ETV Bharat / sports

ವೆಸ್ಟ್​ ಇಂಡೀಸ್ ತಂಡದ ಹೋಪ್​ ಬ್ರದರ್ಸ್​ಗೆ ಕೊರೊನಾ ಪಾಸಿಟಿವ್​!

author img

By

Published : Jan 27, 2021, 8:10 PM IST

ಟೂರ್ನಿಗಾಗಿ 15 ಮಂದಿ ತಂಡವನ್ನು ಈಗಾಗಲೇ ಘೋಷಿಸಲಾಗಿತ್ತು. ಇದೀಗ ಶಾಯ್ ಹೋಪ್ ಬದಲಿಗೆ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ಟೆವಿನ್ ವಾಲ್ಕಟ್​ ಮತ್ತು ಕೈಲ್ ಹೋಪ್ ಬದಲಿಗೆ ಜಕಾರಿ ಮೆಕಾಸ್ಕಿಯನ್ನು ಆಯ್ಕೆ ಮಾಡಲಾಗಿದೆ..

Shai and Kyle Hope test positive for COVID-19
Shai and Kyle Hope test positive for COVID-19

ಬ್ರಿಡ್ಜ್​ಟೌನ್​(ಬಾರ್ಬಡೊಸ್​) : ವೆಸ್ಟ್​ ಇಂಡೀಸ್‌ ತಂಡದ ಸ್ಟಾರ್​ ಬ್ಯಾಟ್ಸ್​ಮನ್​​ ಶಾಯ್ ಹೋಪ್​ ಮತ್ತು ಅವರ ಅಣ್ಣ ಕೈಲ್​ ಹೋಪ್​ಗೆ ಕೊರೊನಾ ಸೋಂಕು ತಗುಲಿದ್ದು, ಮುಂಬುರುವ ಸೂಪರ್​ 50 ಕಪ್​ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ಕ್ರಿಕೆಟ್​ ವೆಸ್ಟ್​ ಇಂಡೀಸ್​ 50 ಓವರ್​ಗಳ ದೇಶಿ ಟೂರ್ನಿಯನ್ನು ಫೆಬ್ರವರಿಯಲ್ಲಿ ಸೂಪರ್​ 50 ಕಪ್​ ಮೂಲಕ ಪುನಾರಂಭಿಸುವುದಾಗಿ ಇತ್ತೀಚೆಗೆ ಘೋಷಿಸಿತ್ತು.

ಕೈಲ್  ಹೋಪ್
ಕೈಲ್ ಹೋಪ್

"ಬಾರ್ಬಡೊಸ್​ ತಂಡದ ಸಂಪೂರ್ಣ ಕೋವಿಡ್​ ಪರೀಕ್ಷೆಯ ಫಲಿತಾಂಶ ಭಾನುವಾರ ಹೊರ ಬಂದಿದೆ. ಶಾಯ್​ ಹೋಪ್​ ಮತ್ತು ಕೈಲ್ ಹೋಪ್​ಗೆ ಕೋವಿಡ್​-19 ಪಾಸಿಟಿವ್​ ಎಂದು ದೃಢಪಟ್ಟಿದೆ. ಅವರಿಬ್ಬರನ್ನು ಬಾರ್ಬಡೊಸ್​ ಸರ್ಕಾರದ ಪ್ರೋಟೋಕಾಲ್​ಗಳನ್ವಯ ಐಸೊಲೇಸನ್​ನಲ್ಲಿ ಇರಿಸಲಾಗಿದೆ" ಎಂದು ಬಾರ್ಬಡೊಸ್ ಕ್ರಿಕೆಟ್​ ಬೋರ್ಡ್​ ಹೇಳಿಕೆ ಬಿಡುಗಡೆ ಮಾಡಿದೆ.

ಶಾಯ್ ಹೋಪ್
ಶಾಯ್ ಹೋಪ್

ಟೂರ್ನಿಗಾಗಿ 15 ಮಂದಿ ತಂಡವನ್ನು ಈಗಾಗಲೇ ಘೋಷಿಸಲಾಗಿತ್ತು. ಇದೀಗ ಶಾಯ್ ಹೋಪ್ ಬದಲಿಗೆ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ಟೆವಿನ್ ವಾಲ್ಕಟ್​ ಮತ್ತು ಕೈಲ್ ಹೋಪ್ ಬದಲಿಗೆ ಜಕಾರಿ ಮೆಕಾಸ್ಕಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ಕ್ರಿಕೆಟ್ ಬೋರ್ಡ್​ ತಿಳಿಸಿದೆ.

ಇದನ್ನು ಓದಿ:ಚಿಂತೆ ಪಡಬೇಕಾಗಿಲ್ಲ, ಗಂಗೂಲಿ ತಪಾಸಣೆಗಷ್ಟೇ ಬಂದಿದ್ದಾರೆ : ಆಸ್ಪತ್ರೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.