ETV Bharat / sports

ಮೈದಾನದಲ್ಲಿ ಜಾಗಿಂಗ್ ಆರಂಭಿಸಿದ ಜಡೇಜಾ.. ಏಕದಿನ, ಟಿ-20 ಸರಣಿಗೆ ಕಮ್​ಬ್ಯಾಕ್​?

author img

By

Published : Mar 3, 2021, 11:53 AM IST

ಜನವರಿಯಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ 3 ನೇ ದಿನದಂದು ಬ್ಯಾಟಿಂಗ್ ಮಾಡುವಾಗ ಜಡೇಜಾ ಅವರ ಎಡಗೈ ಹೆಬ್ಬೆರಳಿಗೆ ಪೆಟ್ಟು ಬಿದ್ದಿತ್ತು. ನಂತರ ಅವರನ್ನ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ವಿಶ್ರಾಂತಿ ನೀಡಲಾಗಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದು, ಮೈದಾನದಲ್ಲಿ ಜಾಗಿಂಗ್​ ಆರಂಭಿಸಿದ್ದಾರೆ.

Ravindra Jadeja
ರವೀಂದ್ರ ಜಡೇಜಾ

ಹೈದರಾಬಾದ್: ಎಡಗೈ ಹೆಬ್ಬೆರಳು ಗಾಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ​ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಮೈದಾನದಲ್ಲಿ ಜಾಗಿಂಗ್​ ಮಾಡುವ ಮೂಲಕ ಮತ್ತೆ ತಂಡಕ್ಕೆ ಮರಳುವ ಮುನ್ಸೂಚನೆ ನೀಡಿದ್ದಾರೆ.

ಜನವರಿಯಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ 3 ನೇ ದಿನದಂದು ಬ್ಯಾಟಿಂಗ್ ಮಾಡುವಾಗ ಜಡೇಜಾ ಅವರ ಎಡಗೈ ಹೆಬ್ಬೆರಳಿಗೆ ಪೆಟ್ಟು ಬಿದ್ದಿತ್ತು. ನಂತರ ಅವರನ್ನ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ವಿಶ್ರಾಂತಿ ನೀಡಲಾಗಿತ್ತು.

"ಸರ್ಜರಿ ನಂತರ ಮೊದಲ ದಿನ ಬ್ಯಾಕ್​ ಆನ್​ ದಿ ಫೀಲ್ಡ್" ​​ ಎಂದು ಜಡೇಜಾ ಬರೆದುಕೊಂಡಿದ್ದಾರೆ. "ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ, ಶೀಘ್ರದಲ್ಲೇ ಅಬ್ಬರದಿಂದ ಮರಳುತ್ತೇನೆ." ಎಂದು ಟ್ವೀಟ್ ಮಾಡಿದ್ದಾರೆ.

ಓದಿ : ಸರಣಿ ಡ್ರಾ ಮಾಡಿಕೊಂಡರೆ ಅದು ನನ್ನ ಕ್ರಿಕೆಟ್​ ಜೀವನದ ಅತ್ಯುತ್ತಮ ಸಾಧನೆ: ರೂಟ್ ​

ಪ್ರಸ್ತುತ ನಾಲ್ಕು ಟೆಸ್ಟ್​​ ಪಂದ್ಯಗಳ​ ಸರಣಿಯಲ್ಲಿ ಭಾರತ ತಂಡ 2-1 ರಿಂದ ಮುನ್ನಡೆ ಸಾಧಿಸಿದೆ. ನಾಳೆಯಿಂದ ಅಂತಿಮ ಹಾಗೂ ನಾಲ್ಕನೇ ಟೆಸ್ಟ್​ ಪಂದ್ಯ ಆರಂಭವಾಗಲಿದ್ದು, ಇದು ಭಾರತ ತಂಡಕ್ಕೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಯ ಫೈನಲ್‌ಗೆ ಅರ್ಹತೆ ಪಡೆಯ ಬೇಕಾದರೆ ಈ ಪಂದ್ಯವನ್ನು ವಿರಾಟ್​ ಪಡೆ ಗೆಲ್ಲಲೇಬೇಕು ಇಲ್ಲವೇ ಡ್ರಾ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿಯಲ್ಲಿದೆ. ಕೊನೆಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಜಯಗಳಿಸಿದರೆ, ಆಸ್ಟ್ರೇಲಿಯಾ ಡಬ್ಲ್ಯೂಟಿಸಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.