ETV Bharat / sports

ಅಫ್ರಿದಿ ಪ್ರಕಾರ ಈ ಆಟಗಾರ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಲಿದ್ದಾರಂತೆ!

author img

By

Published : Oct 3, 2019, 1:04 PM IST

ಶ್ರೀಲಂಕಾ ವಿರುದ್ಧ ಪಾಕಿಸ್ತಾನ ತಂಡ ಸರಣಿ ಜಯಿಸದ ನಂತರ ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಮಾತನಾಡಿರುವ ಅಫ್ರಿದಿ ಮುಂದಿನ ದಿನಗಳಲ್ಲಿ ಬಾಬರ್​ ಖಂಡಿತ ಫಾಖರ್ ಝಮಾನ್​ ರಂತೆ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಲು ಅರ್ಹರಾಗಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ.

Shahid Afridi

ಕರಾಚಿ: ಶ್ರೀಲಂಕಾ ವಿರುದ್ಧ ಎರಡನೇ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿ, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಬಾಬರ್​ ಅಜಂ ಪಾಕಿಸ್ತಾನದ ಪರ 2ನೇ ದ್ವಿಶತಕ ಸಿಡಿಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಭವಿಷ್ಯ ನುಡಿದಿದ್ದಾರೆ.

ಶ್ರೀಲಂಕಾ ವಿರುದ್ಧ ಪಾಕಿಸ್ತಾನ ತಂಡ ಏಕದಿನ ಸರಣಿ ಜಯಿಸದ ನಂತರ ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಮಾತನಾಡಿರುವ ಅಫ್ರಿದಿ, ಮುಂದಿನ ದಿನಗಳಲ್ಲಿ ಬಾಬರ್​ ಖಂಡಿತ ಫಾಖರ್​ ಝಮಾನ್​ ರಂತೆ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಲು ಅರ್ಹರಾಗಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ.

Shahid Afridibabar
ಬಾಬರ್​ ಅಜಂ

"ಬಾಬರ್​ ನೀನು ಯಾವಾಗಲು ಸುದೀರ್ಘ ಇನ್ನಿಂಗ್ಸ್​ ಆಡಬೇಕೆಂದು ನಾನು ಬಯಸುತ್ತೇನೆ. ನೀನೊಬ್ಬ 50 ರನ್​ಗಳಿಸುವ ಆಟಗಾರನಲ್ಲ. ನಿನ್ನಿಂದ 100,150 ಅಥವಾ 200 ರನ್​ಗಳಿಸುವ ಸಾಮರ್ಥ್ಯವಿದೆ. ನೀನು ಪಾಕಿಸ್ತಾನ ತಂಡದ ಬೆನ್ನೆಲುಬಿದ್ದಂತೆ" ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಬಾಬರ್​ ತಮ್ಮ 11 ನೇ ಶತಕ ಸಿಡಿಸುವ ಮೂಲಕ ವೇಗವಾಗಿ ಏಕದಿನ ಕ್ರಿಕೆಟ್​ನಲ್ಲಿ 11 ಶತಕ ಸಿಡಿಸಿ ಕೊಹ್ಲಿ ಹಿಂದಿಕ್ಕಿದ್ದರು. ಕೊಹ್ಲಿ ಈ ಸಾಧನೆಗಾಗಿ 82 ಇನ್ನಿಂಗ್ಸ್​ ತೆಗೆದುಕೊಂಡರೆ, ಬಾಬರ್​ 71 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಹಾಶಿಮ್​ ಆಮ್ಲಾ, ಡಿಕಾಕ್​ 64 ಹಾಗೂ 65 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.