ETV Bharat / sports

ಭಾರತದ ಟಾಪ್​ ಕ್ಲಾಸ್​ ಸ್ಪಿನ್ ನಮ್ಮನ್ನು ಕಟ್ಟಿಹಾಕಿತು, ಅವರೆದುರು ನಮ್ಮ ಆಟ ನಡೆಯಲಿಲ್ಲ: ಸ್ಟೀವ್ ಸ್ಮಿತ್

author img

By ETV Bharat Karnataka Team

Published : Oct 9, 2023, 4:33 PM IST

ಚೆಪಾಕ್​ ಸ್ಪಿನ್​ ಸ್ನೇಹಿ ಪಿಚ್​ ಎಂಬುದು ಹಲವು ದಶಕಗಳ ಹಿಂದೆಯೇ ದಾಖಲಾಗಿದೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಅದನ್ನು ಮತ್ತೆ ಸಾಬೀತು ಮಾಡಿದೆ.

Steve Smith
Steve Smith

​ಚೆನ್ನೈ (ತಮಿಳುನಾಡು): ವಿಶ್ವಕಪ್​ನ ಭಾರತದ ಮೊದಲ ಪಂದ್ಯದಲ್ಲಿ 6 ವಿಕೆಟ್​ನ ಸ್ವಾರಸ್ಯಕರ ಗೆಲುವನ್ನು ಪಡೆದುಕೊಂಡಿತು. ಪಂದ್ಯದ ವೇಳೆ ಆಸ್ಟ್ರೇಲಿಯನ್​ ಅಭಿಮಾನಿಗಳು ಭಾರತದ ಪಿಚ್​ನ್ನು ಹಳಿದರು. ಅವರಿಗೆ ಬೇಕಾದ ರೀತಿಯ ಪಿಚ್​ಗಳನ್ನು ಮಾಡಿ ಪಂದ್ಯಗಳನ್ನು ಆಡಿಸುತ್ತಿದ್ದಾರೆ ಎಂಬುದು ಕಾಂಗರೂ ಪಡೆಯ ಬೆಂಬಲಿಗರ ಆರೋಪವಾಗಿತ್ತು. ಆದರೆ ಆಸ್ಟ್ರೇಲಿಯಾದ ಆಟಗಾರರು ಟೀಮ್​ ಇಂಡಿಯಾದ ಪ್ರದರ್ಶನಕ್ಕೆ ಮೆಚ್ಚುಗೆ ಸಲ್ಲಿಸಿದ್ದಾರೆ.

ಆಸ್ಟ್ರೇಲಿಯಾವನ್ನು ಚೆನ್ನೈನಲ್ಲಿ ಭಾರತದ ತ್ರಿವಳಿ ಸ್ಪಿನ್​ ದಾಳಿ ಕಾಡಿತು. ಅದರಲ್ಲೂ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್​​ ಯಾದವ್​ ಸ್ಪಿನ್​ಗೆ ಆಸಿಸ್​ನ ಪ್ರಮುಖ ವಿಕೆಟ್​ಗಳು ಪತನವಾದವು. ಇದರಿಂದ ಆಸ್ಟ್ರೇಲಿಯಾ 49.3 ಓವರ್​ನಲ್ಲಿ 199ಕ್ಕೆ ಆಲ್​ ಔಟ್​ ಆಯಿತು. 200 ರನ್​ನ ಗುರಿಯನ್ನು ಟೀಮ್​ ಇಂಡಿಯಾ ನಿಧಾನ ಗತಿಯಲ್ಲೇ ವಿರಾಟ್​ ಕೊಹ್ಲಿ ಮತ್ತು ಕೆ ಎಲ್​ ರಾಹುಲ್​ ಅವರ ಬ್ಯಾಟಿಂಗ್​ ಆಧಾರದಿಂದ ಗೆದ್ದುಕೊಂಡಿತು.

"ಟೀಮ್​ ಇಂಡಿಯಾದ ಎಲ್ಲಾ ಸ್ಪಿನ್ನರ್‌ಗಳು ನಿಜವಾಗಿಯೂ ಸೊಗಸಾಗಿ ಬೌಲಿಂಗ್​ ಮಾಡಿದರು. ನಿಸ್ಸಂಶಯವಾಗಿ ಅವರಿಗೆ ಸರಿಹೊಂದುವ ವಿಕೆಟ್ ಕೂಡ ಇತ್ತು. ಅವರೆಲ್ಲರೂ ಉತ್ತಮ ಗುಣಮಟ್ಟದ ಸ್ಪಿನ್ನರ್‌ಗಳಾಗಿರುವುದರಿಂದ ಅವರ ಬಾಲ್​ಗೆ ಬ್ಯಾಟ್​​ ಮಾಡುವುದು ಸವಾಲಾಗಿತ್ತು. ಅವರು ಚೆನ್ನಾಗಿ ಬೌಲಿಂಗ್​ನ್ನು ನಿಭಾಯಿಸಿದರು. ನಮಗೆ ಪಂದ್ಯದನ್ನು ಕಮ್​​​ಬ್ಯಾಕ್​ ಮಾಡಲು ಸಾಧ್ಯವಾಗಲಿಲ್ಲ" ಎಂದು ಸ್ಟೀವ್ ಸ್ಮಿತ್ ಹೇಳಿದರು.

