ICC Test Rankings : ಕೇನ್ ವಿಲಿಯಮ್ಸನ್ ಅಗ್ರಸ್ಥಾನ, ಟಾಪ್-10ನಲ್ಲಿ ಮೂವರು ಭಾರತೀಯರು

author img

By

Published : Aug 18, 2021, 5:09 PM IST

ICC Test Rankings

ಪಾಕಿಸ್ತಾನದ ವಿರುದ್ಧ ಒಂದು ವಿಕೆಟ್ ಜಯಿಸಿದ ವೆಸ್ಟ್ ಇಂಡೀಸ್ ಗೆ, ಜೆರ್ಮೈನ್ ಬ್ಲ್ಯಾಕ್ ವುಡ್ 22 ಮತ್ತು 55 ಪಡೆದ ನಂತರ ಒಂಬತ್ತು ಸ್ಥಾನಗಳನ್ನು ಗಳಿಸಿ 35ನೇ ಸ್ಥಾನವನ್ನು ತಲುಪಿದರು. ಆಲ್ರೌಂಡರ್ ಜೇಸನ್ ಹೋಲ್ಡರ್ ಐದು ಸ್ಥಾನ ಮೇಲಕ್ಕೇರಿ 43ನೇ ಸ್ಥಾನದಲ್ಲಿದ್ದಾರೆ. ನಾಯಕ ಕ್ರೇಗ್ ಬ್ರಾಥ್ ವೈಟ್ ಮೊದಲ ಇನ್ನಿಂಗ್ಸ್​ನಲ್ಲಿ ಮೂರು ರನ್ ಗಳಿಸಿ ಶತಕ ವಂಚಿತರಾಗಿದ್ದು, 18 ಸ್ಥಾನಗಳ ಮುನ್ನಡೆ ಸಾಧಿಸಿ 45ನೇ ಸ್ಥಾನದಲ್ಲಿದ್ದಾರೆ..

ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನೂತನ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯನ್ನು (ICC Test Rankings) ಪ್ರಕಟಿಸಿದೆ. ಭಾರತ-ಇಂಗ್ಲೆಂಡ್ ನಡುವಣ ಲಾರ್ಡ್ಸ್ ಟೆಸ್ಟ್ ಫಲಿತಾಂಶದ ಬೆನ್ನಲ್ಲೇ ಹೊಸ ಐಸಿಸಿ ಟೆಸ್ಟ್​ ಬ್ಯಾಟಿಂಗ್ ರ‍್ಯಾಂಕ್ಪಟ್ಟಿ ಪ್ರಕಟಗೊಂಡಿದೆ.

ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತಮ್ಮ ಐದನೇ ಮತ್ತು ಆರನೇ ಸ್ಥಾನದಲ್ಲಿ ದೃಢವಾಗಿ ಉಳಿದಿದ್ದಾರೆ. ಆದರೆ, ಇಂಗ್ಲೆಂಡ್ ನಾಯಕ ಜೋ ರೂಟ್ ಎರಡು ಸ್ಥಾನ ಮೇಲೆಕ್ಕೇರಿದ್ದು, ಐಸಿಸಿ ಪುರುಷರ ಟೆಸ್ಟ್ ಆಟಗಾರರ ಶ್ರೇಯಾಂಕದಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

ಈ ಬಾರಿ ಕೂಡ ಟೆಸ್ಟ್ ರ್ಯಾಂಕಿಂಗ್​ ಪಟ್ಟಿಯಲ್ಲಿ 901 ಅಂಕ ಪಡೆಯುವ ಮೂಲಕ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಯಶಸ್ವಿಯಾಗಿದ್ದಾರೆ. ಒಂದು ಸ್ಥಾನ ಇಳಿಕೆ ಕಂಡಿರುವ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್ 891 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

5ನೇ ಸ್ಥಾನದಲ್ಲಿ 776 ಅಂಕಗಳೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದ್ದು, ಕಳೆದ ಬಾರಿಯ ರ್ಯಾಂಕಿಂಗ್ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 6ನೇ ಸ್ಥಾನದಲ್ಲಿ ರೋಹಿತ್​ ಶರ್ಮಾ ಇದ್ದು, 7ನೇ ಸ್ಥಾನದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್, ಬ್ಯಾಟ್ಸ್​ಮನ್ ರಿಷಭ್ ಪಂತ್ ಇದ್ದಾರೆ.

