ETV Bharat / sports

ಹಿರಿಯ ಕ್ರಿಕೆಟಿಗ ಕಸ್ತೂರಿ ರಂಗನ್​ ನಿಧನಕ್ಕೆ ಕೆಎಸ್​​​ಸಿಎ ಸಂತಾಪ

author img

By

Published : Aug 19, 2020, 5:41 PM IST

ಬಿಸಿಸಿಐ ಪಿಚ್ ಕ್ಯುರೇಟರ್ ಹಾಗೂ ಕರ್ನಾಟಕದ ಮಾಜಿ ಕ್ರಿಕೆಟ್ ಆಟಗಾರ ಗೋಪಾಲಸ್ವಾಮಿ ಕಸ್ತೂರಿ ರಂಗನ್ (89) ಅವರು ಇಂದು ಹೃದಯಾಘಾತದಿಂದ ‌ಕೊನೆಯುಸಿರೆಳಿದಿದ್ದಾರೆ.

G. Kasturirangan passes away
ಗೋಪಾಲಸ್ವಾಮಿ ಕಸ್ತೂರಿ ರಂಗನ್ ನಿಧನ

ಬೆಂಗಳೂರು: ಬಿಸಿಸಿಐ ಪಿಚ್ ಕ್ಯುರೇಟರ್ ಹಾಗೂ ಕರ್ನಾಟಕದ ಮಾಜಿ ಕ್ರಿಕೆಟ್ ಆಟಗಾರ ಗೋಪಾಲಸ್ವಾಮಿ ಕಸ್ತೂರಿ ರಂಗನ್ (89) ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​​​ಸಿಎ) ಸಂತಾಪ ಸೂಚಿಸಿದೆ.

ನಗರದ ಚಾಮರಾಜಪೇಟೆಯ ತಮ್ಮ ನಿವಾಸದಲ್ಲಿ ಕಸ್ತೂರಿ ರಂಗನ್ ಅವರು ಬೆಳಗ್ಗೆ ಹೃದಯಾಘಾತದಿಂದ ‌ಕೊನೆಯುಸಿರೆಳಿದಿದ್ದಾರೆ.

ಕಸ್ತೂರಿ ರಂಗನ್ 1948 ರಿಂದ 1963ರವರೆಗೆ ರಣಜಿ ಟ್ರೋಫಿಯಲ್ಲಿ ಕರ್ನಾಟಕದ (ಅಂದಿನ ಮೈಸೂರು) ಪರ ಆಡಿದ್ದರು. ಬಲಗೈ ಬೌಲರ್ ಆಗಿದ್ದ ಅವರು, ಪ್ರಥಮ ದರ್ಜೆ ಕ್ರಿಕೆಟ್​​​ನಲ್ಲಿ 36 ಪಂದ್ಯಗಳಲ್ಲಿ 421 ರನ್ ಹಾಗೂ 94 ವಿಕೆಟ್ ಕಬಳಿಸಿದ್ದಾರೆ.

G. Kasturirangan passes away
ಪಿಚ್​​ ಪರಿಶೀಲಿಸಿದ್ದ ಹಿರಿಯ ಕ್ರಿಕೆಟಿಗ ಕಸ್ತೂರಿ ರಂಗನ್

ಅಲ್ಲದೆ 1951-52 ಸಾಲಿನ ರಣಜಿಯಲ್ಲಿ 12 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದ ಕಸ್ತೂರಿ ರಂಗನ್ ಅವರಿಗೆ, 1952-53 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾಗುವ ಮೂಲಕ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದರು. ಇದಲ್ಲದೆ ಕಸ್ತೂರಿ ರಂಗನ್ ಅವರು ಕೆಎಸ್​​​ಸಿಎ ಉಪಾಧ್ಯಕ್ಷ ಹಾಗೂ ಪಿಚ್ ಕ್ಯುರೇಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.