ETV Bharat / sports

ಆರ್​ಸಿಬಿ ಮತ್ತು ಕೊಹ್ಲಿ ಭಾಯ್​ಗೆ ನಾನು ಸದಾ ಋಣಿಯಾಗಿರುತ್ತೇನೆ: ಮೊಹಮ್ಮದ್​ ಸಿರಾಜ್​

author img

By

Published : Jan 21, 2021, 8:15 PM IST

ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಸಿರಾಜ್​ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಆದರೂ ತವರಿಗೆ ಮರಳದೆ ತಂದೆಯ ಕನಸಾದ ಟೆಸ್ಟ್​ ಕ್ರಿಕೆಟ್​ನಲ್ಲಿ ಆಡುವುದಕ್ಕಾಗಿ ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡಿದ್ದರು.

ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್

ಹೈದರಾಬಾದ್​: ತಮ್ಮ ಮೇಲೆ ನಂಬಿಕೆಯಿಟ್ಟು, ನನ್ನಲ್ಲಿ ವಿಶ್ವಾಸ ಹೆಚ್ಚಿಸಿ ಇಲ್ಲಿಯವರೆಗೆ ಬರಲು ಕಾರಣವಾದ ಐಪಿಎಲ್ ಫ್ರಾಂಚೈಸಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮತ್ತು ನಾಯಕ ವಿರಾಟ್​ ಕೊಹ್ಲಿಗೆ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ ಎಂದು ಭಾರತ ತಂಡದ ಯುವ ವೇಗಿ ಮೊಹಮ್ಮದ್ ಸಿರಾಜ್​ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಸಿರಾಜ್​ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಆದರೂ ತವರಿಗೆ ಮರಳದೆ ತಂದೆಯ ಕನಸಾದ ಟೆಸ್ಟ್​ ಕ್ರಿಕೆಟ್​ನಲ್ಲಿ ಆಡುವುದಕ್ಕಾಗಿ ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡಿದ್ದರು.

"2018ರಲ್ಲಿ ಅತ್ಯಂತ ಕೆಟ್ಟ ಪ್ರದರ್ಶನದ ಹೊರತಾಗಿಯೂ ನನ್ನನ್ನು ರೀಟೈನ್ ಮಾಡಿಕೊಂಡರು. ವಿರಾಟ್​ ಭಾಯ್ ಮತ್ತು ಆರ್​ಸಿಬಿಗೆ ನನ್ನ ಮೇಲೆ ಸಾಕಷ್ಟು ನಂಬಿಕೆ ಇತ್ತು. ಆರ್​ಸಿಬಿ ಟೂರ್ನಿಯುದ್ದಕ್ಕೂ ನನ್ನ ಬೆನ್ನಿಗೆ ನಿಂತಿತು. ವಿರಾಟ್ ಭಾಯ್​ ಸದಾ ನನಗೆ ಪ್ರೋತ್ಸಾಹ ನೀಡುತ್ತಿದ್ದರು. ನಿನ್ನಿಂದ ದೊಡ್ಡ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಿದೆ ಎಂದು ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದ್ದರು" ಎಂದು ಹೈದರಾಬಾದ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮೊಹಮ್ಮದ್ ಸಿರಾಜ್​

ಮಾತು ಮುಂದುವರಿಸಿ, "ಆಸೀಸ್​ ವಿರುದ್ಧದ ಸರಣಿಯಿಂದ ನಾನು ಮುಂದಿನ ಇಂಗ್ಲೆಂಡ್​ ವಿರುದ್ಧದ ಸರಣಿಗೆ ಆತ್ಮವಿಶ್ವಾಸ ತೆಗೆದುಕೊಂಡಿದ್ದೇನೆ. ಶಮಿ ಮತ್ತು ಉಮೇಶ್ ಯಾದವ್​ ಹಿಂತಿರುಗಿದರೆ ಏನಾಗುತ್ತದೆ ಎಂದು ನಾನು ಯೋಚಿಸುತ್ತಿಲ್ಲ. ಟೀಮ್ ಮ್ಯಾನೇಜ್​​ಮೆಂಟ್​ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ" ಎಂದು ಸಿರಾಜ್​ ಹೇಳಿದ್ದಾರೆ.

ಸಿರಾಜ್​ ಟೆಸ್ಟ್​ ಸರಣಿಯ 2ನೇ ಟೆಸ್ಟ್​ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಅವರು ಮೂರು ಪಂದ್ಯಗಳಿಂದ ಒಟ್ಟು 13 ವಿಕೆಟ್ ಪಡೆದು ಭಾರತದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅದರಲ್ಲೂ ಸರಣಿ ನಿರ್ಣಾಯಕವೆನಿಸಿದ್ದ ಬ್ರಿಸ್ಬೇನ್ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಸ್ಟೀವ್​ ಸ್ಮಿತ್, ಲಾಬುಶೇನ್ ಸೇರಿದಂತೆ 5 ವಿಕೆಟ್ ಪಡೆದು ಮಿಂಚಿದ್ದರು.

ಇದನ್ನು ಓದಿ:ಸಾವಿರಾರು ಜನರ ಸಮ್ಮುಖದಲ್ಲಿ ನಟರಾಜನ್​ಗೆ​​ ಸಿಕ್ತು ಭರ್ಜರಿ ಸ್ವಾಗತ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.