8ನೇ ಸ್ಥಾನದಲ್ಲಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ, 9ನೇ ಸ್ಥಾನ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಟಾಪ್-10ನಲ್ಲಿ ಅಂತಿಮ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್​ಮನ್ ಕ್ವಿಂಟನ್ ಡಿ ಕಾಕ್ ಇದ್ದಾರೆ.

ರೂಟ್, ಈ ಹಿಂದೆ ಅಗ್ರ ಶ್ರೇಯಾಂಕಿತ ಬ್ಯಾಟರ್ ಆಗಿದ್ದು, 893 ರೇಟಿಂಗ್ ಪಾಯಿಂಟ್‌ಗಳಲ್ಲಿದ್ದಾರೆ. ಕಿವಿ ನಾಯಕ ವಿಲಿಯಮ್ಸನ್​ಗಿಂತ ಕೇವಲ ಎಂಟು ಅಂಕ ಕಡಿಮೆ. ಪಂದ್ಯದ ಆಟಗಾರ ಕೆ ಎಲ್ ರಾಹುಲ್ ಭಾರತಕ್ಕೆ 151ರನ್ ಜಯ ಮತ್ತು ಐದು ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲು ಸಹಾಯ ಮಾಡಿದರು.

29 ವರ್ಷದ ಓಪನರ್ ಕೆ ಎಲ್ ರಾಹುಲ್, ಅವರ ವೃತ್ತಿಜೀವನದ ಅತ್ಯುತ್ತಮ ಎಂಟನೇ ಸ್ಥಾನವನ್ನು ನವೆಂಬರ್ 2017ರಲ್ಲಿ ಪಡೆದಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 129 ರನ್ ಗಳಿಸುವ ಮೂಲಕ 19ನೇ ಸ್ಥಾನಗಳನ್ನು ಗಳಿಸಿ 37ನೇ ಸ್ಥಾನವನ್ನು ತಲುಪಿದ್ದಾರೆ.

ಲಾರ್ಡ್ಸ್ ಟೆಸ್ಟ್‌ನಿಂದ ಲಾಭ ಪಡೆದ ಬೌಲರ್​ಗಳು : ಲಾರ್ಡ್ಸ್ ಟೆಸ್ಟ್‌ನಿಂದ ಲಾಭ ಪಡೆಯುವ ಬೌಲರ್‌ಗಳಲ್ಲಿ ಜೇಮ್ಸ್ ಆಂಡರ್ಸನ್ ಸೇರಿದ್ದಾರೆ ಮತ್ತು ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿದ ನಂತರ ಆರನೇ ಸ್ಥಾನದಲ್ಲಿದ್ದಾರೆ ಮತ್ತು ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಮತ್ತು ಭಾರತದ ಮೊಹಮ್ಮದ್ ಸಿರಾಜ್ ಕ್ರಮವಾಗಿ 37 ಮತ್ತು 38ನೇ ಸ್ಥಾನಗಳನ್ನು ತಲುಪಲು ಗಮನಾರ್ಹ ಲಾಭ ಗಳಿಸಿದ್ದಾರೆ.

ವುಡ್ ಪಂದ್ಯದಲ್ಲಿ ಐದು ವಿಕೆಟ್‌ಗಳೊಂದಿಗೆ ಐದು ಸ್ಲಾಟ್‌ಗಳನ್ನು ಗಳಿಸಿದ್ದಾರೆ ಮತ್ತು ಪ್ರತಿ ಇನ್ನಿಂಗ್ಸ್‌ನಲ್ಲಿ ಸಿರಾಜ್ ಅವರ ನಾಲ್ಕು ವಿಕೆಟ್‌ಗಳಿಂದ 18 ಸ್ಥಾನಗಳನ್ನು ಗಳಿಸಿದ್ದಾರೆ. ಕಿಂಗ್‌ಸ್ಟನ್‌ನಲ್ಲಿ ಮೊದಲ ಟೆಸ್ಟ್‌ನಲ್ಲಿನ ಪ್ರದರ್ಶನಗಳನ್ನು ಒಳಗೊಂಡ ಇತ್ತೀಚಿನ ಸಾಪ್ತಾಹಿಕ ಅಪ್‌ಡೇಟ್‌ನಲ್ಲಿ, ಪಾಕಿಸ್ತಾನದ ನಾಯಕ ಬಾಬರ್ ಅಜಮ್ 30 ಮತ್ತು 55ರ ಸ್ಕೋರ್‌ಗಳ ನಂತರ ಬ್ಯಾಟರ್‌ಗಳಲ್ಲಿ 2 ಸ್ಥಾನಗಳನ್ನು ಏರಿಕೆಯಾಗಿ 7ನೇ ಸ್ಥಾನದಲ್ಲಿದ್ದಾರೆ. ಫಹೀಮ್ ಅಶ್ರಫ್ ಮತ್ತು ಫವಾದ್ ಆಲಂ ತಲಾ ನಾಲ್ಕು ಸ್ಲಾಟ್‌ಗಳನ್ನು ಏರಿಕೆಯಾಗಿ ಕ್ರಮವಾಗಿ 48ನೇ ಸ್ಥಾನಕ್ಕೆ ಮತ್ತು 55ನೇ ಸ್ಥಾನ ತಲುಪಿದ್ದಾರೆ.

