆರು ವರ್ಷಗಳ ಬಳಿಕ ಈ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ.. ಈ ಮ್ಯಾಚ್​ ಗೆದ್ದು ಅಗ್ರಸ್ಥಾನಕ್ಕೇರುವುದೇ ಭಾರತ!

Last Updated :Jan 23, 2023, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.