ETV Bharat / sports

ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಆಫ್ರಿಕನ್ನರಿಗೆ 'ಆರಂಭಿಕ' ಆಘಾತ..!

author img

By

Published : Oct 17, 2019, 3:00 PM IST

ಬಲಗೈ ಮಣಿಕಟ್ಟಿನ ಗಾಯದಿಂದ ಮರ್ಕ್ರಾಮ್ ಬಳಲುತ್ತಿದ್ದು, ಈಗಾಗಲೇ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಸ್ಕ್ಯಾನಿಂಗ್ ವೇಳೆ ಮೂಳೆ ಮುರಿತವಾಗಿರುವುದು ಕಂಡುಬಂದ ಕಾರಣದಿಂದ ರಾಂಚಿ ಪಂದ್ಯದಿಂದ ಮರ್ಕ್ರಾಮ್ ಹೊರಗುಳಿಯಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.

ದಕ್ಷಿಣ ಆಫ್ರಿಕಾ ತಂಡ

ರಾಂಚಿ: ಟೀಂ ಇಂಡಿಯಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೊದಲೆರಡು ಪಂದ್ಯವನ್ನು ಸೋತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಎರಡೂ ಟೆಸ್ಟ್ ಪಂದ್ಯದಲ್ಲೂ ಆರಂಭಿಕನಾಗಿ ಕಣಕ್ಕಿಳಿದಿದ್ದ ಎಡೆನ್ ಮರ್ಕ್ರಾಮ್ ಗಾಯದ ಸಮಸ್ಯೆಯಿಂದ ರಾಂಚಿಯಲ್ಲಿ ನಡೆಯುವ ಮೂರನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಸರಣಿ ಸೋತಿರುವ ಆಫ್ರಿಕನ್ನರಿಗೆ ಇದು ಕೊಂಚ ಹಿನ್ನಡೆಯುಂಟು ಮಾಡಿದೆ.

ಬಲಗೈ ಮಣಿಕಟ್ಟಿನ ಗಾಯದಿಂದ ಮರ್ಕ್ರಾಮ್ ಬಳಲುತ್ತಿದ್ದು, ಈಗಾಗಲೇ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಸ್ಕ್ಯಾನಿಂಗ್ ವೇಳೆ ಮೂಳೆ ಮುರಿತವಾಗಿರುವುದು ಕಂಡುಬಂದ ಕಾರಣದಿಂದ ರಾಂಚಿ ಪಂದ್ಯದಿಂದ ಮರ್ಕ್ರಾಮ್ ಹೊರಗುಳಿಯಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.

ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಮರ್ಕ್ರಾಮ್ ಅತ್ಯಂತ ನೀರಸ ಪ್ರದರ್ಶನ ತೋರಿದ್ದಾರೆ. ಒಟ್ಟಾರೆ ನಾಲ್ಕು ಇನ್ನಿಂಗ್ಸ್​ನಲ್ಲಿ ಮರ್ಕ್ರಾಮ್ ಗಳಿಕೆ ಕೇವಲ 44 ಮಾತ್ರ. ಎರಡನೇ ಟೆಸ್ಟ್​​ ಪಂದ್ಯದ ಎರಡೂ ಇನ್ನಿಂಗ್ಸ್​ನಲ್ಲೂ ಮರ್ಕ್ರಾಮ್ ಶೂನ್ಯ ಸುತ್ತಿದ್ದರು.

Aiden Markram
ಎಡೆನ್ ಮರ್ಕ್ರಾಮ್

ಅ.19ರಿಂದ ರಾಂಚಿಯ ಜೆಎಸ್​​ಸಿಎ ಅಂತಾರಾಷ್ಟ್ರೀಯ ಮೈದಾನದಲ್ಲಿ ಮೂರನೇ ಹಾಗೂ ಅಂತಿಮ ಟೆಸ್ಟ್ ನಡೆಯಲಿದೆ. ಎರಡೂ ಪಂದ್ಯ ಗೆದ್ದಿರುವ ಆತಿಥೇಯ ಭಾರತ ಕ್ಲೀನ್​​ಸ್ವೀಪ್​ ಮೇಲೆ ಕಣ್ಣಿಟ್ಟಿದೆ.

Intro:Body:

ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಸಿಸಿಐ ನಿಯೋಜಿತ ಅಧ್ಯಕ್ಷ ಸೌರವ್ ಗಂಗೂಲಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ದೀದಿ ನನಗೆ ಅಕ್ಕನ ಸಮಾನ ಎಂದಿರುವ ದಾದಾ ಅವರು ಸಹೃದಯಿ ಎಂದು ಕೊಂಡಾಡಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.