ETV Bharat / sports

ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆ... ಜೇಸನ್ ರಾಯ್ ಟೂರ್ನಿಯಿಂದ ಔಟ್..?

author img

By

Published : Jun 17, 2019, 9:57 PM IST

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಇದೀಗ ಮಂಡಿರಜ್ಜು(ಹ್ಯಾಮ್​​ಸ್ಟ್ರಿಂಗ್​) ನೋವಿನಿಂದ ಬಳಲುತ್ತಿದ್ದು ಈಗಾಗಲೇ ಮುಂಬರುವ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಜೇಸನ್ ರಾಯ್

ಲಂಡನ್​​: ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿ ಪಂದ್ಯದಿಂದ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಲಿದೆ. ಇದೀಗ ಆತಿಥೇಯ ತಂಡದ ಪ್ರಮುಖ ಆಟಗಾರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ತೀವ್ರ ಹಿನ್ನಡೆಯಾಗಿದೆ.

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಇದೀಗ ಮಂಡಿರಜ್ಜು(ಹ್ಯಾಮ್​​ಸ್ಟ್ರಿಂಗ್​) ನೋವಿನಿಂದ ಬಳಲುತ್ತಿದ್ದು ಈಗಾಗಲೇ ಮುಂಬರುವ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಶನಿವಾರ ಜೇಸನ್​ ರಾಯ್​ಗೆ ಎಮ್​ಆರ್​ಐ ಸ್ಕ್ಯಾನ್ ಮಾಡಲಾಗಿದ್ದು, ಟೂರ್ನಿಯಲ್ಲಿ ಆಡುವುದು ಅನುಮಾನ ಎನ್ನುವ ಮಾತುಗಳು ಕೇಳಿಬರುತ್ತಿವೆ.

Roy
ಜೇಸನ್ ರಾಯ್

ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಬ್ಯಾಟ್​ ಬೀಸಿದ್ದ ಜೇಸನ್ ರಾಯ್​​, ಒಂದು ಶತಕ ಹಾಗೂ ಒಂದು ಅರ್ಧಶತಕ ಬಾರಿಸಿದ್ದಾರೆ. ರಾಯ್​ ಉತ್ತಮ ಓಪನಿಂಗ್ ನೀಡುವ ಆಟಗಾರನಾಗಿರುವ ಕಾರಣದಿಂದ ಸದ್ಯದ ಬೆಳವಣಿಗೆ ಕಪ್​ ಗೆಲುವಿನ ನೆಚ್ಚಿನ ತಂಡಕ್ಕೆ ಬಹುದೊಡ್ಡ ಹಿನ್ನಡೆಯಾಗೋದ್ರಲ್ಲಿ ಸಂಶಯವಿಲ್ಲ. ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮಧ್ಯದಲ್ಲಿ ಜೇಸನ್ ರಾಯ್ ನೋವಿನಿಂದ ಮೈದಾನದಿಂದ ಹೊರನಡೆದಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ಎಂಟು ವಿಕೆಟ್​ಗಳ ಸುಲಭ ಜಯ ಸಾಧಿಸಿತ್ತು.

ಇಂಗ್ಲೆಂಡ್​ ಮಂಗಳವಾರದಂದು ಮ್ಯಾಂಚೆಸ್ಟರ್​​ನಲ್ಲಿ ದುರ್ಬಲ ಆಫ್ಘಾನಿಸ್ತಾನವನ್ನು ಎದುರಿಸಲಿದೆ. ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಮೂರು ಗೆದ್ದು ಒಂದು ಸೋತು ಒಟ್ಟಾರೆ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Intro:Body:

ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆ... ಜೇಸನ್ ರಾಯ್ ಟೂರ್ನಿಯಿಂದ ಔಟ್..?

ಲಂಡನ್​​: ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿ ಪಂದ್ಯದಿಂದ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಲಿದೆ. ಇದೀಗ ಆತಿಥೇಯ ತಂಡದ ಪ್ರಮುಖ ಆಟಗಾರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ತೀವ್ರ ಹಿನ್ನಡೆಯಾಗಿದೆ.

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಇದೀಗ ಮಂಡಿರಜ್ಜು(ಹ್ಯಾಮ್​​ಸ್ಟ್ರಿಂಗ್​) ನೋವಿನಿಂದ ಬಳಲುತ್ತಿದ್ದು ಈಗಾಗಲೇ ಮುಂಬರುವ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಶನಿವಾರ ಜೇಸನ್​ ರಾಯ್​ಗೆ ಎಮ್​ಆರ್​ಐ ಸ್ಕ್ಯಾನ್ ಮಾಡಲಾಗಿದ್ದು ಟೂರ್ನಿಯಲ್ಲಿ ಆಡುವುದು ಅನುಮಾನ ಎನ್ನುವ ಮಾತುಗಳು ಕೇಳಿಬರುತ್ತಿವೆ.

ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಬ್ಯಾಟ್​ ಬೀಸಿದ್ದ ಜೇಸನ್ ರಾಯ್​​, ಒಂದು ಶತಕ ಹಾಗೂ ಒಂದು ಅರ್ಧಶತಕ ಬಾರಿಸಿದ್ದಾರೆ. ರಾಯ್​ ಉತ್ತಮ ಓಪನಿಂಗ್ ನೀಡುವ ಆಟಗಾರನಾಗಿರುವ ಕಾರಣದಿಂದ ಸದ್ಯದ ಬೆಳವಣಿಗೆ ಕಪ್​ ಗೆಲುವಿನ  ನೆಚ್ಚಿನ ತಂಡಕ್ಕೆ ಬಹುದೊಡ್ಡ ಹಿನ್ನಡೆಯಾಗೋದ್ರಲ್ಲಿ ಸಂಶಯವಿಲ್ಲ.

ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮಧ್ಯದಲ್ಲಿ ಜೇಸನ್ ರಾಯ್ ನೋವಿನಿಂದ ಮೈದಾನದಿಂದ ಹೊರನಡೆದಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ಎಂಟು ವಿಕೆಟ್​ಗಳ ಸುಲಭ ಜಯ ಸಾಧಿಸಿತ್ತು.

ಇಂಗ್ಲೆಂಡ್​ ಮಂಗಳವಾರದಂದು ಮ್ಯಾಂಚೆಸ್ಟರ್​​ನಲ್ಲಿ ದುರ್ಬಲ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಮೂರು ಗೆದ್ದು ಒಂದು ಸೋತು ಒಟ್ಟಾರೆ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.