ETV Bharat / sports

ಸೋತು ಸುಣ್ಣವಾದ ಕಿವೀಸ್​ಗೆ ಜ್ವರದ ಭಯ!

author img

By

Published : Jan 1, 2020, 7:59 PM IST

ತಂಡದ ಕೆಲವು ಆಟಗಾರರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು ಅವರನ್ನು ಇತರೆ ಆಟಗಾರರಿಂದ ದೂರ ಉಳಿಸಲಾಗಿದೆ ಎಂದು ನ್ಯೂಜಿಲ್ಯಾಂಡ್​ ಕ್ರಿಕೆಟ್​ ಮಂಡಳಿಯ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

Kane Williamson
Kane Williamson

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್​ ಪಂದ್ಯಗಳಲ್ಲಿ ಹೀನಾಯ ಸೋಲುಕಂಡಿರುವ ನ್ಯೂಜಿಲ್ಯಾಂಡ್​ ತಂಡಕ್ಕೆ ಮೂರನೇ ಪಂದ್ಯಕ್ಕೂ ಮುನ್ನ ಆಟಗಾರರಲ್ಲಿ ಕಾಣಿಸಿಕೊಂಡಿರುವ ಜ್ವರ ಭಾರಿ ಆಘಾತ ತಂದಿದೆ.

ತಂಡದ ಕೆಲವು ಆಟಗಾರರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು ಅವರನ್ನು ಇತರೆ ಆಟಗಾರರಿಂದ ದೂರ ಉಳಿಸಲಾಗಿದೆ ಎಂದು ನ್ಯೂಜಿಲ್ಯಾಂಡ್​ ಕ್ರಿಕೆಟ್​ ಮಂಡಳಿಯ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಜಿಲ್ಯಾಂಡ್​ ತಂಡ ನಾಯಕ ಕೇನ್​ ವಿಲಿಯಮ್ಸನ್​,ಬ್ಯಾಟ್ಸ್​ಮನ್​ ಹೆನ್ರಿ ನಿಕೋಲ್ಸ್​ರಲ್ಲಿ ಜ್ವರದ ಲಕ್ಷಣ ಕಂಡು ಬಂದಿದೆ. ಆದ್ದರಿಂದ ಅವರು ಬುಧವಾರದ ತರಭೇರಿ ಶಿಬಿರದಲ್ಲಿ ಕಾಣಿಸಿಕೊಂಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ನ್ಯೂಜಿಲ್ಯಾಂಡ್​ ಬೌಲಿಂಗ್​ ಕೋಚ್​, "ಜ್ವರದಿಂದ ಬಳಲುತ್ತಿರುವವರ ಆರೋಗ್ಯ ಇಂದು ಉತ್ತಮವಾಗಿದೆ. ಕೆಲವರಲ್ಲಿ ಜ್ವರದ ಲಕ್ಷಣಗಳಿದ್ದು ನಾಳೆಯ ತರಭೇತಿಯ ವೇಳೆಗೆ ಅವರು ಹುಷಾರಾಗಿ ಬರಲಿದ್ದಾರೆ ಎಂಬ ವಿಶ್ವಾಸವಿದೆ. ಇಂದು ಮಾತ್ರ ಅವರಿಗೆ ತೊಂದರೆಯಾಗಬಾರದೆಂದು ವಿಶ್ರಾಂತಿ ನೀಡಲಾಗಿದೆ. ಕೊನೆಯ ಎರಡು ಟೆಸ್ಟ್​ನಲ್ಲಿ ಸೋಲನುಭವಿಸಿರುವುದರಿಂದ ಕೊನೆಯ ಟೆಸ್ಟ್​ನಲ್ಲಿ ಕಮ್​ಬ್ಯಾಕ್ ಮಾಡಲು ಉತ್ತಮ ಅವಕಾಶ ಸಿಕ್ಕಿದೆ ಎಂದು ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.