ETV Bharat / sports

ತಾಯ್ನಾಡಿಗೆ ಕಾಲಿಡುತ್ತಲೇ ಏರ್​​ಪೋರ್ಟ್​​ನಲ್ಲಿ ಪಾಂಡ್ಯ ಗಲಿಬಿಲಿ...5 ಕೋಟಿ ಮೌಲ್ಯದ 2 ವಾಚ್​ ಜಪ್ತಿ!

author img

By

Published : Nov 16, 2021, 10:31 AM IST

Updated : Nov 16, 2021, 11:47 AM IST

ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅವರ ಬಳಿಯಿಂದ ಮುಂಬೈ ಕಸ್ಟಂ ಅಧಿಕಾರಿಗಳು ಎರಡು ಐಷಾರಾಮಿ ಕೈಗಡಿಯಾರಗಳನ್ನು ಜಪ್ತಿ ಮಾಡಿದ್ದು, ಹಾರ್ದಿಕ್ ಪಾಂಡ್ಯ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

Customs Department seized two wrist watches worth Rs 5 crores of cricketer Hardik Pandya
ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಂದ ಮುಂಬೈ ಏರ್​ಪೋರ್ಟ್​ನಲ್ಲಿ ಎರಡು ಐಷಾರಾಮಿ ವಾಚ್​ ಜಪ್ತಿ

ಮುಂಬೈ: ಟಿ-20 ವಿಶ್ವಕಪ್​ನಲ್ಲಿ ಪರಾಭವಗೊಂಡ ನಂತರ ಟೀಂ ಇಂಡಿಯಾ ಆಟಗಾರರು ದುಬೈನಿಂದ ತವರಿಗೆ ಮರಳುತ್ತಿದ್ದಾರೆ. ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ಭಾನುವಾರ ಆಗಮಿಸಿದ್ದು, ಅವರ ಬಳಿಯಿದ್ದ ಎರಡು ಐಷಾರಾಮಿ ಕೈಗಡಿಯಾರಗಳನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಭಾನುವಾರ ರಾತ್ರಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Chhatrapati Shivaji Maharaj International Airport) ಹಾರ್ದಿಕ್ ಪಾಂಡ್ಯ ಬಂದಿಳಿದಿದ್ದರು. ಈ ವೇಳೆ, ಅವರ ಬಳಿಯಿದ್ದ ಪತೆಕ್ ಫಿಲಿಪ್ (Patek Philippe) ಕಂಪನಿಯ ಎರಡು ವಾಚ್​ಗಳನ್ನು ಸರಿಯಾದ ದಾಖಲೆಗಳಿಲ್ಲದ ಕಾರಣಕ್ಕೆ ಜಪ್ತಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ವಾಚ್​ನ ಸೀರಿಯಲ್ ನಂಬರ್​ಗಳು ಹೋಲಿಕೆಯಾಗಲಿಲ್ಲ ಎಂದು ಹೇಳಲಾಗುತ್ತಿದ್ದು, ಒಂದು ವಾಚ್​ನ ಬೆಲೆ ಐದು ಕೋಟಿ ರೂಪಾಯಿ ಎನ್ನಲಾಗುತ್ತಿದ್ದು, ಅದರ ಬೆಲೆ 1.8 ಕೋಟಿ ಎಂದು ಹಾರ್ದಿಕ್ ಪಾಂಡ್ಯ ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದರ ಬೆಲೆ 1.5 ಕೋಟಿ ಎನ್ನಲಾಗಿದೆ. ಇದಕ್ಕೂ ಮೊದಲು ಇಂಥದ್ದೇ ಕಂಪನಿಯ ವಾಚ್ ಇತ್ತು ಎಂದು ವರದಿಗಳು ಹೇಳಿವೆ.

ಹಾರ್ದಿಕ್ ಪ್ರತಿಕ್ರಿಯೆ: ನಾನು ಕಾನೂನುಬದ್ಧವಾಗಿ ವಾಚ್​ಗಳನ್ನು ಖರೀದಿ ಮಾಡಿದ್ದೇನೆ ಎಂದಿರುವ ಹಾರ್ದಿಕ್ ಪಾಂಡ್ಯ ವಾಚ್​ನ ಬೆಲೆ 1.5 ಕೋಟಿ ಎಂದಿದ್ದಾರೆ. ನಾನು ತೆರಿಗೆ ಪಾವತಿಸಲು ಸಿದ್ಧನಿದ್ದೇನೆ ಎಂದು ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಒಂದು ವೇಳೆ ದಾಖಲೆಗಳನ್ನು ನೀಡಲು ಹಾರ್ದಿಕ್ ಪಾಂಡ್ಯ ವಿಫಲರಾದರೆ ಅವುಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಮುಂಬೈ ಕಸ್ಟಂ ಅಧಿಕಾರಿಗಳು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Annaatthe: ಭರವಸೆ ನೀಡಿದಂತೆ ಹಿಟ್ ಚಿತ್ರ ನೀಡಿದ್ದಾರೆ: 'ಅಣ್ಣಾತ್ತೆ' ನಿರ್ದೇಶಕರನ್ನು ಹಾಡಿ ಹೊಗಳಿದ ತಲೈವಾ

Last Updated : Nov 16, 2021, 11:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.