ETV Bharat / sports

ಮಿಂಚಿದ ಬೌಲರ್ಸ್​, ಅಬ್ಬರಿಸಿದ ಗೇಲ್-ಮಂದೀಪ್:ಕೆಕೆಆರ್​ ವಿರುದ್ಧ ಪಂಜಾಬ್​ಗೆ 8 ವಿಕೆಟ್​ಗಳ ಸುಲಭ ಜಯ

author img

By

Published : Oct 26, 2020, 11:10 PM IST

Updated : Oct 26, 2020, 11:18 PM IST

ಮೊದಲು ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿ ಕೋಲ್ಕತ್ತಾ ತಂಡವನ್ನು 149 ರನ್​ಗಳಿಗೆ ಕಟ್ಟಿಹಾಕಿದ ರಾಹುಲ್​ ಬಳಗ, ಚೇಸಿಂಗ್ ವೇಳೆ ಗೇಲ್ ಮತ್ತು ಮಂದೀಪ್ ಸಿಂಗ್ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ಇನ್ನು7 ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ.

ಐಪಿಎಲ್ 2020
ಕಿಂಗ್ಸ್ ಇಲೆವೆನ್ ಪಂಜಾಬ್

ಶಾರ್ಜಾ: ಬ್ಯಾಟಿಂಗ್ ಮತ್ತು ಬೌಲಿಂಗ್​ನ ಸಂಘಟಿತ ಪ್ರದರ್ಶನದ ನೆರವಿನಿಂದ ಕಿಂಗ್ಸ್​ ಇಲೆವೆನ್ ಪಂಜಾಬ್, ಕೆಕೆಆರ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪ್ಲೇ ರೇಸ್​ನಲ್ಲಿ ಇನ್ನು ಉಳಿದುಕೊಂಡಿದೆ.

ಮೊದಲು ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿ ಕೋಲ್ಕತ್ತಾ ತಂಡವನ್ನು 149 ರನ್​ಗಳಿಗೆ ಕಟ್ಟಿಹಾಕಿದ ರಾಹುಲ್​ ಬಳಗ, ಚೇಸಿಂಗ್ ವೇಳೆ ಗೇಲ್ ಮತ್ತು ಮಂದೀಪ್ ಸಿಂಗ್ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ಇನ್ನು7 ಎಸೆತ ಬಾಕಿ ಇರುವಂತೆ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ.

ಅಬ್ಬರ ಬ್ಯಾಟಿಂಗ್ ಪ್ರದರ್ಶನ ತೋರಿದ ಯುನಿವರ್ಸಲ್ ಬಾಸ್ ಗೇಲ್​​ ಕೇವಲ 29 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್​, 2 ಬೌಂಡರಿಗಳ ನೆರವಿನಿಂದ 51 ರನ್​ಗಳಿಸಿ ಔಟಾದರು. ಅಜೇಯರಾಗಿ ಉಳಿದ ಮಂದೀಪ್ ಸಿಂಗ್ 55 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 8 ಬೌಂಡರಿ ಗಳ ನೆರವಿನಿಂದ 66 ರನ್​ಗಳಿಸಿ ಗೆಲುವಿನ ಗಡಿ ದಾಟಿಸಿದರು. ನಾಯಕ ರಾಹುಲ್ 28 ರನ್​ಗಳಿಸಿ ಔಟಾಗಿದ್ದರು.

ಕೆಕೆಆರ್ ಪರ ವರುಣ್ ಚಕ್ರವರ್ತಿ ಹಾಗೂ ಫರ್ಗ್ಯುಸನ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಕೆಕೆಆರ್​ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 149 ರನ್​ಗಳಿಸಿತ್ತು. ಗಿಲ್ 57, ಮಾರ್ಗನ್ 40 ರನ್​ಗಳಿಸಿದ್ದರು.

ಪಂಜಾಬ್ ಪರ ಮೊಹಮ್ಮದ್ ಶಮಿ 3 ವಿಕೆಟ್ಸ್, ಮುರುಗನ್ ಅಶ್ವಿನ್, 1, ಮ್ಯಾಕ್ಸ್​ವೆಲ್ 1, ಜೋರ್ಡನ್ ಮತ್ತು ಬಿಷ್ಣೋಯ್ ತಲಾ 2 ವಿಕೆಟ್​ ಪಡೆದರು ಮಿಂಚಿದ್ದರು.

Last Updated : Oct 26, 2020, 11:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.