ETV Bharat / sports

ಮಾರ್ಗನ್-ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್: 163 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಕೆಕೆಆರ್​

author img

By

Published : Oct 18, 2020, 5:39 PM IST

ಮಾರ್ಗನ್ 34, ದಿನೇಶ್ ಕಾರ್ತಿಕ್ 29 ಹಾಗೂ ಗಿಲ್​ರ 36 ರನ್​ಗಳ ನೆರವಿನಿಂದ ಕೆಕೆಆರ್ 163 ರನ್​ಗಳಿಸಿ ಹೈದರಾಬಾದ್​ಗೆ 164 ರನ್​ಗಳ ಟಾರ್ಗೆಟ್ ನೀಡಿದೆ.

SRH vs KKR
ಐಪಿಎಲ್ 2020

ಅಬುಧಾಬಿ: ಕೆಕೆಆರ್​ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಸನ್​ರೈಸರ್ಸ್​ ಹೈದರಾಬಾದ್ ತಂಡ ಮಾರ್ಗನ್ ಬಳಗವನ್ನು 163 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ ತಂಡ ಪವರ್​ ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ಮೊದಲ ವಿಕೆಟ್​ಗೆ 48 ರನ್​ಗಳ ಜೊತೆಯಾಟ ನೀಡಿತು. ಈ ವೇಳೆ ಬೌಲಿಂಗ್ ದಾಳಿಗಿಳಿದ ನಟರಾಜನ್16 ಎಸೆತಗಳಲ್ಲಿ 23 ರನ್​ಗಳಿಸಿದ್ದ ತ್ರಿಫಾಠಿಯನ್ನು ಬೌಲ್ಡ್ ಮಾಡಿ ಹೈದರಾಬಾದ್​ಗೆ ಮೊದಲ ಬ್ರೇಕ್ ತಂದುಕೊಟ್ಟರು.

ಇತ್ತ ಗಿಲ್ ರನ್​ಗಳಿಸಲು ಪರದಾಡಿ ಕೊನೆಗೆ 37 ಎಸೆತಗಳಲ್ಲಿ 5 ಬೌಂಡರಿ ಸಹಿತ 36 ರನ್​ಗಳಿಸಿ ಔಟಾದರು. ನಂತರದ ಓವರ್​ನಲ್ಲೇ 29 ರನ್​ಗಳಿಸಿ ಉತ್ತಮವಾಗಿ ಬ್ಯಾಟ್​ ಬೀಸುತ್ತಿದ್ದ ರಾಣಾ ವಿಜಯ್ ಶಂಕರ್​ಗೆ ವಿಕೆಟ್ ಒಪ್ಪಿಸಿದರು.

ಸ್ಫೋಟಕ ಬ್ಯಾಟ್ಸ್​ಮನ್​ ರಸೆಲ್(9) ಮತ್ತೊಮ್ಮೆ ವಿಫಲರಾದರು. ಆದರೆ 5ನೇ ವಿಕೆಟ್ ಜೊತೆಯಾದ ಹಾಲಿ ನಾಯಕ ಮಾರ್ಗನ್ ಹಾಗೂ ಮಾಜಿ ನಾಯಕ ಕಾರ್ತಿಕ್ 58 ರನ್​ಗಳ ಜೊತೆಯಾಟ ನೀಡಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಮಾರ್ಗನ್ 22 ಎಸೆತಗಳಲ್ಲಿ 34 ಹಾಗೂ ಕಾರ್ತಿಕ್ 14 ಎಸೆತಗಳಲ್ಲಿ ತಲಾ 2 ಬೌಂಡರಿ- ಸಿಕ್ಸರ್​ಗಳ ನೆರವಿನಿಂದ 29 ರನ್​ಗಳಿಸಿದರು.

ಹೈದರಾಬಾದ್ ಪರ ನಟರಾಜನ್ 2, ರಶೀದ್ ಖಾನ್ , ವಿಜಯ ಶಂಕರ್,ಬಾಸಿಲ್ ತಂಪಿ ತಲಾ ಒಂದು ವಿಕೆಟ್ ಪಡೆದರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.