ETV Bharat / sports

ಭಾರತಕ್ಕಾಗಿ ಟೆಸ್ಟ್​ ಕ್ರಿಕೆಟ್ ಆಡುವುದು ನನಗೆ ದೊಡ್ಡ ಪ್ರೇರಣೆ: ಬುಮ್ರಾ

author img

By

Published : Feb 6, 2021, 12:34 PM IST

ಚೆನ್ನೈನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದ್ದು, ಜೋ ರೂಟ್ ಆಕರ್ಷಕ 156ರನ್​ಗಳಿಕೆ ಮಾಡಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.

Bumrah
Bumrah

ಚೆನ್ನೈ: ಟೀಂ ಇಂಡಿಯಾ ಪರ ಟೆಸ್ಟ್​​ ಕ್ರಿಕೆಟ್​ ಆಡುತ್ತಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಎರಡನೇ ದಿನದಾಟ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು. ಭಾರತಕ್ಕಾಗಿ ಟೆಸ್ಟ್​ ಕ್ರಿಕೆಟ್​ ಆಡುವುದು ನನಗೆ ದೊಡ್ಡ ಪ್ರೇರಣೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಸ್ಪ್ರೀತ್ ಬುಮ್ರಾ ಭಾಗಿ

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ ಪಡೆದುಕೊಂಡಿರುವ ಬುಮ್ರಾ, ಟೆಸ್ಟ್​ ಕ್ರಿಕೆಟ್​ ಆಡಲು ಯಾವುದೇ ರೀತಿಯ ಹೆಚ್ಚಿನ ಸಾಮರ್ಥ್ಯ ಬೇಕಾಗಿಲ್ಲ ಎಂದಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಎದುರಾಳಿ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ಕಾರಣ ನಮ್ಮ ಆಟಗಾರರು ಸ್ವಲ್ಪ ಮಂಕಾಗಿದ್ದು, ಇದರ ಅವಶ್ಯಕತೆ ಇಲ್ಲ. ಎರಡನೇ ಇನ್ನಿಂಗ್ಸ್​ನಲ್ಲಿ ತಂಡ ಬೌನ್ಸ್ ಬ್ಯಾಕ್​ ಮಾಡಲಿದೆ ಎಂದಿದ್ದಾರೆ.

ಓದಿ: ಇಂಡಿಯಾ ವರ್ಸಸ್ ಇಂಗ್ಲೆಂಡ್​: ಆಂಗ್ಲರ ಆಟಕ್ಕೆ ಕಂಗೆಟ್ಟ ಟೀಂ ಇಂಡಿಯಾ ಪ್ಲೇಯರ್ಸ್​ಗೆ ಕೊಹ್ಲಿ ಧೈರ್ಯ!

ನಾನು ಸರಿಯಾಗಿ ಬೌಲಿಂಗ್ ಮಾಡದಿದ್ದರೆ ವಿಕೆಟ್ ಪಡೆದುಕೊಳ್ಳುವುದು ಹೇಗೆ? ಉತ್ತಮವಾದ ಎಸೆತದಲ್ಲಿ ಕಂಡಿತವಾಗಿ ವಿಕೆಟ್ ಬೀಳುತ್ತವೆ ಎಂದು ಬುಮ್ರಾ ಹೇಳಿದ್ದಾರೆ. ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್ ಎರಡನೇ ದಿನ ಲಂಚ್​ ವೇಳೆಗೆ 355ರನ್​ಗಳಿಕೆ ಮಾಡಿದ್ದು, ರೂಟ್​ ಅಜೇಯ 156 ಹಾಗೂ ಸ್ಟೋಕ್ಸ್​​ 63ರನ್​ಗಳಿಕೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.