ETV Bharat / sports

ಕೊಹ್ಲಿ 400ನೇ ಅಂತಾರಾಷ್ಟ್ರೀಯ ಪಂದ್ಯ: ಈ ದಾಖಲೆಗೆ ರೋಹಿತ್​-ಹೋಪ್ ಜೊತೆ ಸ್ಪರ್ಧೆ!

author img

By

Published : Dec 17, 2019, 7:51 PM IST

Updated : Dec 17, 2019, 9:18 PM IST

ಆಗಸ್ಟ್​ 18 2008ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ ಪದಾರ್ಪಣೆ ಮಾಡಿದ ವಿರಾಟ್​ ಇದುವರೆಗೆ 399 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ವಿಶಾಖ ಪಟ್ಟಣದಲ್ಲಿ ನಡೆಯುವ ಎರಡನೇ ಏಕದಿನ ಪಂದ್ಯ ಕೊಹ್ಲಿಗೆ 400ನೇ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.

Virat Kohli  400th match
Virat Kohli 400th match

ವಿಶಾಖಪಟ್ಟಣ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಸರಣಿ ಉಳಿಸಿಕೊಳ್ಳಲು ಮಾಡು ಇಲ್ಲವೇ ಮಡಿ ಎಂತಾಗಿರುವ ನಾಳಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮಹತ್ವದ ಮೈಲುಗಲ್ಲನ್ನು ಸ್ಥಾಪಿಸಲಿದ್ದಾರೆ.

ಆಗಸ್ಟ್​ 18 2008ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ ಪದಾರ್ಪಣೆ ಮಾಡಿದ ವಿರಾಟ್​ ಇದುವರೆಗೆ 399 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ವಿಶಾಖ ಪಟ್ಟಣದಲ್ಲಿ ನಡೆಯುವ ಎರಡನೇ ಏಕದಿನ ಪಂದ್ಯ ಕೊಹ್ಲಿಗೆ 400ನೇ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.

ವಿರಾಟ್​ ಕೊಹ್ಲಿ 240 ಏಕದಿನ, 75 ಟಿ20 ಹಾಗೂ 84 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 11524 ರನ್​, ಟೆಸ್ಟ್​ನಲ್ಲಿ 7202 ರನ್​ ಹಾಗೂ ಟಿ 20 ಯಲ್ಲಿ 2633 ರನ್​ ಪೇರಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 27 ಹಾಗೂ ಏಕದಿನ ಕ್ರಿಕೆಟ್​ನಲ್ಲಿ 43 ಶತಕ ದಾಖಲಿಸಿದ್ದಾರೆ.

ಕೊಹ್ಲಿಗೆ ರೋಹಿತ್​- ಹೋಪ್​ ಪೈಪೋಟಿ

ಕಳೆದ ಎರಡು ವರ್ಷಗಳಲ್ಲಿ ಏಕದಿನ ಕ್ರಿಕೆಟ್​ನಲ್ಲಿ ವರ್ಷದಲ್ಲಿ ಗರಿಷ್ಠ ರನ್​ ಪೇರಿಸಿದ ದಾಖಲೆ ಉಳಿಸಿಕೊಂಡು ಬಂದಿರುವ ವಿರಾಟ್​ ಕೊಹ್ಲಿ ಸತತ ಮೂರನೇ ಬಾರಿಯೂ ತಮ್ಮ ದಾಖಲೆ ಮುಂದುವರಿಸಲು ನಾಳಿನ ಪಂದ್ಯ ನಿರ್ಣಾಯಕವಾಗಿದೆ. ಈಗಾಗಲೆ ಮೊದಲ ಸ್ಥಾನದಲ್ಲಿರುವ ಕೊಹ್ಲಿ 2019ರಲ್ಲಿ 1292 ರನ್​ ಬಾರಿಸಿದ್ದಾರೆ. ಇವರಿಗೆ ಪೈಪೋಟಿ ನೀಡುತ್ತಿರುವ ರೋಹಿತ್​ 1268 ಗಳಿಸಿದ್ದರೆ ಹೋಪ್​ 1225 ರನ್​ಗಳಿಸಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

Intro:Body:Conclusion:
Last Updated : Dec 17, 2019, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.