ETV Bharat / sports

ಭಾರತದೆದುರಿನ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ 20 ಸದಸ್ಯರ ತಂಡ ಪ್ರಕಟಿಸಿದ ಕಿವೀಸ್​

author img

By

Published : Apr 7, 2021, 11:02 PM IST

ಬಾಂಗ್ಲಾದೇಶದ ವಿರುದ್ಧ ನಡೆದ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಕೇನ್ ವಿಲಿಯಮ್ಸನ್​ ತಂಡಕ್ಕೆ ಮರಳಿದ್ದಾರೆ. ಇನ್ನು ಡೊಮೆಸ್ಟಿಕ್ ಸ್ಟಾರ್​ಗಳಾದ ಡಾಗ್ ಬ್ರಾಸ್​ವೆಲ್, ಜಾಕೋಬ್ ಡಫ್ಫಿ ಮತ್ತು ರಚಿನ್​ ರವೀಂದ್ರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವೈಟ್ ಬಾಲ್​ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಡಿವೋನ್ ಕಾನ್ವೆರನ್ನು ಕೂಡ ಟೆಸ್ಟ್​ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ 20 ಸದಸ್ಯರ ತಂಡ ಪ್ರಕಟಿಸಿದ ಕಿವೀಸ್​
ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ 20 ಸದಸ್ಯರ ತಂಡ ಪ್ರಕಟಿಸಿದ ಕಿವೀಸ್​

ನವದೆಹಲಿ: ಭಾರತದೆದುರು ಜೂನ್​ನಲ್ಲಿ ನಡೆಯಲಿರುವ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಸೇರಿದಂತೆ ಬೇಸಿಗೆಯಲ್ಲಿ ತವರಿನಲ್ಲಿ ನಡೆಯಲಿರುವ ಸರಣಿಗಳಿಗೆ ನ್ಯೂಜಿಲ್ಯಾಂಡ್ ಕ್ರಿಕೆಟ್​ ಮಂಡಳಿ 20 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಬಾಂಗ್ಲಾದೇಶದ ವಿರುದ್ಧ ನಡೆದ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಕೇನ್ ವಿಲಿಯಮ್ಸನ್​ ತಂಡಕ್ಕೆ ಮರಳಿದ್ದಾರೆ. ಇನ್ನು ಡೊಮೆಸ್ಟಿಕ್ ಸ್ಟಾರ್​ಗಳಾದ ಡಾಗ್ ಬ್ರಾಸ್​ವೆಲ್, ಜಾಕೋಬ್ ಡಫ್ಫಿ ಮತ್ತು ರಚಿನ್​ ರವೀಂದ್ರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವೈಟ್ ಬಾಲ್​ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಡಿವೋನ್ ಕಾನ್ವೆರನ್ನು ಕೂಡ ಟೆಸ್ಟ್​ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ನ್ಯೂಜಿಲ್ಯಾಂಡ್​ ತಂಡ ವಿಶ್ವ ಚಾಂಪಿಯನ್​ಶಿಪ್ ಫೈನಲ್​ಗೂ ಮುನ್ನ ಇಂಗ್ಲೆಂಡ್​ ವಿರುದ್ಧ 2 ಪಂದ್ಯಗಳ ಸರಣಿಯನ್ನು ಆಡಲಿದೆ.

ನ್ಯೂಜಿಲ್ಯಾಂಡ್​ ತಂಡ

ಕೇನ್ ವಿಲಿಯಮ್ಸನ್​, ಟಾಮ್ ಬ್ಲಂಡಲ್, ಟ್ರೆಂಟ್ ಬೌಲ್ಟ್​, ಡಾಗ್ ಬ್ರಾಸ್​ವೆಲ್, ಡಿವೋನ್ ಕಾನ್ವೆ, ಕಾಲಿನ್ ಡಿ ಗ್ರ್ಯಾಂಡ್​ಹೋಮ್​, ಜಾಕೋಬ್ ಡಫ್ಫಿ, ಮ್ಯಾಟ್ ಹೆನ್ರಿ, ಕೈಲ್ ಜೆಮೀಸನ್,ಟಾಮ್ ಲ್ಯಾಥಮ್, ಡೆರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೆಲ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್​, ಟಿಮ್ ಸೌಥಿ, ರಾಸ್ ಟೇಲರ್, ನೈಲ್ ವ್ಯಾಗ್ನರ್, ಬಿಜೆ ವ್ಯಾಟ್ಲಿಂಗ್, ವಿಲ್ ಯಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.