ETV Bharat / sports

ವಿಜಯ್ ಹಜಾರೆ ಟ್ರೋಫಿ: ಗೆಲ್ಲೋ ಪಂದ್ಯದಲ್ಲಿ ಮಳೆ ಆಟ, ಮನ್​ದೀಪ್ ಸಿಂಗ್ ಹತಾಶೆ, ಭಜ್ಜಿ ಕಿಡಿ

author img

By

Published : Oct 22, 2019, 9:44 AM IST

"ಲೀಗ್​ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿ ನಾಕೌಟ್ ಹಂತಕ್ಕೆ ಬಂದಿದ್ದ ನಾವು ಮಳೆಯಿಂದಾಗಿ ಸೆಮಿಫೈನಲ್ ಕನಸು ಭಗ್ನವಾಗಿದೆ" ಎಂದು ಪಂಜಾಬ್ ತಂಡದ ನಾಯಕ ಮನ್​ದೀಪ್ ಸಿಂಗ್ ಟ್ವಿಟರ್​ನಲ್ಲಿ ಹತಾಶೆ ತೋರಿದ್ದಾರೆ.

ಪಂಜಾಬ್ ನಾಯಕ ಮನ್​ದೀಪ್​ ಸಿಂಗ್

ಹೈದರಾಬಾದ್: ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಮೀಸ್ ಕನಸು ಕಾಣುತ್ತಿದ್ದ ಮನ್​ದೀಪ್​ ಸಿಂಗ್ ನೇತೃತ್ವದ ಪಂಜಾಬ್ ತಂಡಕ್ಕೆ ಮಳೆರಾಯ ತಡೆಯೊಡ್ಡಿದ್ದಾನೆ. ಪರಿಣಾಮ ತಂಡದ ಕ್ವಾರ್ಟರ್​ಫೈನಲ್ ಕನಸಿಗೆ ನಿರಾಸೆಯಾಗಿದೆ.​

"ಲೀಗ್​ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿ ನಾಕೌಟ್ ಹಂತಕ್ಕೆ ಬಂದಿದ್ದ ನಾವು ಮಳೆಯಿಂದಾಗಿ ಸೆಮಿಫೈನಲ್ ಕನಸು ಭಗ್ನವಾಗಿದೆ" ಎಂದು ಪಂಜಾಬ್ ತಂಡದ ನಾಯಕ ಮನ್​ದೀಪ್ ಸಿಂಗ್ ಟ್ವಿಟರ್​ನಲ್ಲಿ ಹತಾಶೆ ತೋರಿದ್ದಾರೆ.

ನಿಯಮದ ವಿರುದ್ಧ ಭಜ್ಜಿ ಕಿಡಿ:

ನಾಕೌಟ್ ಪಂದ್ಯಗಳು ಮಳೆಯಿಂದ ರದ್ದಾದರೆ ಬದಲಿ ಆಟದ ದಿನ ಯಾಕಿಲ್ಲ? ಬಿಸಿಸಿಐ ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಮ ತಿದ್ದುಪಡಿ ಮಾಡಬೇಕು ಎಂದು ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಹರ್ಭಜನ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಮನ್​ದೀಪ್​, ಕರ್ನಾಟಕ-ಪುದುಚೇರಿ ನಡುವಿನ ಮೊದಲ ಕ್ವಾರ್ಟರ್​ ಫೈನಲ್​ ಒಂದು ವೇಳೆ ಮಳೆಯಿಂದ ರದ್ದಾಗಿದ್ದರೆ ಕರ್ನಾಟಕ ಸೆಮೀಸ್​ಗೆ ಎಂಟ್ರಿ ನೀಡುತ್ತಿರಲಿಲ್ಲ. ಲೀಗ್ ಹಂತದ ಗೆಲುವನ್ನೇ ಪರಿಗಣಿಸಿ ಪುದುಚೇರಿ ಅಗ್ರ ನಾಲ್ಕರ ಘಟ್ಟ ತಲುಪುತ್ತಿತ್ತು ಎಂದಿದ್ದಾರೆ.

