ETV Bharat / sports

ಲೂಕಿ ಫರ್ಗ್ಯುಸನ್‌ 'ಸೂಪರ್'‌ ಬೌಲಿಂಗ್‌ ದಾಳಿಗೆ ಮಂಡಿಯೂರಿದ ಹೈದರಾಬಾದ್‌

author img

By

Published : Oct 18, 2020, 8:12 PM IST

Updated : Oct 18, 2020, 8:23 PM IST

164 ರನ್​ಗಳ ಗುರಿ ಪಡೆದಿದ್ದ ಸನ್​ ರೈಸರ್ಸ್​ ಹೈದರಾಬಾದ್ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್​ಗಳಿಸುವ ಮೂಲಕ ಟೈ ಸಾಧಿಸಿತು. ಆದರೆ ಹೈದರಾಬಾದ್​ ತಂಡ ಫರ್ಗ್ಯುಸನ್​ ಎಸೆದ ಸೂಪರ್ ಓವರ್​ನಲ್ಲಿ ಕೇವಲ 3 ಎಸೆತಗಳಲ್ಲಿ 2 ರನ್​ಗಳಿಸಿ 2 ವಿಕೆಟ್ ಕಳೆದುಕೊಂಡಿತು. 3 ರನ್​ಗಳ ಗುರಿಯನ್ನು ಕೆಕೆಆರ್​ 4 ಎಸೆತಗಳಲ್ಲಿ ತಲುಪಿ ಜಯ ಸಾಧಿಸಿತು.

ಕೋಲ್ಕತ್ತಾ ನೈಟ್​ ರೈಡರ್ಸ್
ಕೋಲ್ಕತ್ತಾ ನೈಟ್​ ರೈಡರ್ಸ್

ಅಬುಧಾಬಿ: ಲೂಕಿ ಫರ್ಗ್ಯುಸನ್ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಕೆಕೆಆರ್​ ತಂಡ ಸೂಪರ್ ಓವರ್​ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಮಣಿಸಿ ಗೆಲುವಿನ ಹಾದಿಗೆ ಮರಳಿದೆ.

164 ರನ್​ಗಳ ಗುರಿ ಪಡೆದಿದ್ದ ಸನ್‌ರೈಸರ್ಸ್​ ಹೈದರಾಬಾದ್ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್​ಗಳಿಸುವ ಮೂಲಕ ಟೈ ಸಾಧಿಸಿತು. ಆದರೆ ಹೈದರಾಬಾದ್​ ತಂಡ ಫರ್ಗ್ಯುಸನ್​ ಎಸೆದ ಸೂಪರ್ ಓವರ್​ನಲ್ಲಿ ಕೇವಲ 3 ಎಸೆತಗಳಲ್ಲಿ 2 ರನ್​ಗಳಿಸಿ 2 ವಿಕೆಟ್ ಕಳೆದುಕೊಂಡಿತು. 3 ರನ್​ಗಳ ಗುರಿಯನ್ನು ಕೆಕೆಆರ್​ 4 ಎಸೆತಗಳಲ್ಲಿ ತಲುಪಿ ಜಯ ಸಾಧಿಸಿತು.

ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಬದಲಾವಣೆ ಮಾಡಿಕೊಂಡ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್​ರನ್ನು ಆರಂಭಿಕನಾಗಿ ಕಣಕ್ಕಿಳಿಸಿತ್ತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಈ ಜೋಡಿ ಮೊದಲ ವಿಕೆಟ್​ಗೆ 57 ರನ್ ಸೇರಿಸಿತು. 19 ಎಸೆತಗಳಲ್ಲಿ 29 ರನ್​ಗಳಿಸಿ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಇಂದೇ ಮೊದಲ ಪಂದ್ಯವಾಡಿದ ಫರ್ಗ್ಯುಸನ್​ ವಿಲಿಯಮ್ಸನ್​ ವಿಕೆಟ್ ಪಡೆದರು.

ತಮ್ಮ ಮುಂದಿನ ಓವರ್​ನಲ್ಲಿ ಯುವ ಬ್ಯಾಟ್ಸ್​ಮನ್​ ಪ್ರಿಯಂ ಗರ್ಗ್(4) ರನ್ನು ಕ್ಲೀನ್ ಬೌಲ್ಡ್ ಆದರು. ನಂತರದ ಓವರ್​ನಲ್ಲೇ ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ರಸೆಲ್​ಗೆ ಕ್ಯಾಚ್​ ನೀಡಿ ಔಟಾದರು. ಇವರ ಬೆನ್ನಲ್ಲೇ ಬಂದ ಮನೀಶ್ ಪಾಂಡೆ ಫರ್ಗ್ಯುಸನ್​ಗೆ 3ನೇ ಬಲಿಯಾದರೆ, ವಿಜಯ ಶಂಕರ್​ 7 ರನ್​ಗಳಿಸಿ ಕಮ್ಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು.

ಒಂದು ಹಂತದಲ್ಲಿ 57ಕ್ಕೆ 1 ಇದ್ದ ಹೈದರಾಬಾದ್​ ತಂಡ 109 ರನ್​ಗಳಾಗುವಷ್ಟರಲ್ಲಿ 5 ವಿಕೆಟ್​ ಕಳೆದುಕೊಂಡಿತು.

ಈ ಹಂತದಲ್ಲಿ ಯುವ ಆಲ್​ರೌಂಡರ್​ ಅಬ್ದುಲ್ ಸಮದ್​ ಹಾಗೂ ವಾರ್ನರ್​ 37 ರನ್​ಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಕೊನೆಯ ಓವರ್​ನಲ್ಲಿ ಗೆಲ್ಲಲು 18 ರನ್​ಗಳ ಅಗತ್ಯವಿತ್ತು. ರಸೆಲ್ ಎಸೆದ ಕೊನೆಯ ಓವರ್​ನಲ್ಲಿ ವಾರ್ನರ್​ 3 ಬೌಂಡರಿ​ ಸಿಡಿಸಿ 17 ರನ್​ಗಳಿಸಿ ಪಂದ್ಯವನ್ನು ಟೈ ಮಾಡಿದರು. ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು​ 33 ಎಸೆತಗಳಲ್ಲಿ 47 ರನ್​ಗಳಿಸಿ ಔಟಾಗದೆ ಉಳಿದರು.

ಕೆಕೆಆರ್ ಭರ್ಜರಿ ಬೌಲಿಂಗ್ ಪ್ರದರ್ಶನ ತೋರಿದ ಲೂಕಿ ಫರ್ಗ್ಯುಸನ್ 15 ರನ್​ ನೀಡಿ 3 ಹಾಗೂ ಪವರ್​ ಪ್ಲೇನಲ್ಲಿ 2 ವಿಕೆಟ್​ ಪಡೆದರು. ಇವರಿಗೆ ಸಾಥ್ ನೀಡಿದ ಕಮ್ಮಿನ್ಸ್, ಶಿವಂ ಮಾವಿ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್​, ಶುಬ್ಮನ್ ಗಿಲ್ 36, ತ್ರಿಪಾಠಿ 23, ನಿತೀಶ್ ರಾಣಾ 29, ಮಾರ್ಗನ್ 34 ಹಾಗೂ ಕಾರ್ತಿಕ್​ರ 29 ರನ್​ಗಳ ನೆರವಿನಿಂದ 183 ರನ್​ಗಳಿಸಿತ್ತು.

Last Updated : Oct 18, 2020, 8:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.