ETV Bharat / sports

ವರುಣ್​ ಚಮತ್ಕಾರಕ್ಕೆ ಮಾರುಹೋದ ಬಿಸಿಸಿಐ... ಕಾಂಗರೂ ವಿರುದ್ಧದ ಟಿ-20 ಕ್ರಿಕೆಟ್​ಗೆ 'ಚಕ್ರವರ್ತಿ'!

author img

By

Published : Oct 27, 2020, 4:32 AM IST

Updated : Oct 27, 2020, 6:31 AM IST

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೆಲವೊಂದು ಪ್ರತಿಭೆಗಳಿಗೆ ಭಾರತೀಯ ಕ್ರಿಕೆಟ್​ ಮಂಡಳಿ ಮಣೆ ಹಾಕುತ್ತಿದ್ದು, ಇದೀಗ ವರುಣ್​ ಚಕ್ರವರ್ತಿ ಅಕವಾಶ ಪಡೆದುಕೊಂಡಿದ್ದಾರೆ.

Varun Chakaravarthi
Varun Chakaravarthi

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕರ್ನಾಟಕ ಮೂಲದ ಸ್ಪಿನ್ನರ್​ ವರುಣ್​ ಚಕ್ರವರ್ತಿ ಕೊನೆಗೂ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾಸ್ತುಶಿಲ್ಪ ವಿಷಯದಲ್ಲಿ ಎಂಜಿನಿಯರಿಂಗ್​ ಪದವಿ ಪಡೆದ ಇವರು ಕ್ರಿಕೆಟ್​​ನಿಂದ ಸಂಪೂರ್ಣವಾಗಿ ಬಿಡುವು ಪಡೆದುಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಸಹ ಮಾಡಿದ್ದಾರೆ.

ಆದರೆ 2018ರ ತಮಿಳುನಾಡು ಪ್ರೀಮಿಯರ್​​ ಲೀಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಇವರಿಗೆ 2019ರಲ್ಲಿ ಪಂಜಾಬ್​ ತಂಡ ಬರೋಬ್ಬರಿ 8.4 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಆ ವೇಳೆ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವರುಣ್​ ಮೊದಲ ಪಂದ್ಯದಲ್ಲೇ ಅತಿ ಹೆಚ್ಚು ರನ್​ ಬಿಟ್ಟುಕೊಟ್ಟಿದ್ದರು. ಜತೆಗೆ ಗಾಯಗೊಂಡಿದ್ದ ಅವರು ಟೂರ್ನಿಯಿಂದ ಹೊರಬಿದ್ದಿದ್ದರು. 2020ರ ಐಪಿಎಲ್​ ಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಅವರನ್ನ ಪಂಜಾಬ್​ ಕೈಬಿಟ್ಟಿತ್ತು. ಹೀಗಾಗಿ 4 ಕೋಟಿ ರೂ. ನೀಡಿ ಕೆಕೆಆರ್​ ಖರೀದಿ ಮಾಡಿತ್ತು.

Varun Chakaravarthi
ವರುಣ್​ ಚಕ್ರವರ್ತಿ

ತಮ್ಮ ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲಿ ಬೌಲಿಂಗ್ ಮಾಡುತ್ತಿರುವ ವರುಣ್​ ಚಕ್ರವರ್ತಿ 2020ರ ಐಪಿಎಲ್​ನಲ್ಲಿ ತಾವು ಆಡಿರುವ 11 ಪಂದ್ಯಗಳಿಂದ 13 ವಿಕೆಟ್​ ಕಬಳಿಸಿದ್ದಾರೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ​ ಪಂದ್ಯದಲ್ಲಿ ದಾಖಲೆಯ ಐದು ವಿಕೆಟ್​ ಪಡೆದು ಸಾಧನೆ ಮಾಡಿದ್ದಾರೆ.

ಈತನ ಬೌಲಿಂಗ್​ ಚಮತ್ಕಾರಕ್ಕೆ ಮಾರು ಹೋಗಿರುವ ಭಾರತೀಯ ಕ್ರಿಕೆಟ್​ ಮಂಡಳಿ ಇದೀಗ ಆಸ್ಟ್ರೇಲಿಯಾ ವಿರುದ್ಧದ ಟಿ-20 ಕ್ರಿಕೆಟ್​ನಲ್ಲಿ ಚಾನ್ಸ್​ ನೀಡಿದೆ. 29 ವರ್ಷದ ವರುಣ್​ ಚಕ್ರವರ್ತಿ ಈ ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡು ಮಿಂಚು ಹರಿಸಿದ್ರೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಸ್ಟಾರ್​ ಬೌಲರ್​ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Last Updated : Oct 27, 2020, 6:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.