ETV Bharat / sports

ನಿನ್ನೆ ರಾತ್ರಿ ತಂದೆ ನಿಧನ... ಇಂದು ಪಂಜಾಬ್​ ಪರ ಇನ್ನಿಂಗ್ಸ್ ಆರಂಭಿಸಿದ ಮಂದೀಪ್ ಸಿಂಗ್

author img

By

Published : Oct 24, 2020, 8:26 PM IST

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್​ಮನ್​ ಮಂದೀಪ್ ಸಿಂಗ್ ಅವರ ತಂದೆ ಹರ್ದೇವ್ ಸಿಂಗ್​ ಶುಕ್ರವಾರ ರಾತ್ರಿ ನಿಧನರಾಗಿದ್ದು, ಅವರಿಗೆ ಗೌರವ ಸೂಚಿಸುವ ಸಲುವಾಗಿ ಪಂಜಾಬ್ ತಂಡದ ಆಟಗಾರರೆಲ್ಲಾ ತೋಳಿಗೆ ಕಪ್ಪುಪಟ್ಟಿ ಆಡುತ್ತಿದ್ದಾರೆ.

ಮಂದೀಪ್ ಸಿಂಗ್ ತಂದೆ ನಿಧನ
ಮಂದೀಪ್ ಸಿಂಗ್ ತಂದೆ ನಿಧನ

ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ ಅವರ ತಂದೆ ಹರ್ದೇವ್ ಸಿಂಗ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ.

ಪಂಜಾಬ್ ಕೇಸರಿ ಸ್ಪೋರ್ಟ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಕಳೆದ ತಿಂಗಳು ಹರ್ದೇವ್ ಸಿಂಗ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು ಅವರನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿತ್ತು.

ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಸಲುವಾಗಿ ಮನ್‌ದೀಪ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಯೋ ಬಬಲ್‌ ನಲ್ಲಿದ್ದಾರೆ. ತಂದೆಯ ಅಂತಿಮ ಸಂಸ್ಕಾರಕ್ಕೆ ಭಾರತಕ್ಕೆ ವಾಪಸ್​ ಬಾರದಿರಲು ನಿರ್ಧರಿಸಿರುವ ಅವರು ತಂದೆಯ ಆಸೆಯಂತೆ ಕ್ರಿಕೆಟ್​ ಆಡುವುದಕ್ಕೆ ಹೊತ್ತು ನೀಡಿದ್ದರು. ಇಂದಿನ ಪಂದ್ಯವನ್ನು ಅವರಿಗೆ ಅರ್ಪಿಸಲು ಇನ್ನಿಂಗ್ಸ್ ಆರಂಭಿಸಿದ್ದ ಅವರು 14 ಎಸೆತಗಳಲ್ಲಿ 17 ರನ್​ಗಳಿಸಿ ಔಟಾದರು.

ಈ ಕುರಿತು ಟ್ವೀಟ್ ಮಾಡಿರುವ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ " ಕಳೆದ ರಾತ್ರಿ ತಂದೆಯನ್ನು ಕಳೆದುಕೊಂಡಿರುವ ಮಂದೀಪ್ ಸಿಂಗ್ ಇಂದು ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ " ಎಂದು ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.