ETV Bharat / sports

ಮೊದಲ ಟೆಸ್ಟ್​ನಲ್ಲಿ ದಕ್ಷಿಣ ಆಫ್ರಿಕಾ 220ಕ್ಕೆ ಆಲೌಟ್​: 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಪಾಕ್​

author img

By

Published : Jan 26, 2021, 6:25 PM IST

ಕರಾಚಿ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭವಾಗಿರುವ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಹರಿಣ ಪಡೆ, ಪಾಕ್​ ಬೌಲರ್​ಗಳ ದಾಳಿಗೆ ತತ್ತರಿಸಿ 69.2 ಓವರ್​ಗಳಲ್ಲಿ 220ಕ್ಕೆ ಸರ್ವಪತನ ಕಂಡಿತು.

ಪಾಕಿಸ್ತಾನ್ vs ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ
ಪಾಕಿಸ್ತಾನ್ vs ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ

ಕರಾಚಿ: 14 ವರ್ಷಗಳ ನಂತರ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ನೀರಸ ಪ್ರದರ್ಶನ ತೋರಿ ಕೇವಲ 220 ರನ್​ಗಳಿಗೆ ಆಲೌಟ್ ಆಗಿದೆ.

ಕರಾಚಿ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭವಾಗಿರುವ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಹರಿಣ ಪಡೆ, ಪಾಕ್​ ಬೌಲರ್​ಗಳ ದಾಳಿಗೆ ತತ್ತರಿಸಿ 69.2 ಓವರ್​ಗಳಲ್ಲಿ 220ಕ್ಕೆ ಸರ್ವಪತನ ಕಂಡಿತು.

ಆರಂಭಿಕ ಡೀನ್ ಎಲ್ಗರ್​ 58 ರನ್ ​ಗಳಿಸುವ ಮೂಲಕ ಏಕೈಕ ಅರ್ಧಶತಕ ಬಾರಿಸಿದರು. ಇವರನ್ನು ಹೊರತುಬಿಡಿಸಿದರೆ ಜಾರ್ಜ್​ ಲಿಂಡೆ 35, ರಬಡಾ 21, ಪ್ಲೆಸಿಸ್​ 23 ರನ್​ ಗಳಿಸಿದರು.

ಪಾಕಿಸ್ತಾನ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಪದಾರ್ಪಣೆ ಬೌಲರ್​ ನಯುಮನ್​ ಅಲಿ 2, ಯಾಸಿರ್​ ಶಾ 3, ಶಾಹೀನ್​ ಅಫ್ರಿದಿ 2 ಹಾಗೂ ಹಸನ್​ ಅಲಿ ಒಂದು ವಿಕೆಟ್​ ಪಡೆದರು.

ಇನ್ನು ಪಾಕಿಸ್ತಾನ ಮೊದಲ ಇನ್ನಿಂಗ್ಸ್​ನಲ್ಲಿ ಕಳಪೆ ಆರಂಭ ಪಡೆದಿದ್ದು, ಕೇವಲ 34 ರನ್​ ​ಗಳಿಸುವಷ್ಟರಲ್ಲಿ 4 ವಿಕೆಟ್​ ಕಳೆದುಕೊಂಡು ಆಘಾತಕ್ಕೊಳಗಾಗಿದೆ. ಆರಂಭಿಕರಾದ ಇಮ್ರಾನ್ ಬಟ್​(9), ಅಬೀದ್ ಅಲಿ(4) ರಬಾಡಗೆ ವಿಕೆಟ್​ ಒಪ್ಪಿಸಿದರೆ, ನಾಯಕ ಬಾಬರ್ ಅಜಮ್​ 7 ರನ್​ ಗಳಿಸಿ ಕೇಶವ್​ ಮಹಾರಾಜ್​ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ನೈಟ್ ವಾಚ್​ಮ್ಯಾನ್ ಆಗಿ ಬಂದಿದ್ದ ಶಾಹೀನ್ ಅಫ್ರಿದಿ ಶೂನ್ಯಕ್ಕೆ ಔಟ್​ ಆಗಿದ್ದಾರೆ.

ಇದನ್ನು ಓದಿ:ಕೊಹ್ಲಿ ಭಾರತವನ್ನು ಕಠಿಣವಾಗಿಸಿದ್ದಾರೆ, ಯಾರಿಂದಲೂ ಬೆದರಿಸಲಾಗುವುದಿಲ್ಲ: ನಾಸಿರ್ ಹುಸೇನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.