ETV Bharat / sports

ಗೆಲುವಿನ ಓಟ ಮುಂದುವರಿಸಿದ ದಬಾಂಗ್​ ಡೆಲ್ಲಿ: ಸತತ 5ನೇ ಜಯ ಕಂಡ ಯುಪಿ ಯೋಧ

author img

By

Published : Sep 16, 2019, 11:03 PM IST

ಪ್ರೊ ಕಬಡ್ಡಿ ಲೀಗ್​ನ 7 ನೇ ಸೀಸನ್​ನಲ್ಲಿ ಇಂದು ನಡೆದ ಪಂದ್ಯಗಳಲ್ಲಿ ದಬಾಂಗ್​ ಡೆಲ್ಲಿ-ತೆಲುಗು ಟೈಟನ್ಸ್​ ತಂಡವನ್ನು, ಯುಪಿ ಯೋದ ಜೈಪುರ್​ ಪಿಂಕ್​ ಪ್ಯಾಂಥರ್ಸ್​ ತಂಡವನ್ನು ಮಣಿಸಿ ಗೆಲುವಿನ ಓಟವನ್ನು ಮುಂದುವರಿಸಿದೆ.

Pro Kabaddi

ಪುಣೆ: ಪ್ರೊ ಕಬಡ್ಡಿ ಲೀಗ್​ನ ಆರಂಭದಿಂದಲೂ ಅದ್ಭುತ ಪ್ರದರ್ಶನ ತೋರುತ್ತಿರುವ ದಬಾಂಗ್​ ಡೆಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ.

ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ 94ನೇ ಪಂದ್ಯದಲ್ಲಿ ದಬಾಂಗ್​ ಡೆಲ್ಲಿ 37-29 ರಿಂದ ತೆಲುಗು ಟೈಟನ್ಸ್​ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ತನ್ನ ಚಾಣಾಕ್ಷ ಆಟದ ಮೂಲಕ ತೆಲುಗು ಟೈಟನ್ಸ್​ ತಂಡವನ್ನು 2 ಬಾರಿ ಆಲೌಟ್​ ಮಾಡಿದ್ರು. ನವೀನ್​ ಕುಮಾರ್​ 12, ವಿನಯ್​ 6, ಅನಿಲ್​ ಕುಮಾರ್​ ,ಚಂದ್ರನ್​ ರಂಜಿತ್​, ರವೀಂದ್ರ ಪಹಲ್​ ತಲಾ 4 ಅಂಕ ಪಡೆದು ಗೆಲುವಿನ ರೂವಾರಿಯಾದರು.

Pro Kabaddi
ಯುಪಿ ಯೋಧ ತಂಡದ ಶ್ರೀಕಾಂತ್​ ಜಾಧವ್​

ತೆಲುಗು ಟೈಟನ್ಸ್​ ಪರ ಸಿದ್ಧಾರ್ಥ್​ ದೇಸಾಯಿ 12, ರಾಕೇಶ್​ ಗೌಡ 5, ಫರಾದ್​ 4 ಅಬೋಝರ್ ​3 ಅಂಕ ಪಡೆದು ಉತ್ತಮ ಪೈಪೋಟಿ ನೀಡಿದ್ರು.

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಯುಪಿ ಯೋಧ 38-32 ರಲ್ಲಿ ಜೈಪುರ್​ ಪಿಂಕ್​ ಪ್ಯಾಂಥರ್ಸ್​ ವಿರುದ್ಧ ಭರ್ಜರಿ ಜಯ ಸಾಧಿಸಿತು. ಶ್ರೀಕಾಂತ್​ ಜಾಧವ್​ 9, ರಿಷಾಂಕ್​ ದೇವಾಡಿಗ 8, ಸುರೇಂದರ್​​ ಗಿಲ್​7 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಪ್ಯಾಂಥರ್ಸ್​ ಪರ ದೀಪಕ್​ ನಿವಾಸ್​ ಹೂಡ 13 ಅಂಕ ಪಡೆದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಮತ್ತೋರ್ವ ಸ್ಟಾರ್​ ರೈಡರ್​ ಸುಶಿಲ್​ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.