ಪಾಕಿಸ್ತಾನದ ವಿರುದ್ಧ ಒಂದು ವಿಕೆಟ್ ಜಯಿಸಿದ ವೆಸ್ಟ್ ಇಂಡೀಸ್ ಗೆ, ಜೆರ್ಮೈನ್ ಬ್ಲ್ಯಾಕ್ ವುಡ್ 22 ಮತ್ತು 55 ಪಡೆದ ನಂತರ ಒಂಬತ್ತು ಸ್ಥಾನಗಳನ್ನು ಗಳಿಸಿ 35ನೇ ಸ್ಥಾನವನ್ನು ತಲುಪಿದರು. ಆಲ್ರೌಂಡರ್ ಜೇಸನ್ ಹೋಲ್ಡರ್ ಐದು ಸ್ಥಾನ ಮೇಲಕ್ಕೇರಿ 43ನೇ ಸ್ಥಾನದಲ್ಲಿದ್ದಾರೆ. ನಾಯಕ ಕ್ರೇಗ್ ಬ್ರಾಥ್ ವೈಟ್ ಮೊದಲ ಇನ್ನಿಂಗ್ಸ್​ನಲ್ಲಿ ಮೂರು ರನ್ ಗಳಿಸಿ ಶತಕ ವಂಚಿತರಾಗಿದ್ದು, 18 ಸ್ಥಾನಗಳ ಮುನ್ನಡೆ ಸಾಧಿಸಿ 45ನೇ ಸ್ಥಾನದಲ್ಲಿದ್ದಾರೆ.

ಹೋಲ್ಡರ್ ಬೌಲರ್‌ಗಳ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಂದ್ಯದಲ್ಲಿ ಅವರು ಪಡೆದ ನಾಲ್ಕು ವಿಕೆಟ್‌ಗಳು ಅವರನ್ನು ಎರಡು ಸ್ಥಾನ ಅಂದ್ರೇ ಒಂಬತ್ತನೇ ಸ್ಥಾನಕ್ಕೆ ಏರಿಸಿದೆ. ವೇಗದ ಬೌಲರ್ ಜೇಡೆನ್ ಸೀಲ್ಸ್ ತನ್ನ ಎಂಟು ವಿಕೆಟ್ ಗಳಿಸಿದ ನಂತರ 39 ಸ್ಥಾನಗಳನ್ನು ಏರಿಸಿಕೊಂಡು 58ನೇ ಸ್ಥಾನಕ್ಕೇರಿದ್ದು, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕೆಮರ್ ರೋಚ್ ಎರಡು ಸ್ಥಾನ ಮೇಲಕ್ಕೇರಿ 11ನೇ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನದ ಪರವಾಗಿ, ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ಪ್ರತಿ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ನಂತರ ನಾಲ್ಕು ಸ್ಥಾನಗಳನ್ನು ಗಳಿಸಿ 18ನೇ ಸ್ಥಾನಕ್ಕೆ ತಲುಪಿದ್ದಾರೆ ಮತ್ತು ಫಹೀಮ್ ನಾಲ್ಕು ಸ್ಥಾನಗಳ ಏರಿಕೆಯೊಂದಿಗೆ 71ನೇ ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.