ETV Bharat / sports

6 ಬಾಲ್​ಗೆ 6 ಸಿಕ್ಸರ್​ ಸಿಡಿಸಿ ಅಬ್ಬರ: ಯುವರಾಜ್​ ದಾಖಲೆ ಸರಿಗಟ್ಟಿದ ಪೊಲಾರ್ಡ್​!

author img

By

Published : Mar 4, 2021, 8:05 AM IST

2007ರಲ್ಲಿ ನಡೆದ ಟಿ-20 ವಿಶ್ವಕಪ್​ನಲ್ಲಿ ಭಾರತ ತಂಡದ ಆಲ್​ರೌಂಡರ್​ ಯುವರಾಜ್ ಸಿಂಗ್​ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್‌ ಓವರ್​ನಲ್ಲಿ 6 ಸಿಕ್ಸರ್​ ಬಾರಿಸಿದ್ದರು. ಇದು ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿನ ಮೊದಲ ವಿಶ್ವ ದಾಖಲೆಯಾಗಿದೆ. ಇದೀಗ ಯುವಿ ದಾಖಲೆಯನ್ನು ಪೊಲಾರ್ಡ್​​ ಸರಿಗಟ್ಟಿದ್ದಾರೆ.

Kieran Pollard smashes 6 sixes in an over of Dananjaya
ಕಿರನ್​ ಪೊಲಾರ್ಡ್ ವಿಶ್ವದಾಖಲೆ

ಆಂಟಿಗುವಾ: ವಿಂಡೀಸ್​ ನಾಯಕ ಕಿರನ್​ ಪೊಲಾರ್ಡ್​​ ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಒಂದೇ ಓವರ್​ನ 6 ಎಸೆತಗಳಲ್ಲಿ ಆರು ಸಿಕ್ಸರ್​ ಸಿಡಿಸಿ ವಿಶ್ವದಾಖಲೆ ಸರಿಗಟ್ಟಿದ್ದಾರೆ.

ಪೊಲಾರ್ಡ್​​, ಲಂಕಾ ಸ್ಪಿನ್ನರ್ ಧನಂಜಯ ಬೌಲಿಂಗ್​ನಲ್ಲಿ ಈ ಸಾಧನೆ ಮಾಡಿದ್ದಾರೆ. ಒಂದೇ ಓವರ್​ನಲ್ಲಿ 6 ಸಿಕ್ಸರ್​​ ಬಾರಿಸಿದ ವಿಶ್ವದ ಎಂಟನೇ ಆಟಗಾರ ಎನಿಸಿಕೊಂಡರು. ದಿಗ್ಗಜ ಸರ್ ಗ್ಯಾರಿ ಸೋಬರ್ಸ್ ನಂತರ ಪೊಲಾರ್ಡ್ ಈ ದಾಖಲೆ ಬರೆದ ವಿಂಡೀಸ್​​ನ ಎರಡನೇ ಬ್ಯಾಟ್ಸ್​ಮನ್​ ಆದರು. 1968ರಲ್ಲಿ ಸೋಬರ್ಸ್ ಈ ಸಾಧನೆ ಮಾಡಿದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದರು. ಬಳಿಕ ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ 1985ರಲ್ಲಿ ಬರೋಡಾದ ಎಡಗೈ ಸ್ಪಿನ್ನರ್ ತಿಲಕ್ ರಾಜ್ ಎಸೆದ ಓವರ್​​ನ ಆರೂ ಎಸೆತಗಳನ್ನು ಸಿಕ್ಸರ್​ಗೆ ಅಟ್ಟಿದ್ದರು.

2007ರಲ್ಲಿ ನಡೆದ ಟಿ-20 ವಿಶ್ವಕಪ್​ನಲ್ಲಿ ಭಾರತ ತಂಡದ ಆಲ್​ರೌಂಡರ್​ ಯುವರಾಜ್ ಸಿಂಗ್​ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್‌ ಓವರ್​ನಲ್ಲಿ 6 ಸಿಕ್ಸರ್​ ಬಾರಿಸಿದ್ದರು. ಇದು ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿನ ಮೊದಲ ವಿಶ್ವದಾಖಲೆ ಆಗಿದೆ. ಇದೀಗ ಯುವಿ ದಾಖಲೆಯನ್ನು ಪೊಲಾರ್ಡ್​​ ಸರಿಗಟ್ಟಿದ್ದಾರೆ.

