ETV Bharat / sports

ರೈತರ ಪ್ರತಿಭಟನೆಗೆ ಮಂದೀಪ್ ಸಿಂಗ್ ಸಾಥ್​: ಸಿಂಘು ಗಡಿಯಲ್ಲಿ ಒಂದು ದಿನ ಕಳೆದ ಪಂಜಾಬ್ ಕ್ರಿಕೆಟರ್

author img

By

Published : Dec 9, 2020, 10:35 PM IST

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕೈ ಜೋಡಿಸಿರುವ ಮಂದೀಪ್ ಸಿಂಗ್, ಅನ್ನದಾತರರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

Punjab Ranji captain Mandeep joins farmers' protest
ರೈತರ ಪ್ರತಿಭಟನೆಗೆ ಮಂದೀಪ್ ಸಿಂಗ್ ಸಾಥ್​

ನವದೆಹಲಿ: ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಗೆ ತೆರಳಿರುವ ಪಂಜಾಬ್ ರಣಜಿ ತಂಡದ ನಾಯಕ ಮಂದೀಪ್ ಸಿಂಗ್ ರೈತರೊಂದಿಗೆ ಒಂದು ದಿನ ಕಳೆದಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕೈ ಜೋಡಿಸಿರುವ ಮಂದೀಪ್ ಸಿಂಗ್, ಅನ್ನದಾತರರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ 28 ವರ್ಷದ ಕ್ರಿಕೆಟಿಗ ತಮ್ಮ ಹಿರಿಯ ಸಹೋದರ ಹರ್ವಿಂದರ್ ಸಿಂಗ್ ಮತ್ತು ಮೂವರು ಸ್ನೇಹಿತರೊಂದಿಗೆ ಸೋಮವಾರ ಸಂಜೆ ದೆಹಲಿಗೆ ತಲುಪಿ ಮಂಗಳವಾರ ಸಂಜೆ ಜಲಂಧರ್‌ಗೆ ಮರಳಿದ್ದಾರೆ.

ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿರುವ ಮಂ​ದೀಪ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ದೆಹಲಿ ಗಡಿಯಲ್ಲಿ ಹಿರಿಯರು ಮತ್ತು ರೈತರು ಪ್ರತಿಭಟನೆ ನಡೆಸುತ್ತಿದ್ದು, ನಾನು ಕೂಡ ಅವರಿಗೆ ಬಂಬಲ ನೀಡುತ್ತಿದ್ದೇನೆ. ಸಿಂಹಗಳಂತ ಹೃದಯವನ್ನು ಹೊಂದಿರುವ ರೈತರು, ಕೃಷಿ ಮಸೂದೆಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಈ ಸಮಸ್ಯೆಗೆ ಪರಿಹಾರ ಸಿಕ್ಕರೆ ರೈತರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತದೆ ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.