ETV Bharat / sports

ಸತತ 8ನೇ ವರ್ಷವೂ ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತದ ದಾಖಲೆ ರೋಹಿತ್​ ಹೆಸರಿಗೆ!

author img

By

Published : Dec 2, 2020, 7:45 PM IST

Updated : Dec 2, 2020, 8:44 PM IST

ಈ ವರ್ಷ ಭಾರತ ತಂಡದ ಪರ ಕೇವಲ 3 ಆಟಗಾರರು ಮಾತ್ರ ಶತಕ ಸಿಡಿಸಿದ್ದಾರೆ. ರೋಹಿತ್ 119, ರಾಹುಲ್ 112, ಶ್ರೆಯಸ್ ಅಯ್ಯರ್ 103 ರನ್​ಗಳಿಸಿದ್ದಾರೆ. 2013ರಿಂದ 2020ರವರೆಗೆ ಭಾರತದ ಪರ ವೈಯಕ್ತಿಕ ರನ್​ ದಾಖಲೆ ಅವರ ಹೆಸರಿನಲ್ಲೇ ಉಳಿದಿದೆ..

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ

ಕ್ಯಾನ್ಬೆರಾ : ಬುಧವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ 13 ರನ್​ಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ.

ಆದರೆ, ಈ ಸರಣಿಯಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್​ಮನ್ ಶತಕಗಳಿಸುವಲ್ಲಿ ವಿಫಲರಾದರು. ಇದು ಈ ವರ್ಷದಲ್ಲಿ ಭಾರತದ ಕೊನೆಯ ಏಕದಿನ ಸರಣಿಯಾಗಿರುವುದರಿಂದ ಮಹತ್ವದ ದಾಖಲೆಯೊಂದು ಹಿಟ್​ಮ್ಯಾನ್​ ಹೆಸರಿನಲ್ಲಿ ಉಳಿದುಕೊಂಡಿದೆ.

ರೋಹಿತ್ ಶರ್ಮಾ ಈ ವರ್ಷ ಕೇವಲ 3 ಏಕದಿನ ಪಂದ್ಯವನ್ನು ಮಾತ್ರ ಆಡಿದ್ದಾರೆ. ಆದರೂ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಸಿಡಿಸಿದ್ದ 119 ರನ್​ 2020ರಲ್ಲಿ ಭಾರತ ತಂಡದ ಬ್ಯಾಟ್ಸ್​ಮನ್​ಗಳು ದಾಖಲಿಸಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿ ಉಳಿದುಕೊಂಡಿದೆ.

2008ರ ಬಳಿಕ ಮೊದಲ ಬಾರಿಗೆ ಏಕದಿನ ಕ್ರಿಕೆಟ್​ನಲ್ಲಿ ಶತಕವಿಲ್ಲದ ವರ್ಷ ಕಂಡ ಕೊಹ್ಲಿ

ಈ ವರ್ಷ ಭಾರತ ತಂಡದ ಪರ ಕೇವಲ 3 ಆಟಗಾರರು ಮಾತ್ರ ಶತಕ ಸಿಡಿಸಿದ್ದಾರೆ. ರೋಹಿತ್ 119, ರಾಹುಲ್ 112, ಶ್ರೆಯಸ್ ಅಯ್ಯರ್ 103 ರನ್​ಗಳಿಸಿದ್ದಾರೆ. 2013ರಿಂದ 2020ರವರೆಗೆ ಭಾರತದ ಪರ ವೈಯಕ್ತಿಕ ರನ್​ ದಾಖಲೆ ಅವರ ಹೆಸರಿನಲ್ಲೇ ಉಳಿದಿದೆ.

ರೋಹಿತ್ ಶರ್ಮಾ 2013 ರಿಂದ 2020ರವರೆಗೆ ಸತತ 8 ವರ್ಷಗಳಲ್ಲಿ ಕ್ರಮವಾಗಿ, 209, 264, 150, 171, 208, 162, 159 ಹಾಗೂ 119 ರನ್​ ಗಳಿಸಿದ್ದಾರೆ.

Last Updated : Dec 2, 2020, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.