ETV Bharat / sports

ಮೈದಾನದಲ್ಲಿ ಧೋನಿ ಆಕ್ರೋಶಕ್ಕೆ ನಿರ್ಧಾರವನ್ನೇ ಬದಲಿಸಿದ್ರಾ ಅಂಪೈರ್​?... ವಿಡಿಯೋ ವೈರಲ್​!

author img

By

Published : Oct 14, 2020, 2:02 PM IST

ಟೀಂ ಇಂಡಿಯಾ ಕೂಲ್​ ಕ್ಯಾಪ್ಟನ್​ ಎಂದು ಪ್ರಸಿದ್ಧಿಗಳಿಸಿದ್ದ ಮಹೇಂದ್ರ ಸಿಂಗ್​ ಧೋನಿ ಇಂಡಿಯನ್​​ ಪ್ರಿಮಿಯರ್​ ಲೀಗ್​ನ ನಿನ್ನೆಯ ಪಂದ್ಯದಲ್ಲಿ ಅಂಪೈರ್​ ಮೇಲೆ ಆಕ್ರೋಶಗೊಂಡಿದ್ದಾರೆ.

MS Dhoni loses his cool on umpire
MS Dhoni loses his cool on umpire

ದುಬೈ: ಐಪಿಎಲ್​​ನ ನಿನ್ನೆಯ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​​ 20 ರನ್​ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಫ್ಲೇ-ಆಫ್​ ಕನಸು ಜೀವಂತವಾಗಿರಿಸಿಕೊಂಡಿದೆ. ಆದರೆ, ಮೈದಾನದಲ್ಲಿ ಧೋನಿ ವರ್ತನೆಯಿಂದಾಗಿ ಅಂಪೈರ್​ ತಮ್ಮ ನಿರ್ಧಾರವನ್ನೇ ಬದಲಾಯಿಸಿದ್ರಾ ಎಂಬ ಮಾತು ಕೇಳಿ ಬರಲು ಶುರುವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್​ ತಂಡ ಶಾರ್ದೂಲ್​ ಠಾಕೂರ್​ ಎಸೆದ 19ನೇ ಓವರ್​​ನಲ್ಲಿ ಈ ಘಟನೆ ನಡೆದಿದೆ. ಶಾರ್ದೂಲ್​ ಠಾಕೂರ್​ ಮೊದಲನೇ ಎಸೆತ ವೈಡ್​ ಹಾಕಿದ್ದಾರೆ. ಇದಾದ ಬಳಿಕ ಎರಡನೇ ಎಸೆತ ಕೂಡ ಅದೇ ರೀತಿಯಲ್ಲಿ ಹಾಕಿದ್ದರಿಂದ ಅಂಪೈರ್​​ ಅದನ್ನ ವೈಡ್​ ನೀಡಲು ಮುಂದಾಗುವುದರಲ್ಲಿದ್ದರು. ಆದರೆ, ವಿಕೆಟ್​ ಕೀಪಿಂಗ್​ ಮಾಡ್ತಿದ್ದ ಧೋನಿ ಕೋಪದಲ್ಲೇ ಸನ್ನೆ ಮಾಡಿದ್ದಾರೆ. ಹೀಗಾಗಿ ಧೋನಿ ತಾವು ತೆಗೆದುಕೊಳ್ಳುವ ನಿರ್ಧಾರದಲ್ಲೇ ಬದಲಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಅಂಪೈರ್​ ನಿರ್ಧಾರ ನೋಡಿರುವ ಹೈದರಾಬಾದ್​​ ತಂಡದ ಕ್ಯಾಪ್ಟನ್​ ವಾರ್ನರ್​ ಕೂಡ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಧೋನಿ ನಡೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕೂಲ್​ ಕ್ಯಾಪ್ಟನ್​ ಎಂದು ಹೆಸರು ಗಳಿಸಿರುವ ಧೋನಿ ದಿಢೀರ್​ ಆಗಿ ಈ ರೀತಿಯಾಗಿ ನಡೆದುಕೊಳ್ಳಲು ಕಾರಣ ಏನು ಎಂಬುದು ಅನೇಕರ ಪ್ರಶ್ನೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.