  • Paaji! agar asi sare match v jite jande apne group vich fer v asi Bahar c kynki Sade group vich 8 match hunde ne te C group vich 9 @harbhajan_singh even Karnataka v Bahar hojani c agar ona da match nhi hunda te puducherry ne ponch Jana c sida semis vich https://t.co/oHvrMi5kPc

    — Mandeep Singh (@mandeeps12) 22 October 2019 " class="align-text-top noRightClick twitterSection" data=" ">

ಪಂಜಾಬ್-ತ.ನಾಡು ಪಂದ್ಯದ ಹೈಲೈಟ್ಸ್:

ಸೋಮವಾರದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಹಾಗೂ ತಮಿಳುನಾಡು ತಂಡಗಳು ಮುಖಾಮುಖಿಯಾಗಿದ್ದವು. ಮಳೆ ಬಾಧಿತ ಪಂದ್ಯದಲ್ಲಿ ಓವರ್​ಗಳನ್ನು 39ಕ್ಕೆ ಇಳಿಸಲಾಗಿತ್ತು.

ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು 39 ಓವರ್‌ಗಳಲ್ಲಿ 174 ರನ್ ಕಲೆ ಹಾಕಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಂಜಾಬ್ ಉತ್ತಮ ಆರಂಭವನ್ನೇ ಪಡೆದಿತ್ತು. ನಿಗದಿತ ಗುರಿಯತ್ತ ಸಾಗಿದ್ದ ಮನ್​ದೀಪ್ ಟೀಂ 12.2 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಈ ವೇಳೆ ಮತ್ತೆ ಮಳೆ ಶುರುವಾಗಿದ್ದು, ಪರಿಣಾಮ ಪಂದ್ಯ ರದ್ದುಗೊಂಡಿದೆ.

Mandeep Singh
ಪಂಜಾಬ್ ನಾಯಕ ಮನ್​ದೀಪ್​ ಸಿಂಗ್

ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಕೌಟ್ ಪಂದ್ಯಗಳಿಗೆ ಬದಲಿ ದಿನ(ರಿಸರ್ವ್​ ಡೇ) ಇಲ್ಲದ ಕಾರಣ ಲೀಗ್​ನಲ್ಲಿ ಅತಿಹೆಚ್ಚು ಪಂದ್ಯ ಗೆದ್ದಿರುವ ತಮಿಳುನಾಡು ಸೆಮೀಸ್​​ಗೆ ಲಗ್ಗೆ ಇಟ್ಟಿದೆ.

ಲೀಗ್​ ಹಂತದಲ್ಲಿ ತ.ನಾಡು ತಂಡ ಒಂಭತ್ತು ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಪಂಜಾಬ್​ ಲೀಗ್​ ಸ್ಟೇಜ್​ನಲ್ಲಿ ಐದು ಪಂದ್ಯಗಳನ್ನಷ್ಟೇ ಜಯಿಸಿತ್ತು. ಈ ಗೆಲುವಿನ ಸಂಖ್ಯೆಯನ್ನೇ ಮಾನದಂಡವಾಗಿಸಿ ತ.ನಾಡನ್ನು ಮುಂದಿನ ಹಂತಕ್ಕೆ ತೇರ್ಗಡೆಗೊಳಿಸಲಾಗಿದೆ.

Intro:Body:

ಹೈದರಾಬಾದ್: ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಮೀಸ್ ಕನಸು ಕಾಣುತ್ತಿದ್ದ ಮನ್​ದೀಪ್​ ಸಿಂಗ್ ನೇತೃತ್ವದ ಪಂಜಾಬ್ ತಂಡಕ್ಕೆ ಮಳೆರಾಯ ಶಾಕ್ ನೀಡಿದ್ದು ಪರಿಣಾಮ ಕ್ವಾಟರ್​ಫೈನಲ್​ನಲ್ಲಿ ಹೊರಬಿದ್ದಿದ್ದಾರೆ.



