ETV Bharat / sports

ವಿಂಡೀಸ್​ -ಶ್ರೀಲಂಕಾ 1st ಟೆಸ್ಟ್​: ಮೊದಲ ಇನ್ನಿಂಗ್ಸ್​​ನಲ್ಲಿ 99 ರನ್​ ಮುನ್ನಡೆ ಸಾಧಿಸಿದ ವಿಂಡೀಸ್

author img

By

Published : Mar 23, 2021, 11:48 AM IST

ಎರಡನೇ ದಿನ ರಹಕೀಮ್ ಕೋರ್ನ್‌ವಾಲ್ (60) ಅರ್ಧಶತಕ ಸಿಡಿಸಿ ವೆಸ್ಟ್​ ಇಂಡೀಸ್​ ತಂಡಕ್ಕೆ ನೆರವಾದರು. ಎರಡನೇ ದಿನದ ಅಂತ್ಯದ ವೇಳೆಗೆ ವಿಂಡೀಸ್​ ತಂಡ 8 ವಿಕೆಟ್​ ಕಳೆದುಕೊಂಡು 268 ರನ್​ ಗಳಿಸಿದೆ.

ವಿಂಡೀಸ್​ -ಶ್ರೀಲಂಕಾ 1st ಟೆಸ್ಟ್​
ವಿಂಡೀಸ್​ -ಶ್ರೀಲಂಕಾ 1st ಟೆಸ್ಟ್​

ಆಂಟಿಗುವಾ: ವೆಸ್ಟ್ ಇಂಡೀಸ್‌-ಶ್ರೀಲಂಕಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಟೆಸ್ಟ್​ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ ಜೇಸನ್ ಹೋಲ್ಡರ್ ಬಿರುಸಿನ ದಾಳಿಗೆ ತತ್ತರಿಸಿದ್ದು, ಕೇವಲ 169 ರನ್​ಗಳಿಗೆ ಆಲೌಟ್​ ಆಗಿದೆ.

ಶ್ರೀಲಂಕಾ ತಂಡ ಮೊದಲ ದಿನವೇ ಕೇವಲ 169 ರನ್​ಗಳಿಗೆ ಸರ್ವಪತನ ಕಂಡಿದೆ. ಮೊದಲನೇ ದಿನದ ಅಂತ್ಯದ ವೇಳೆಗೆ ವೆಸ್ಟ್ ಇಂಡೀಸ್‌ ತಂಡ ಯಾವುದೇ ವಿಕೆಟ್​​ ಕಳೆದುಕೊಳ್ಳದೆ 13 ರನ್​ ಗಳಿಸಿತ್ತು. 2 ನೇ ದಿನದಂದು ಶ್ರೀಲಂಕಾ ವಿರುದ್ಧ 99 ರನ್‌ಗಳ ಮುನ್ನಡೆ ಸಾಧಿಸಿದೆ. ಎರಡನೇ ದಿನ ರಹಕೀಮ್ ಕೋರ್ನ್‌ವಾಲ್ (60) ಅರ್ಧಶತಕ ಸಿಡಿಸಿ ವೆಸ್ಟ್​ ಇಂಡೀಸ್​ ತಂಡಕ್ಕೆ ನೆರವಾದರು. ಎರಡನೇ ದಿನದಾಂತ್ಯದ ವೇಳೆಗೆ ವಿಂಡೀಸ್​ ತಂಡ 8 ವಿಕೆಟ್​ ಕಳೆದುಕೊಂಡು 268 ರನ್ ​ಗಳಿಸಿದೆ.

ಓದಿ : ವಿಂಡೀಸ್​ -ಶ್ರೀಲಂಕಾ 1st ಟೆಸ್ಟ್​ : ಹೋಲ್ಡರ್ ದಾಳಿಗೆ ತತ್ತರಿಸಿದ ಸಿಂಹಳಿಯರು

ಟಾಸ್​ ಸೋತು ಬ್ಯಾಟಿಂಗ್​ಗಿಳಿದ ಶ್ರೀಲಂಕಾ ತಂಡದ ಬ್ಯಾಟ್ಸ್​​ಮನ್​​ಗಳು ರನ್​ ಗಳಿಸಲು ಪರದಾಡಿದರು. ಲಹಿರು ತಿರಿಮನ್ನೆ (70) ಹಾಗೂ ನಿರೋಷನ್ ಡಿಕ್ವೆಲ್ಲಾ (32) ಬಿಟ್ಟರೆ ಬೇರೆ ಯಾವೊಬಬ್ ಬ್ಯಾಟ್ಸ್​ಮನ್​ಗಳು ಎರಡಂಕಿ ಮೊತ್ತ ದಾಟಲಿಲ್ಲ. ಸಂಘಟಿತ ದಾಳಿ ನಡೆಸಿದ ವೆಸ್ಟ್​ ಇಂಡೀಸ್​ ಬೌಲರ್​ಗಳು ಶ್ರೀಲಂಕಾ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಿದರು. ವೆಸ್ಟ್​ ಇಂಡೀಸ್​ ಪರ ಜೇಸನ್ ಹೋಲ್ಡರ್ 5 ವಿಕೆಟ್​ ಪಡೆದರೆ, ಕೆಮರ್ ರೋಚ್ ಮೂರು ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್​: ಶ್ರೀಲಂಕಾ 169 ಮೊದಲ ಇನ್ನಿಂಗ್ಸ್ (ಲಹಿರು ತಿರಿಮನ್ನೆ 70, ನಿರೋಷನ್ ಡಿಕ್ವೆಲ್ಲಾ 32, ಜೇಸನ್ ಹೋಲ್ಡರ್ 5/27), ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್​ 268/8 (ರಹಕೀಮ್ ಕಾರ್ನ್‌ವಾಲ್ 60 *, ಜೋಶುವಾ ಡ ಸಿಲ್ವಾ 46, ಸುರಂಗ ಲಕ್ಮಲ್ 5/45).

ETV Bharat Logo

Copyright © 2024 Ushodaya Enterprises Pvt. Ltd., All Rights Reserved.