ETV Bharat / sports

ಕೋಚ್ ಹುದ್ದೆ​ ರೇಸ್​​ನಲ್ಲಿ ಶಾಸ್ತ್ರಿ ಹಿಂದಿಕ್ಕಿದ್ದ ​ಹೆಸ್ಸನ್... ಫೇಲ್​ ಆದ ಶಾಸ್ತ್ರಿಗೆ ಮಣೆ ಯಾಕೆ!?

author img

By

Published : Aug 22, 2019, 8:18 PM IST

Updated : Aug 22, 2019, 8:25 PM IST

ಟೀಂ ಇಂಡಿಯಾ ಕ್ರಿಕೆಟ್​ ತಂಡದ ಕೋಚ್​ ಆಗಿ ರವಿಶಾಸ್ತ್ರಿ ಪುನರಾಯ್ಕೆಗೊಂಡಿದ್ದು, ಅವರ ಬದಲಿಗೆ ಕ್ರಿಕೆಟ್​ ಸಲಹಾ ಸಮಿತಿ ಮತ್ತೊಬ್ಬ ಅಭ್ಯರ್ಥಿ ಮೇಲೆ ಕಣ್ಣು ಹಾಕಿತ್ತು ಎಂದು ತಿಳಿದು ಬಂದಿದೆ.

ಟೀಂ ಇಂಡಿಯಾ ಕೋಚ್​ ಶಾಸ್ತ್ರಿ

ಮುಂಬೈ: ಟೀಂ ಇಂಡಿಯಾ ಕ್ರಿಕೆಟ್​​ನ ನೂತನ ಕೋಚ್​ ಆಗಿ ಹಾಲಿ ತರಬೇತುದಾರ ರವಿಶಾಸ್ತ್ರಿ ಆಯ್ಕೆಗೊಂಡಿದ್ದು, 2012ರ ಐಸಿಸಿ ಟಿ-20 ವಿಶ್ವಕಪ್​​ವರೆಗೂ ಅವರೇ ತಂಡದ ಗುರುವಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರ ಮಧ್ಯೆ ಮಹತ್ವದ ವಿಚಾರವೊಂದು ಹೊರಬಿದ್ದಿದೆ.

ಆಗಸ್ಟ್​​ 16ರಂದು ನಡೆದಿದ್ದ ಸಂದರ್ಶನದಲ್ಲಿ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಹೊಸ ಕೋಚ್ ಹೆಸರನ್ನು ಅಧಿಕೃತವಾಗಿ ರವಿಶಾಸ್ತ್ರಿ ಹೆಸರು ಘೋಷಣೆ ಮಾಡಿತ್ತು. ಸಂದರ್ಶನದಲ್ಲಿ ನ್ಯೂಜಿಲ್ಯಾಂಡ್​​ನ ಮಾಜಿ ಕೋಚ್​​ ಮೈಕ್​ ಹೆಸ್ಸನ್​​, ರವಿಶಾಸ್ತ್ರಿ ಹಿಂದಿಕ್ಕಿ ಸಂದರ್ಶನಕಾರರ ಗಮನ ಸಹ ಸೆಳೆದಿದ್ದರು. ಆದರೂ ಕ್ರಿಕೆಟ್​ ಸಲಹಾ ಸಮಿತಿ ಹಾಲಿ ಕೋಚ್​ ಶಾಸ್ತ್ರಿಗೆ ಮಣೆ ಹಾಕಿತು.

