ETV Bharat / sports

ಆಸೀಸ್‌-ಭಾರತ ಏಕದಿನ ಸರಣಿ.. ಕಪ್‌ ಇದೇ ತಂಡದ ಪಾಲಾಗುತ್ತೆ ಎಂದು ಪಾಂಟಿಂಗ್ ಭವಿಷ್ಯ​!

author img

By

Published : Jan 13, 2020, 7:24 PM IST

'ಆಸ್ಟ್ರೇಲಿಯಾ ವಿಶ್ವಕಪ್​ ಹಾಗೂ ತವರಿನ ಟೆಸ್ಟ್​ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಕಳೆದ ಏಕದಿನ ಸರಣಿಯ ಸೋಲನ್ನು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಭಾರತ ತಂಡವಿದೆ. ಆದರೆ, ಸರಣಿಯನ್ನು 2:1ರಲ್ಲಿ ಆಸೀಸ್‌ ಗೆಲ್ಲಲಿದೆ' ಎಂದು ಪಾಂಟಿಂಗ್ ಅಭಿಮಾನಿಯೊಬ್ಬರ ಪ್ರಶ್ನೆಗೆ​ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.

Ponting predicts
Ponting predicts

ಮುಂಬೈ: ಮಂಗಳವಾರದಿಂದ ಭಾರತದ ವಿರುದ್ಧ ಆರಂಭವಾಗಲಿರುವ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2-1ರಲ್ಲಿ ಗೆಲ್ಲಲಿದೆ ಎಂದು ಆಸೀಸ್‌ನ ಮಾಜಿ ನಾಯಕ ರಿಕಿ ಪಾಂಟಿಂಗ್​ ಭವಿಷ್ಯ ನುಡಿದ್ದಾರೆ.

ಮಂಗಳವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲಿವೆ. ಸರಣಿ ಆರಂಭಕ್ಕೂ ಮೊದಲೇ ಆಸೀಸ್​ ಮಾಜಿ ನಾಯಕ ರಿಕಿ ಪಾಂಟಿಂಗ್​ ಆಸ್ಟ್ರೇಲಿಯಾ 2-1ರಲ್ಲಿ ಸರಣಿ ಗೆಲ್ಲಲಿದೆ ಎಂದು ಟ್ವಿಟರ್​ನಲ್ಲಿ ಭವಿಷ್ಯ ನುಡಿದಿದ್ದಾರೆ.

'ಆಸ್ಟ್ರೇಲಿಯಾ ವಿಶ್ವಕಪ್​ ಹಾಗೂ ತವರಿನ ಟೆಸ್ಟ್​ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಕಳೆದ ಏಕದಿನ ಸರಣಿಯ ಸೋಲನ್ನು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಭಾರತ ತಂಡವಿದೆ. ಆದರೆ, ಸರಣಿಯನ್ನು 2:1ರಲ್ಲಿ ಆಸೀಸ್‌ ಗೆಲ್ಲಲಿದೆ' ಎಂದು ಪಾಂಟಿಂಗ್ ಅಭಿಮಾನಿಯೊಬ್ಬರ ಪ್ರಶ್ನೆಗೆ​ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.​

  • Australia will be full of confidence after an excellent World Cup and a great summer of Test cricket but India will be keen to redeem themselves from the last ODI series loss against Australia. Prediction: 2-1 Australia https://t.co/r5fIiLNs6Y

    — Ricky Ponting AO (@RickyPonting) January 12, 2020 " class="align-text-top noRightClick twitterSection" data=" ">

ಆಸೀಸ್‌ ತವರಿನಲ್ಲಿ ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್​ ತಂಡಗಳನ್ನು ಕ್ಲೀನ್​ಸ್ವೀಪ್ ಮಾಡಿದ ಆತ್ಮವಿಶ್ವಾಸದಲ್ಲಿದೆ. ಇತ್ತ ಭಾರತ ತಂಡ ಕೂಡ ಸತತ 2 ಟೆಸ್ಟ್​ ಸರಣಿ ಕ್ಲೀನ್​ ಸ್ವೀಪ್ ಮಾಡಿ ಎರಡು ಟಿ20 ಸರಣಿ ಹಾಗೂ ಒಂದು ಏಕದಿನ ಸರಣಿ ಗೆದ್ದಿರುವ ಆತ್ಮವಿಶ್ವಾಸದಲ್ಲಿದೆ. ಅಲ್ಲದೆ ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಸೇಡನ್ನು ತೀರಿಸಿಕೊಳ್ಳಲು ಕಾತುರದಿಂದಿದೆ.

ಆಸ್ಟ್ರೇಲಿಯಾ ತಂಡಕ್ಕೆ ಮಾರ್ನಸ್​ ಲಾಬುಶೇನ್​ ಸೇರಿಕೊಂಡಿರುವುದನ್ನು ಕುರಿತು ಮಾತನಾಡಿರುವ ಪಾಂಟಿಂಗ್​, 'ಲಾಬುಶೇನ್​ ಆಸೀಸ್‌ ಮಧ್ಯಮ ಕ್ರಮಾಂಕಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಸ್ಪಿನ್​ ಬೌಲಿಂಗ್​ಗೆ ಅತ್ಯುತ್ತಮ ಆಟಗಾರ. ವಿಕೆಟ್​ಗಳ ಮಧ್ಯೆ ರನ್​ ಕದಿಯುವುದರಲ್ಲಿ ನಿಸ್ಸೀಮ. ಫೀಲ್ಡಿಂಗ್​ನಲ್ಲಿ ಹಾಗೂ ತಂಡಕ್ಕೆ ಅಗತ್ಯವಿದ್ದಾಗ ಅರೆಕಾಲಿಕ ಸ್ಪಿನ್ನರ್​ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಹಾಗಾಗಿ ಆತನೊಬ್ಬ ಪರಿಪೂರ್ಣವಾದ ಆಟಗಾರ' ಎಂದು ಪಾಂಟಿಂಗ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ವಾಂಖೆಡೆಯಲ್ಲಿ ಜನವರಿ 14ರಂದು, 2ನೇ ಏಕದಿನ ಪಂದ್ಯ ಜನವರಿ17ರಂದು ರಾಜ್​ಕೋಟ್​ನಲ್ಲಿ, ಮೂರನೇ ಪಂದ್ಯ ಜನವರಿ 19ರಂದು ಬೆಂಗಳೂರಿನಲ್ಲಿ ನಡೆಯಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.