ETV Bharat / sports

ಗೊಂದಲದಲ್ಲಿ ಬೂಮ್ರಾ ಫಿಟ್ನೆಸ್​ ಟೆಸ್ಟ್​.. ದ್ರಾವಿಡ್ ಜತೆ ಮಾತಾಡ್ತಾರಂತೆ ಗಂಗೂಲಿ!

author img

By

Published : Dec 20, 2019, 4:45 PM IST

ಟೀಂ ಇಂಡಿಯಾ ಸ್ಟಾರ್​ ವೇಗಿ ಬೂಮ್ರಾ ಬೆನ್ನು ನೋವಿನಿಂದ ಚೇತರಿಸಿಕೊಂಡಿದ್ದರಿಂದ ಕಂಬ್ಯಾಕ್ ಮಾಡಲು ಸಿದ್ದರಿದ್ದಾರೆ. ಆದರೆ, ಫಿಟ್ನೆಸ್​ ಟೆಸ್ಟ್​ ಮಾಡಲು ಸಾಧ್ಯವಿಲ್ಲ ಎಂದು ಎನ್​ಸಿಎ ಹೇಳಿದೆ.

ಗೊಂದಲದಲ್ಲಿ ಬೂಮ್ರಾ ಫಿಟ್ನೆಸ್​ ಟೆಸ್ಟ್,NCA refuses to conduct the fitness
ಗೊಂದಲದಲ್ಲಿ ಬೂಮ್ರಾ ಫಿಟ್ನೆಸ್​ ಟೆಸ್ಟ್

ಹೈದರಾಬಾದ್: ಬೆನ್ನು ನೋವಿನಿಂದ ಬಳಲುತ್ತಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಕಂಬ್ಯಾಕ್ ಮಾಡಲು ಸಿದ್ದರಾಗಿದ್ದಾರೆ. ಆದರೆ, ಬೂಮ್ರಾ ಅವರಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಫಿಟ್ನೆಸ್​ ಟೆಸ್ಟ್​ ಮಾಡಲು ಸಾಧ್ಯವಿಲ್ಲ ಎಂದು ಎನ್​ಸಿಎ ಮುಖ್ಯಸ್ಥ ರಾಹುಲ್​ ದ್ರಾವಿಡ್ ಹೇಳಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿದ್ದ ಬೂಮ್ರಾ ಇಂಗ್ಲೆಂಡ್​ನ ತಜ್ಞರ ಮೊರೆಹೋಗಿ ಚೇತರಿಕೆ ಕಂಡಿದ್ದಾರೆ. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸಹಾಯ ಪಡೆದಿಲ್ಲ. ಹೀಗಾಗಿ ಎನ್​​ಸಿಎಯಿಂದ ಫಿಟ್ನೆಸ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಅವರು ಫಿಟ್ ಆಗಿದ್ದರೆ ಕ್ರಿಕೆಟ್ ಆಡಬಹುದು ಎಂದು ಎನ್​ಸಿಎ ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಪ್ರತಿಯೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟ್​ ಆಟಗಾರನಿಗೆ ಎನ್​ಸಿಎ ಪ್ರಮುಖ ಪಾತ್ರ ವಹಿಸುತ್ತದೆ. ನಿಜಕ್ಕೂ ಸಮಸ್ಯೆ ಏನು ಎಂಬುದನ್ನ ದ್ರಾವಿಡ್ ಜೊತೆ ಚರ್ಚಿಸುತ್ತೇನೆ ಎಂದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದ ಬೂಮ್ರಾ ಚೇತರಿಕೆ ಕಂಡಿದ್ದಾರೆ. ವೆಸ್ಟ್​ ಇಂಡೀಸ್ ವಿರುದ್ಧದ ದ್ವಿತೀಯ ಪಂದ್ಯಕ್ಕೂ ಮುನ್ನ ನೆಟ್​​ನಲ್ಲಿ ಬೌಲಿಂಗ್​ ಮಾಡಿದ್ದರಿಂದ ಕಂಬ್ಯಾಕ್​ ಮಾಡಲು ಸಿದ್ದರಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.