ಲೀಗ್​ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿ ನಾಕೌಟ್ ಹಂತಕ್ಕೆ ಬಂದಿದ್ದ ನಾವು ಮಳೆಯಿಂದಾಗಿ ಸೆಮಿಫೈನಲ್ ಕನಸು ಭಗ್ನವಾಗಿದೆ ಎಂದು ಪಂಜಾನ್ ತಂಡದ ನಾಯಕ ಮನ್​ದೀಪ್ ಸಿಂಗ್ ಟ್ವಿಟರ್​ನಲ್ಲಿ ಹತಾಶೆ ತೋರಿದ್ದಾರೆ.



ನಿಯಮದ ವಿರುದ್ಧ ಭಜ್ಜಿ ಕಿಡಿ:



ನಾಕೌಟ್ ಪಂದ್ಯಗಳು ಮಳೆಯಿಂದ ರದ್ದಾದರೆ ಬದಲಿ ದಿನ ಯಾಕಿಲ್ಲ..? ಬಿಸಿಸಿಐ ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಮವನ್ನು ಬದಲಿಸಬೇಕು ಎಂದು ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.



ಪಂಜಾಬ್-ತ.ನಾಡು ಪಂದ್ಯದ ಹೈಲೈಟ್ಸ್:



ಸೋಮವಾರದ ಕ್ವಾಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಹಾಗೂ ತಮಿಳುನಾಡು ತಂಡಗಳು ಮುಖಾಮುಖಿಯಾಗಿದ್ದವು. ಮಳೆ ಬಾಧಿತ ಪಂದ್ಯದಲ್ಲಿ ಓವರ್​ಗಳನ್ನು 39ಕ್ಕೆ ಇಳಿಸಲಾಗಿತ್ತು. 



ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ತಂಡ 39 ಓವರ್​ನಲ್ಲಿ 174 ರನ್ ಕಲೆ ಹಾಕಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಂಜಾಬ್ ಉತ್ತಮ ಆರಂಭವನ್ನೇ ಪಡೆದಿತ್ತು. ಗುರಿಯತ್ತ ಸಾಗಿದ್ದ ಮನ್​ದೀಪ್ ತಂಡ 12.2 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಈ ವೇಳೆ ಮತ್ತೆ ಮಳೆ ಎಂಟ್ರಿ ನೀಡಿದ್ದು, ಪರಿಣಾಮ ಪಂದ್ಯ ರದ್ದುಗೊಂಡಿದೆ.



ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಕೌಟ್ ಪಂದ್ಯಗಳಿಗೆ ಬದಲಿ ದಿನ(ರಿಸರ್ವ್​ ಡೇ) ಇಲ್ಲದ ಕಾರಣ ಲೀಗ್​ನಲ್ಲಿ ಅತಿಹೆಚ್ಚು ಪಂದ್ಯ ಗೆದ್ದು ತಮಿಳುನಾಡು ಸೆಮೀಸ್​​ಗೆ ಲಗ್ಗೆ ಇಟ್ಟಿದೆ.



ಲೀಗ್​ ಹಂತದಲ್ಲಿ ತ.ನಾಡು ತಂಡ ಒಂಭತ್ತು ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಪಂಜಾಬ್​ ಲೀಗ್​ ಸ್ಟೇಜ್​ನಲ್ಲಿ ಐದು ಪಂದ್ಯವನ್ನೆಷ್ಟೇ ಜಯಿಸಿತ್ತು. ಈ ಗೆಲುವಿನ ಸಂಖ್ಯೆಯನ್ನೇ ಮಾನದಂಡವಾಗಿಸಿ ತ.ನಾಡನ್ನು ಮುಂದಿನ ಹಂತಕ್ಕೆ ತೇರ್ಗಡೆಗೊಳಿಸಲಾಗಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.