ಪಂದ್ಯದಲ್ಲಿ ಸ್ಮಿತ್​ ಮತ್ತು ಅನುಭವಿ ವಾರ್ನರ್​ ಮಾತ್ರ 40 ಗಡಿ ದಾಟಿ ಬ್ಯಾಟಿಂಗ್​ ಮಾಡಿದರು. ಈ ಇಬ್ಬರು ಅರ್ಧಶತಕದ ಜೊತೆಯಾಟ ಮಾಡಿದರು. ಸ್ಮಿತ್​ 46 ರನ್​ ಗಳಿಸಿದರೆ, ವಾರ್ನರ್​ 41 ರನ್​ ಕಲೆಹಾಕಿದ್ದರು. ಇವರ ರನ್​ ಸಹಾಯದಿಂದ 199 ರನ್​ ಗುರಿ ನೀಡಲು ಸಾಧ್ಯವಾಯಿತು. ಇಬ್ಬರು ಅನುಭವಿಗಳು ಭಾರತೀಯ ಸ್ಪಿನ್ನರ್​ಗಳನ್ನು ತಾಳ್ಮೆಯಿಂದ ಎದುರಿಸಿದರೂ, ಜಡೇಜಾ, ಕುಲ್ದೀಪ್​ ಸ್ಪಿನ್​ಗೆ ವಿಕೆಟ್ ಒಪ್ಪಿಸಿದರು.

ಸ್ಮಿತ್​ ಕೂಡ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ವಿರಾಟ್​ ಮತ್ತು ರಾಹುಲ್​ ಉತ್ತಮವಾಗಿ ಆಡಿದರು. ಕೊಹ್ಲಿ ಅವರ ಕ್ಯಾಚ್​ ಕೈತಪ್ಪಿದ್ದು ದುರಾದೃಷ್ಟ. ವಿರಾಟ್ ಮತ್ತು ರಾಹುಲ್ ಸಾಕಷ್ಟು ಶಾಂತತೆಯಿಂದ ಆಡಿದರು. ಅವರು ನಿಜವಾಗಿಯೂ ಸ್ಮಾರ್ಟ್ ಕ್ರಿಕೆಟ್ ಆಡಿದರು. ಕೇವಲ 200 ಅನ್ನು ಬೆನ್ನಟ್ಟುತ್ತಿದ್ದರಿಂದ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಮೂರು ವಿಕೆಟ್​ ಪತನದ ನಂತರವೂ ಅವರು ಕಟ್ಟಿದ ಇನ್ನಿಂಗ್ಸ್​​ ಮೆಚ್ಚುವಂತಹದ್ದು" ಎಂದಿದ್ದಾರೆ.

ಚೆಪಾಕ್​ ವಿಕೆಟ್​ನ್ನು ಒಂದು ಟ್ರಿಕಿ ವಿಕೆಟ್ ಎಂದು ಸ್ಮಿತ್​ ವ್ಯಾಖ್ಯಾನಿಸಿದರು. "ಇದು ಸವಾಲಿನ ವಿಕೆಟ್ ಆಗಿತ್ತು ಮತ್ತು ಸೀಮ್ ಬೌಲರ್‌ಗಳಿಗೆ ಸ್ವಿಂಗ್​ ಆಗುತ್ತಿತ್ತು. ಜೊತೆಗೆ ಸ್ಪಿನ್ ಬೌಲರ್​ಗಳು ಇಲ್ಲಿ ಯಶಸ್ವಿ ಆಗುವುದನ್ನು ನಾವು ನೋಡಿದ್ದೇವೆ. ನಿಸ್ಸಂಶಯವಾಗಿ ವಿಕೆಟ್​ ಕಷ್ಟಕರವಾಗಿತ್ತು. 200 ರನ್​ ಸ್ವಲ್ಪ ಕಡಿಮೆ ಮೊತ್ತ, 250 ಗುರಿ ಪಿಚ್​ಗೆ ಸ್ಪರ್ಧಾತ್ಮಕವಾಗಿತ್ತು. ಸಂಜೆಯ ವೇಳೆಗೆ ಮಂಜು ಬಿದ್ದದ್ದು ಬ್ಯಾಟಿಂಗ್​ಗೆ ಸ್ವಲ್ಪ ಸಹಾಯ ಮಾಡಿದೆ. ಆದರೆ ನಾವು ನಾಲ್ಕನೇ ವಿಕೆಟ್​ ಬೇಗ ಪಡೆದಿದ್ದರೆ ಉತ್ತಮವಾಗಿತ್ತು" ಎಂದು ಟಾಸ್​ ಗೆದ್ದು ಬ್ಯಾಟಿಂಗ್​ ಮೊದಲು ಮಾಡಿದ್ದು ಸೋಲಿಗೆ ಇನ್ನೊಂದು ಕಾರಣ ಎಂಬಂತೆ ಹೇಳಿದರು.

ಮುಂದಿನ ಪಂದ್ಯದ ಬಗ್ಗೆ ಮಾತನಾಡಿದ ಸ್ಮಿತ್​, ದಕ್ಷಿಣ ಆಫ್ರಿಕಾ ದೆಹಲಿ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿ ಬೃಹತ್​ ಮೊತ್ತವನ್ನು ಕಲೆಹಾಕಿದೆ. ಲಕ್ನೋದ ಪಿಚ್​ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಕುತೂಹಲವಿದೆ. ಪಂದ್ಯದ ವೇಳೆಗೆ ಮಾರ್ಕಸ್​ ಸ್ಟೋಯ್ನಿಸ್​ ಚೇತರಿಸಿಕೊಂಡರೆ ತಂಡಕ್ಕೆ ಮರಳುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: Cricket World Cup: ಡಚ್ಚರ ವಿರುದ್ಧ ಗೆಲುವಿಗಾಗಿ ಕಾತರದಿಂದ ಕಾಯುತ್ತಿರುವ ನ್ಯೂಜಿಲೆಂಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.