ಮೈಕ್​​ ಹೆಸ್ಸನ್/Mike Hesson
ಮೈಕ್​​ ಹೆಸ್ಸನ್

2012ರಿಂದ 2018ರವರೆಗೆ ನ್ಯೂಜಿಲ್ಯಾಂಡ್​ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸಿರುವ ಮೈಕ್​ ಹೆಸ್ಸನ್​​, ತಂಡವನ್ನ ಅತ್ಯದ್ಭುತವಾಗಿ ಕಟ್ಟಿದ್ದಾರೆ. ಇವರ ಕೋಚ್​ ಆದ ಸಮಯದಲ್ಲೇ ಕಿವೀಸ್​ ತಂಡ ಅತ್ಯದ್ಬುತ ಪ್ರದರ್ಶನ ನೀಡಿದ್ದು,2015ರಲ್ಲಿ ಮೊದಲ ಬಾರಿಗೆ ತಂಡ ಏಕದಿನ ವಿಶ್ವಕಪ್​ ಫೈನಲ್ ಪ್ರವೇಶ ಪಡೆದುಕೊಂಡಿದೆ. ಜತೆಗೆ ಅವರ ಕಟ್ಟಿದ ತಂಡವೇ 2019ರ ಏಕದಿನ ವಿಶ್ವಕಪ್ ಫೈನಲ್​ಗೂ ಪ್ರವೇಶ ಪಡೆದುಕೊಂಡಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸ್ಸನ್​ ಹೆಚ್ಚು ಕ್ರಿಕೆಟ್​ ಆಡದೇ ಇರುವುದು ಅವರಿಗೆ ಮುಳುವಾಯಿತು ಎಂದು ತಿಳಿದು ಬಂದಿದೆ. 2018ರಲ್ಲಿ ಕಿಂಗ್ಸ್​ ಇಲೆವೆನ್​​ ಪಂಜಾಬ್​ ತಂಡದ ಕೋಚ್​ ಆಗಿದ್ದ ಹೆಸ್ಸನ್​ ಆ ಹುದ್ದೆ ಸಹ ತೊರೆದಿದ್ದಾರೆ.

ಇನ್ನು ತಂಡದ ಕೋಚ್​ ಆಗಿ ಆಯ್ಕೆ ಮಾಡುವುದಕ್ಕೂ ಮುನ್ನ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಜತೆ ಮಾತನಾಡಿದಾಗ ಮತ್ತೊಂದು ಅವಧಿಗೆ ಶಾಸ್ತ್ರಿಗೆ ಚಾನ್ಸ್​ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಸಹ ಲಭ್ಯವಾಗಿದೆ. ಇನ್ನು ಶಾಸ್ತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 80 ಟೆಸ್ಟ್​ ಪಂದ್ಯ ಹಾಗೂ 150 ಏಕದಿನ ಪಂದ್ಯಗಳನ್ನಾಡಿರುವುದು ಕೂಡ ಅವರ ಕೈ ಹಿಡಿದಿದೆ ಎಂದು ತಿಳಿದು ಬಂದಿದೆ.

Intro:Body:

ಕೋಚ್ ಹುದ್ದೆ​ ರೇಸ್​​ನಲ್ಲಿ ಶಾಸ್ತ್ರಿ ಹಿಂದಿಕ್ಕಿದ್ದ ಮೈಕ್​​ ಹೆಸ್ಸನ್... ಫೇಲ್​ ಆದ ಶಾಸ್ತ್ರಿಗೆ ಮಣೆ ಹಾಕಿದ್ಯಾಕೆ!? 

ಮುಂಬೈ: ಟೀಂ ಇಂಡಿಯಾ ಕ್ರಿಕೆಟ್​​ನ ನೂತನ ಕೋಚ್​ ಆಗಿ ಹಾಲಿ ತರಬೇತುದಾರ ರವಿಶಾಸ್ತ್ರಿ ಆಯ್ಕೆಗೊಂಡಿದ್ದು, 2012ರ ಐಸಿಸಿ ಟಿ-20 ವಿಶ್ವಕಪ್​​ವರೆಗೂ ಅವರೇ ತಂಡದ ಗುರುವಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರ ಮಧ್ಯೆ ಮಹತ್ವದ ವಿಚಾರವೊಂದು ಹೊರಬಿದ್ದಿದೆ. 