11 ಎಸೆತಗಳಲ್ಲಿ 38 ರನ್‌ ಗಳಿಸಿ ಪೊಲಾರ್ಡ್ ಔಟಾದರು. ಧನಂಜಯ ಎಸೆದ ಪಂದ್ಯದ ಆರನೇ ಓವರ್‌ನಲ್ಲಿ ಮೊದಲ ಎಸೆತ ಲಾಂಗ್‌ - ಓವರ್‌ಗೆ, ಎರಡನೇ ಎಸೆತದಲ್ಲಿ ಅವರನ್ನು ಸೈಟ್‌ಸ್ಕ್ರೀನ್‌ನತ್ತ ಬಾರಿಸಿದರು. ಬಳಿಕ ಆಫ್-ಸ್ಟಂಪ್ ಹೊರಗೆ ಬಿದ್ದ ಬೌಲ್​​ನ್ನು ಪೊಲಾರ್ಡ್ ಲಾಂಗ್-ಆಫ್ ಮೇಲೆ ಸಿಕ್ಸರ್​ಗೆ ಅಟ್ಟಿದರು. ನಾಲ್ಕನೇ ಚೆಂಡನ್ನು ಡೀಪ್ ಮಿಡ್-ವಿಕೆಟ್​ನತ್ತ ಬಾರಿಸಿದರೆ, 5ನೇ ಎಸೆತವನ್ನು ಬೌಲರ್‌ನ ತಲೆಯ ಮೇಲೆ ಹೊಡೆದರು. ಹೀಗೆ ಸಿಕ್ಸರ್​ ಸುರಿಮಳೆಯಿಂದ ದನಂಜಯ ಸುಸ್ತಾದರೆ, ತವರಿನ ಪ್ರೇಕ್ಷಕರೆದರು ಪೊಲಾರ್ಡ್​ ಅಬ್ಬರಿಸಿದರು.

ಇದನ್ನೂ ಓದಿ: ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​ 2021: ನಾಳೆಯಿಂದ ಕ್ರಿಕೆಟ್​ ಹಬ್ಬ, ಮತ್ತೆ ಬ್ಯಾಟ್​ ಬೀಸಲಿದ್ದಾರೆ ಸಚಿನ್​, ಸೆಹ್ವಾಗ್​!

ಹ್ಯಾಟ್ರಿಕ್​ ವಿಕೆಟ್:

ದನಂಜಯ ಇದಕ್ಕೂ ಮುನ್ನ ಎಸೆದ ಓವರ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಕಬಳಿಸಿದ್ದರು. ಆದರೆ, ಅವರ ಸಂಭ್ರಮವನ್ನು ಪೊಲಾರ್ಡ್​ ಕೆಲ ಸಮಯದಲ್ಲೇ ಕಿತ್ತುಕೊಂಡರು. ಆರಂಭಿಕ ಆಟಗಾರ ಎವಿನ್ ಲೂಯಿಸ್, ಗೇಲ್ ಮತ್ತು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರ ವಿಕೆಟ್​ ಪಡೆದು ದನಂಜಯ ಹ್ಯಾಟ್ರಿಕ್​ ಸಾಧಿಸಿದ್ದರು. ಹ್ಯಾಟ್ರಿಕ್​ ಹಿನ್ನೆಲೆ ಅದುವರೆಗೂ ವಿಕೆಟ್​ ನಷ್ಟವಿಲ್ಲದೇ 52 ರನ್​ ಗಳಿಸಿದ್ದ ವಿಂಡೀಸ್​​, ಏಕಾಏಕಿ ಸಂಕಷ್ಟಕ್ಕೆ ಸಿಲುಕುವ ಭೀತಿಗೊಳಗಾಗಿತ್ತು.

ಮೂರನೇ ಆಟಗಾರ:

ಪೊಲಾರ್ಡ್ ಅವರು,​​ ಯುವರಾಜ್​ ಮತ್ತು ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ಬಳಿಕ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಈ ಸಾಧನೆ ಮಾಡಿದ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಿಕೊಂಡರು. 2007ರ ಏಕದಿನ ವಿಶ್ವಕಪ್​ನಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಗಿಬ್ಸ್ ಈ ದಾಖಲೆ ಬರೆದಿದ್ದರು.

ಇದನ್ನೂ ಓದಿ: ಕೊಹ್ಲಿ ಪಡೆಯ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಕನಸಿಗೆ ತಡೆಯೊಡ್ಡುವುದೇ ಇಂಗ್ಲೆಂಡ್​ ?

ಪೊಲಾರ್ಡ್​ ಅಬ್ಬರದಿಂದ ವಿಂಡೀಸ್ 132 ರನ್​ಗಳ ಗುರಿಯನ್ನು​ 6 ವಿಕೆಟ್​ ಕಳೆದುಕೊಂಡು ತಲುಪಿತು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್​ ಮಾಡಿದ್ದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ ಕೇವಲ 131 ರನ್​ ಗಳಿಸಿತ್ತು. ಈ ಗೆಲುವಿನಿಂದ ಕೆರಿಬಿಯನ್ನರು 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.