ETV Bharat / sports

ಕ್ರಿಕೆಟ್ ಇತಿಹಾಸದ ಮಹಾಪತನ...! ಗೆಲುವಿನ 3 ರನ್​​ ಇದ್ದಾಗ ಪಟಪಟನೆ ಉರುಳಿದ್ವು 4 ವಿಕೆಟ್..1 ರನ್ ರೋಚಕ ಸೋಲು...!!

author img

By

Published : Sep 23, 2019, 4:46 PM IST

Updated : Sep 23, 2019, 4:56 PM IST

ಕ್ರಿಕೆಟ್ ಇತಿಹಾಸದ ಬಹುದೊಡ್ಡ ಹೈಡ್ರಾಮಾ ಒಂದಕ್ಕೆ ಸಾಕ್ಷಿಯಾಗಿದ್ದು ಆಸ್ಟ್ರೇಲಿಯಾದ ಪರ್ತ್​ ಮೈದಾನ. ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್​ ಟೂರ್ನಿಯೊಂದರಲ್ಲಿ ಈ ಪರಿಯ ನಾಟಕೀಯ ಫಲಿತಾಂಶ ಕಂಡುಬಂದಿದೆ.

ಏಕದಿನ ಕ್ರಿಕೆಟ್ ಇತಿಹಾಸದ ಮಹಾಪತನ

ಪರ್ತ್: ಇದು ಬಹುಶಃ ಏಕದಿನ ಕ್ರಿಕೆಟ್ ಒಂದರ ಮಹಾಪತನ ಎನ್ನಬಹುದೇನೋ..?! ತಂಡದ ಗೆಲುವಿಗೆ ಇನ್ನೇನು ಐದು ರನ್​ಗಳ ಅಗತ್ಯವಿತ್ತು, ಅಷ್ಟೇ ಪ್ರಮಾಣದ ವಿಕೆಟ್ ಸಹ ಉಳಿದಿತ್ತು. ನಿರಾಯಾಸವಾಗಿ ಗೆದ್ದೇಬಿಡುತ್ತೇವೆ ಎನ್ನುವ ಅಚಲ ನಂಬಿಕೆಯಲ್ಲಿದ್ದ ಆ ತಂಡ ಒಂದು ರನ್ನಿನಿಂದ ಸೋತಿದೆ ಎಂದರೆ ನೀವು ನಂಬಲೇಬೇಕು.

ಹೌದು, ಕ್ರಿಕೆಟ್ ಇತಿಹಾಸದ ಬಹುದೊಡ್ಡ ಹೈಡ್ರಾಮಾ ಒಂದಕ್ಕೆ ಸಾಕ್ಷಿಯಾಗಿದ್ದು ಆಸ್ಟ್ರೇಲಿಯಾದ ಪರ್ತ್​ ಮೈದಾನ. ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್​ ಟೂರ್ನಿಯೊಂದರಲ್ಲಿ ಈ ಪರಿಯ ನಾಟಕೀಯ ಫಲಿತಾಂಶ ಕಂಡುಬಂದಿದೆ.

ಮೊದಲು ಬ್ಯಾಟ್ ಮಾಡಿದ್ದ ವಿಕ್ಟೋರಿಯಾ 47.5 ಓವರ್​ನಲ್ಲಿ 185 ರನ್​​ ಗಳಿಸಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟಾಸ್ಮೇನಿಯಾ ತಂಡ ಇನ್ನೇನು ಗೆಲುವಿನ ನಗೆ ಬೀರಬೇಕು ಎನ್ನುವಷ್ಟರಲ್ಲಿ ಸತತ ವಿಕೆಟ್ ಕಳೆದುಕೊಂಡು ಅನಿರೀಕ್ಷಿತ ಸೋಲನುಭವಿಸಿತು.

181 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಟಾಸ್ಮೇನಿಯಾ ಇನ್ನು ಆರು ರನ್ ಗಳಿಸಿದ್ದರೆ ಸುಲಭ ಜಯ ಸಂಪಾದಿಸುತ್ತಿತ್ತು. ಆದರೆ ವಿಕ್ಟೋರಿಯಾ ತಂಡದ ಬಿಗುದಾಳಿಗೆ ನಿರಂತರ ವಿಕೆಟ್ ಉರುಳಿದವು.