ಆಗಸ್ಟ್​​ 16ರಂದು ನಡೆದಿದ್ದ ಸಂದರ್ಶನದಲ್ಲಿ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಹೊಸ ಕೋಚ್ ಹೆಸರನ್ನು ಅಧಿಕೃತವಾಗಿ ರವಿಶಾಸ್ತ್ರಿ ಹೆಸರು ಘೋಷಣೆ ಮಾಡಿತ್ತು. ಸಂದರ್ಶನದಲ್ಲಿ ನ್ಯೂಜಿಲ್ಯಾಂಡ್​​ನ ಮಾಜಿ ಕೋಚ್​​ ಮೈಕ್​ ಹೆಸ್ಸನ್​​, ರವಿಶಾಸ್ತ್ರಿ ಹಿಂದಿಕ್ಕಿ ಸಂದರ್ಶನಕಾರರ ಗಮನ ಸಹ ಸೆಳೆದಿದ್ದರು. ಆದರೂ ಕ್ರಿಕೆಟ್​ ಸಲಹಾ ಸಮಿತಿ ಹಾಲಿ ಕೋಚ್​ ಶಾಸ್ತ್ರಿಗೆ ಮಣೆ ಹಾಕಿತು. 

2012ರಿಂದ 2018ರವರೆಗೆ ನ್ಯೂಜಿಲ್ಯಾಂಡ್​ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸಿರುವ ಮೈಕ್​ ಹೆಸ್ಸನ್​​, ತಂಡವನ್ನ ಅತ್ಯದ್ಭುತವಾಗಿ ಕಟ್ಟಿದ್ದಾರೆ. ಇವರ ಕೋಚ್​ ಆದ ಸಮಯದಲ್ಲೇ ಕಿವೀಸ್​ ತಂಡ ಅತ್ಯದ್ಬುತ ಪ್ರದರ್ಶನ ನೀಡಿದ್ದು,2015ರಲ್ಲಿ ಮೊದಲ ಬಾರಿಗೆ ತಂಡ ಏಕದಿನ ವಿಶ್ವಕಪ್​ ಫೈನಲ್ ಪ್ರವೇಶ ಪಡೆದುಕೊಂಡಿದೆ. ಜತೆಗೆ ಅವರ ಕಟ್ಟಿದ ತಂಡವೇ 2019ರ ಏಕದಿನ ವಿಶ್ವಕಪ್ ಫೈನಲ್​ಗೂ ಪ್ರವೇಶ ಪಡೆದುಕೊಂಡಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸ್ಸನ್​ ಹೆಚ್ಚು ಕ್ರಿಕೆಟ್​ ಆಡದೇ ಇರುವುದು ಅವರಿಗೆ ಮುಳುವಾಯಿತು ಎಂದು ತಿಳಿದು ಬಂದಿದೆ. 2018ರಲ್ಲಿ ಕಿಂಗ್ಸ್​ ಇಲೆವೆನ್​​ ಪಂಜಾಬ್​ ತಂಡದ ಕೋಚ್​ ಆಗಿದ್ದ ಹೆಸ್ಸನ್​ ಆ ಹುದ್ದೆ ಸಹ ತೊರೆದಿದ್ದಾರೆ. 

ಇನ್ನು ತಂಡದ ಕೋಚ್​ ಆಗಿ ಆಯ್ಕೆ ಮಾಡುವುದಕ್ಕೂ ಮುನ್ನ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಜತೆ ಮಾತನಾಡಿದಾಗ ಮತ್ತೊಂದು ಅವಧಿಗೆ ಶಾಸ್ತ್ರಿಗೆ ಚಾನ್ಸ್​ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಸಹ ಲಭ್ಯವಾಗಿದೆ. ಇನ್ನು ಶಾಸ್ತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 80 ಟೆಸ್ಟ್​ ಪಂದ್ಯ ಹಾಗೂ 150 ಏಕದಿನ ಪಂದ್ಯಗಳನ್ನಾಡಿರುವುದು ಕೂಡ ಅವರ ಕೈ ಹಿಡಿದಿದೆ ಎಂದು ತಿಳಿದು ಬಂದಿದೆ. 

Conclusion:
Last Updated : Aug 22, 2019, 8:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.