ETV Bharat / sports

ಸನ್​​ ರೈಸರ್ಸ್​ ಹೈದರಾಬಾದ್​ ಕ್ರಿಕೆಟ್​​​ ನಿರ್ದೇಶಕರಾಗಿ ಮೂಡಿ ನೇಮಕ

author img

By

Published : Dec 15, 2020, 9:40 PM IST

ಸನ್ ​​ರೈಸರ್ಸ್​ ಹೈದರಾಬಾದ್ ಕ್ರಿಕೆಟ್​​​ ನಿರ್ದೇಶಕರಾಗಿ ಆಸ್ಟ್ರೇಲಿಯಾ ಕ್ರಿಕೆಟಿಗ ಟಾಮ್ ಮೂಡಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ತನ್ನ ಟ್ವಿಟರ್​​​ ಖಾತೆಯಲ್ಲಿ ಮಾಹಿತಿ ನೀಡಿದೆ.

SRH appoint Moody as director of cricket
ಟಾಮ್ ಮೂಡಿ

ನವದೆಹಲಿ: ಐಪಿಎಲ್ ಫ್ರಾಂಚೈಸಿ ಸನ್‌ ರೈಸರ್ಸ್ ಹೈದರಾಬಾದ್‌ ತಮ್ಮ ತಂಡದ ಕ್ರಿಕೆಟ್​​ ನಿರ್ದೇಶಕರಾಗಿ ಆಸ್ಟ್ರೇಲಿಯಾ ಕ್ರಿಕೆಟಿಗ ಟಾಮ್ ಮೂಡಿ ಅವರನ್ನು ಮಂಗಳವಾರ ನೇಮಕ ಮಾಡಿದೆ.

55 ವರ್ಷದ ಆಸ್ಟ್ರೇಲಿಯಾದ ಈ ಆಟಗಾರ ಹೈದರಾಬಾದ್​ ತಂಡದ ಉಸ್ತುವಾರಿಯಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ತಂಡದ ತರಬೇತುದಾರ ಟ್ರೆವರ್ ಬೇಲಿಸ್ ಅವರನ್ನು ಬದಲಿಸುವ ಮುನ್ನ 2016ರಲ್ಲಿ ಸನ್​​ ರೈಸರ್ಸ್​​​ ಐಪಿಎಲ್ ಪ್ರಶಸ್ತಿ ಗೆಲ್ಲಲು ಕಾರಣರಾಗಿದ್ದರು.

ಮೂಡಿ ಅವರ ಏಳು ವರ್ಷಗಳ ಅಧಿಕಾರಾವಧಿಯಲ್ಲಿ, ಸನ್‌ ರೈಸರ್ಸ್ ಐದು ಬಾರಿ ಐಪಿಎಲ್ ಪ್ಲೇ-ಆಫ್‌ ಹಂತಕ್ಕೆ ತಲುಪಿ ಎದುರಾಳಿಗಳಿಗೆ ಸ್ಪರ್ಧೆಯೊಡ್ಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.