ಜೇಮ್ಸ್ ಫಾಲ್ಕನರ್, ಗುರೀಂದರ್ ಸಂಧುರಂತಹ ಖ್ಯಾತ ಆಲ್​ರೌಂಡರ್​ಗಳಿದ್ದರೂ ಟಾಸ್ಮೇನಿಯಾ ತಂಡಕ್ಕೆ ಜಯ ದಕ್ಕಲಿಲ್ಲ. 39 ಓವರ್​ನಲ್ಲಿ ಮೂರು ವಿಕೆಟ್ ಹಾಗೀ ನಲ್ವತ್ತನೇ ಓವರ್​ನಲ್ಲಿ ಕೊನೆಯ ವಿಕೆಟ್ ಕಳೆದುಕೊಂಡು ಟಾಸ್ಮೇನಿಯಾ ರೋಚಕ ಸೋಲು ಕಂಡಿತು.

ಸಂಕ್ಷಿಪ್ತ ಸ್ಕೋರ್​:
ವಿಕ್ಟೋರಿಯಾ: ಗ್ಲೆನ್ ಮ್ಯಾಕ್ಸ್​ವೆಲ್​ 34, ವಿಲ್ ಸದರ್​​ಲ್ಯಾಂಡ್ 53, ಮ್ಯಾಥ್ಯೂ ಶಾರ್ಟ್​ 27

ನಥನ್ ಎಲಿಸ್ 3 ವಿಕೆಟ್, ಜಾಕ್ಸನ್ ಬರ್ಡ್​ ಹಾಗೂ ಜೇಮ್ಸ್ ಫಾಲ್ಕನರ್ ತಲಾ 2 ವಿಕೆಟ್

ಟಾಸ್ಮೇನಿಯಾ: ಬೆನ್​​ ಮೆಕ್​ಡರ್ಮಾರ್ಟ್​ 78, ಜಾರ್ಜ್​ ಬೇಲಿ 27, ಜೋರ್ಡಾನ್ ಸಿಲ್ಕ್ 22

ಜಾಕ್ಸನ್ ಕೋಲ್​ಮ್ಯಾನ್ ಹಾಗೂ ಕ್ರಿಸ್ ಟ್ರೆಮೈನ್​ ತಲಾ 4 ವಿಕೆಟ್, ವಿಲ್ ಸದರ್​ಲ್ಯಾಂಡ್ 2 ವಿಕೆಟ್

Intro:Body:

ಏಕದಿನ ಕ್ರಿಕೆಟ್ ಇತಿಹಾಸದ ಮಹಾಪತನ...!

ಪರ್ತ್: ಇದು ಬಹುಶಃ ಏಕದಿನ ಕ್ರಿಕೆಟ್ ಒಂದರ ಮಹಾಪತನ ಎನ್ನಬಹುದೇನೋ..?! ತಂಡದ ಗೆಲುವಿಗೆ ಇನ್ನೇನು ಐದು ರನ್​ಗಳ ಅಗತ್ಯವಿತ್ತು, ಅಷ್ಟೇ ಪ್ರಮಾಣದ ವಿಕೆಟ್ ಸಹ ಉಳಿದಿತ್ತು. ನಿರಾಯಾಸವಾಗಿ ಗೆದ್ದೇಬಿಡುತ್ತೇವೆ ಎನ್ನುವ ಅಚಲ ನಂಬಿಕೆಯಲ್ಲಿದ್ದ ಆ ತಂಡ ಒಂದು ರನ್ನಿನಿಂದ ಸೋತಿದೆ ಎಂದರೆ ನೀವು ನಂಬಲೇಬೇಕು.

