ETV Bharat / sports

ಸಚಿನ್​ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮತ್ತು ವಿದಾಯ ಹೇಳಿದ್ದು ಇದೇ ದಿನ

author img

By

Published : Nov 15, 2020, 11:45 AM IST

ಕರಾಚಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದ ಮೂಲಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ(1989 ನ.15) ಮಾಡಿದ್ದರು. ಕಾಕತಾಳೀಯ ಎಂಬಂತೆ ಅಂತಾರಾಷ್ಟ್ರೀಯ ಕೊನೆಯ ಪಂದ್ಯ ಆಡಿದ್ದು ಸಹ ನವೆಂಬರ್​ 15, 2013 ರಂದು. ಹಾಗಾಗಿ ಈ ದಿನ ಮಾಸ್ಟರ್​ ಬ್ಲಾಸ್ಟರ್​ ಜೀವನದಲ್ಲಿ ವಿಶೇಷವಾಗಿ ಉಳಿದಿದೆ.

On this day: Sachin Tendulkar makes international debut
ಸಚಿನ್ ತೆಂಡೂಲ್ಕರ್

ನವದೆಹಲಿ: 1989ರ ನವೆಂಬರ್ 15 ರಂದು, ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಬಳಿಕ ಮಾಸ್ಟ​​ರ್​ ಬ್ಲಾಸ್ಟರ್​​ ತಮ್ಮ ಬ್ಯಾಟಿಂಗ್ ಕೌಶಲ್ಯದಿಂದ ಜಗತ್ತಿನಾದ್ಯಂತ ಶತಕೋಟಿ ಅಭಿಮಾನಿಗಳನ್ನು ಗಳಿಸಿದ್ದಾರೆ.

ಕರಾಚಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದ ಮೂಲಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅವರು ತಮ್ಮ​ 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಸಚಿನ್ ಜೊತೆಗೆ, ಸಲೀಲ್ ಅಂಕೋಲಾ ಅವರು ಭಾರತ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನ ಆಡಿದ್ದರು.

ಸಚಿನ್​ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಕೇವಲ 15 ರನ್‌ಗಳನ್ನು ಗಳಿಸಿದ್ದರು. ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡ ಕಾರಣ ಅವರು ಎರಡನೇ ಇನ್ನಿಂಗ್ಸ್​ನಲ್ಲಿ ಮತ್ತೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.

ಕಾಕತಾಳೀಯವೆಂಬಂತೆ, 2013 ರ ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಬ್ಯಾಟಿಂಗ್ ಮಾಡಿದರು. ತಮ್ಮ ಕೊನೆಯ ಅಂತಾರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ, ಸಚಿನ್ 74 ರನ್‌ಗಳನ್ನು ಗಳಿಸಿದರು. ಎಂಎಸ್ ಧೋನಿ ಅವರ ನೇತೃತ್ವದಲ್ಲಿ ಭಾರತವು ಇನ್ನಿಂಗ್ಸ್ ಮತ್ತು 126 ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

"ಈ ದಿನದಂದು 1989 ರಂದು ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2013 ರಲ್ಲಿ ಕ್ರಿಕೆಟ್​ನ ಈ ದಂತ ಕಥೆ ಟೀಮ್ ಇಂಡಿಯಾ ಪರವಾಗಿ ತಮ್ಮ ಕೊನೆಯ ಪಂದ್ಯವನ್ನಾಡಿದ್ದರು. ಜಗತ್ತಿನಾದ್ಯಂತ ಶತಕೋಟಿ ಜನರನ್ನು ಕ್ರಿಕೆಟ್​​ನಲ್ಲಿ ರಂಜಿಸಿದಕ್ಕಾಗಿ ಧನ್ಯವಾದಗಳು" ಎಂದು ಬಿಸಿಸಿಐ ಟ್ವೀಟ್‌ ಮಾಡಿದೆ.

'ಮಾಸ್ಟರ್ ಬ್ಲಾಸ್ಟರ್' ಟೀಮ್​ ಇಂಡಿಯಾ ಪರ 200 ಟೆಸ್ಟ್ ಪಂದ್ಯಗಳನ್ನಾಡಿದ್ದು, ಟೆಸ್ಟ್ ಮತ್ತು ಏಕದಿನ ಪಂದ್ಯಗಳು ಸೇರಿ 100 ಶತಕಗಳನ್ನು ಗಳಿಸಿದ್ದಾರೆ. 463 ಏಕದಿನ ಪಂದ್ಯಗಳಲ್ಲಿ ತೆಂಡೂಲ್ಕರ್ 49 ಶತಕ ಸೇರಿದಂತೆ 18,426 ರನ್ ಗಳಿಸಿದ್ದಾರೆ ಮತ್ತು ಟೆಸ್ಟ್ ಪಂದ್ಯಗಳಲ್ಲಿ 51 ಶತಕಗಳನ್ನು ಒಳಗೊಂಡಂತೆ 15,921 ರನ್ ಗಳಿಸಿದ್ದಾರೆ. ಸಚಿನ್​ ಟೀಮ್​ ಇಂಡಿಯಾ ಪರವಾಗಿ ಒಂದೇ ಟಿ-20 ಪಂದ್ಯವಾಡಿದ್ದಾರೆ. 2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯವನ್ನಾಡಿದ್ದು, ಈ ಪಂದ್ಯದಲ್ಲಿ 10 ರನ್ ಗಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.