ETV Bharat / sports

ಕೊಹ್ಲಿ-ಎಬಿಡಿ ಜೋಡಿಯ ಸ್ಫೋಟಕ ಇನ್ನಿಂಗ್ಸ್​ಗೆ ನಾಲ್ಕು ವರ್ಷಗಳ ಸಂಭ್ರಮ

author img

By

Published : May 14, 2020, 5:46 PM IST

2016ರ ಐಪಿಎಲ್ ವಿರಾಟ್​ ಕೊಹ್ಲಿ ಪಾಲಿಗೆ ಸುವರ್ಣಯುಗವಾಗಿತ್ತು. ಆ ಸೀಸನ್​ನಲ್ಲಿ ವಿರಾಟ್​ ಕೊಹ್ಲಿ 4 ಭರ್ಜರಿ ಶತಕದ ಜೊತೆ 973 ರನ್​ ಸಿಡಿಸುವ ಮೂಲಕ ಅಬ್ಬರಿಸಿದ್ದರು. ಆವೃತ್ತಿ ಪೂರ ಏಕಾಂಗಿ ಹೋರಾಟ ನಡೆಸಿದ್ದ ಅವರು ತಮ್ಮ ನೇತೃತ್ವದ ಆರ್​ಸಿಬಿ ತಂಡವನ್ನು ಫೈನಲ್​ಗೇರಿಸಿದ್ದರು.

ವಿರಾಟ್​ ಕೊಹ್ಲಿ-ಎಬಿ ಡಿ ವಿಲಿಯರ್ಸ್​ ಜೋಡಿ
ವಿರಾಟ್​ ಕೊಹ್ಲಿ-ಎಬಿ ಡಿ ವಿಲಿಯರ್ಸ್​ ಜೋಡಿ

ಮುಂಬೈ: ಐಪಿಎಲ್​ನ 'ಸೂಪರ್ ಜೋಡಿ' ಎಂದೇ ಹೆಸರಾಗಿರುವ ಎಬಿಡಿ ವಿಲಿಯರ್ಸ್​ ಹಾಗೂ ವಿರಾಟ್​ ಕೊಹ್ಲಿ ಟಿ20ಯ ಒಂದೇ ಪಂದ್ಯದಲ್ಲಿ ಇಬ್ಬರೂ ಶತಕ ಸಿಡಿಸಿದ್ದರು. ಈ ದಾಖಲೆಯ ಆಟಕ್ಕೆ ಇವತ್ತು ನಾಲ್ಕು ವರ್ಷಗಳು ತಂಬುತ್ತಿವೆ.

2016 ಮೇ14ರಂದು ಗುಜರಾತ್​ ಲಯನ್ಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವಿರಾಟ್​-ವಿಲಿಯರ್ಸ್​ ಜೋಡಿ 229 ರನ್​ಗಳ ಬೃಹತ್​ ಜೊತೆಯಾಟ ನಡೆಸಿ 248 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿತ್ತು.

ಆ ಪಂದ್ಯದಲ್ಲಿ ಗುಜರಾತ್​​ ತಂಡದ ಬೌಲರ್​ಗಳಾದ ಪ್ರವೀಣ್​ ಕುಮಾರ್​, ಡ್ವೇನ್​ ಬ್ರಾವೋ ಮತ್ತು ರವೀಂದ್ರ ಜಡೇಜಾರಂತಹ ಘಟಾನುಘಟಿಗಳಿಗೆ ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿಸಿದ್ದರು.

ಬೆಂಗಳೂರಿನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಕೊಹ್ಲಿ 55 ಎಸೆತಗಳಲ್ಲಿ 5 ಸಿಕ್ಸರ್​ ಹಾಗೂ 8 ಬೌಂಡರಿಗಳ ನೆರವಿನಿಂದ 109 ರನ್​ಗಳಿಸಿದರೆ, ಎಬಿಡಿ 52 ಎಸೆತಗಳಲ್ಲಿ 12 ಸಿಕ್ಸರ್​ ಹಾಗೂ 10 ಬೌಂಡರಿಗಳ ನೆರವಿನಿಂದ 129 ರನ್​ಗಳಿಸಿದ್ದರು.

ಈ ಪಂದ್ಯಲ್ಲಿ ಗುಜರಾತ್​ ಲಯನ್ಸ್​ 104 ರನ್​ಗಳಿಗೆ ಆಲೌಟ್​ ಆಗುವ ಮೂಲಕ 144 ರನ್​ಗಳ ಸೋಲು ಅನುಭವಿಸಿತ್ತು.

ಕೊರೊನಾ ವೈರಸ್​ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಬಡ ಜನರ ಅನುಕೂಲಕ್ಕಾಗಿ ವಿರಾಟ್​-ವಿಲಿಯರ್ಸ್​ ಜೋಡಿ ತಮ್ಮ ದ್ವಿಶತಕ ಜೊತೆಯಾಟದ ಕಿಟ್​ ಅನ್ನು ಹರಾಜಿಗಿಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.