ಹೌದು, ಕ್ರಿಕೆಟ್ ಇತಿಹಾಸದ ಬಹುದೊಡ್ಡ ಹೈಡ್ರಾಮಾ ಒಂದಕ್ಕೆ ಸಾಕ್ಷಿಯಾಗಿದ್ದು ಆಸ್ಟ್ರೇಲಿಯಾದ ಪರ್ತ್​ ಮೈದಾನ. ಈ ಪರಿಯ ನಾಟಕೀಯ ಫಲಿತಾಂಶ ಕಂಡುಬಂದಿದ್ದು ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್​ನಲ್ಲಿ. 

ಮೊದಲು ಬ್ಯಾಟ್ ಮಾಡಿದ್ದ ವಿಕ್ಟೋರಿಯಾ 47.5 ಓವರ್​ನಲ್ಲಿ 185 ರನ್​​ ಗಳಿಸಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟಾಸ್ಮೇನಿಯಾ ತಂಡ ಇನ್ನೇನು ಗೆಲುವಿನ ನಗೆ ಬೀರಬೇಕು ಎನ್ನುವಷ್ಟರಲ್ಲಿ ಸತತ ವಿಕೆಟ್ ಕಳೆದುಕೊಂಡು ಅನಿರೀಕ್ಷಿತ ಸೋಲನುಭವಿಸಿತು.

181 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಟಾಸ್ಮೇನಿಯಾ ಇನ್ನು ಆರು ರನ್ ಗಳಿಸಿದ್ದರೆ ಸುಲಭ ಜಯ ಸಂಪಾದಿಸುತ್ತಿತ್ತು. ಆದರೆ ವಿಕ್ಟೋರಿಯಾ ತಂಡದ ಬಿಗುದಾಳಿಗೆ ನಿರಂತರ ವಿಕೆಟ್ ಉರುಳಿದವು.

ಜೇಮ್ಸ್ ಫಾಲ್ಕನರ್, ಗುರೀಂದರ್ ಸಂಧುರಂತಹ ಖ್ಯಾತ ಆಲ್​ರೌಂಡರ್​ಗಳಿದ್ದರೂ ಟಾಸ್ಮೇನಿಯಾ ತಂಡಕ್ಕೆ ಜಯ ದಕ್ಕಲಿಲ್ಲ. 39 ಓವರ್​ನಲ್ಲಿ ಮೂರು ವಿಕೆಟ್ ಹಾಗೀ ನಲ್ವತ್ತನೇ ಓವರ್​ನಲ್ಲಿ ಕೊನೆಯ ವಿಕೆಟ್ ಕಳೆದುಕೊಂಡು ಟಾಸ್ಮೇನಿಯಾ ರೋಚಕ ಸೋಲು ಕಂಡಿತು.

ಸಂಕ್ಷಿಪ್ತ ಸ್ಕೋರ್​:

ವಿಕ್ಟೋರಿಯಾ: ಗ್ಲೆನ್ ಮ್ಯಾಕ್ಸ್​ವೆಲ್​ 34, ವಿಲ್ ಸದರ್​​ಲ್ಯಾಂಡ್ 53, ಮ್ಯಾಥ್ಯೂ ಶಾರ್ಟ್​ 27

ನಥನ್ ಎಲಿಸ್ 3 ವಿಕೆಟ್, ಜಾಕ್ಸನ್ ಬರ್ಡ್​ ಹಾಗೂ ಜೇಮ್ಸ್ ಫಾಲ್ಕನರ್ ತಲಾ 2 ವಿಕೆಟ್

ಟಾಸ್ಮೇನಿಯಾ: ಬೆನ್​​ ಮೆಕ್​ಡರ್ಮಾರ್ಟ್​ 78, ಜಾರ್ಜ್​ ಬೇಲಿ 27, ಜೋರ್ಡಾನ್ ಸಿಲ್ಕ್ 22

ಜಾಕ್ಸನ್ ಕೋಲ್​ಮ್ಯಾನ್ ಹಾಗೂ ಕ್ರಿಸ್ ಟ್ರೆಮೈನ್​ ತಲಾ 4 ವಿಕೆಟ್, ವಿಲ್ ಸದರ್​ಲ್ಯಾಂಡ್ 2 ವಿಕೆಟ್

Conclusion:
Last Updated : Sep 23, 2019, 4:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.