ETV Bharat / sports

ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯ​: ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್​​​ ಇಂಡೀಸ್​​​​

author img

By

Published : Aug 28, 2019, 9:55 PM IST

ಟೀಂ ಇಂಡಿಯಾ ವಿರುದ್ಧ ಆರಂಭಗೊಳ್ಳಲಿರುವ 2ನೇ ಟೆಸ್ಟ್​​ ಪಂದ್ಯಕ್ಕಾಗಿ ವೆಸ್ಟ್​ ಇಂಡೀಸ್​ ತನ್ನ ತಂಡ ಪ್ರಕಟಗೊಳಿಸಿದ್ದು, ಗಾಯಗೊಂಡು ಹೊರ ಬಿದ್ದಿದ್ದ ಕೀಮೋ ಪೌಲ್​ ತಂಡಕ್ಕೆ ವಾಪಸ್​ ಆಗಿದ್ದಾರೆ.

ವೆಸ್ಟ್​ ಇಂಡೀಸ್​ ತಂಡ

ಜಮೈಕಾ: ಟೀಂ ಇಂಡಿಯಾ ವಿರುದ್ಧ ಬರುವ ಶುಕ್ರವಾರದಿಂದ ಆರಂಭಗೊಳ್ಳಲಿರುವ ಎರಡನೇ ಟೆಸ್ಟ್​​ ಪಂದ್ಯಕ್ಕಾಗಿ ವೆಸ್ಟ್​​ ಇಂಡೀಸ್​​​ ತಂಡ ಪ್ರಕಟಗೊಂಡಿದ್ದು, 13 ಸದಸ್ಯರನ್ನೊಳಗೊಂಡ ಬಲಿಷ್ಠ ಪಡೆಯನ್ನ ಅಲ್ಲಿನ ಆಯ್ಕೆ ಸಮಿತಿ ಪ್ರಕಟಗೊಳಿಸಿದೆ.

ಈಗಾಗಲೇ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ವಿರಾಟ್​​ ಕೊಹ್ಲಿ ಪಡೆ ಬರೋಬ್ಬರಿ 318 ರನ್​ಗಳ ಗೆಲುವು ದಾಖಲು ಮಾಡಿದೆ. ಇದೀಗ ಬರುವ ಶುಕ್ರವಾರದಿಂದ ಉಭಯ ತಂಡಗಳ ನಡುವೆ ಎರಡನೇ ಟೆಸ್ಟ್​ ಪಂದ್ಯ ಜಮೈಕಾದ ಸಬಿನಾ ಪಾರ್ಕ್​​ನಲ್ಲಿ ನಡೆಯಲಿದೆ. ವೆಸ್ಟ್​ ಇಂಡೀಸ್​ ತಂಡದಲ್ಲಿ ಕೀಮೋ ಪೌಲ್​ ಸೇರ್ಪಡೆಗೊಂಡಿದ್ದು, ಅವರಿಗಾಗಿ ಮಿಗ್ಯುವಲ್ ಕಮಿನ್ಸ್ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ.

West Indies Cricket Board
ವೆಸ್ಟ್​ ಇಂಡೀಸ್ ಕ್ರಿಕೆಟ್​​​​ ತಂಡ

ವೆಸ್ಟ್​ ಇಂಡೀಸ್ ತಂಡ: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾತ್‌ವೇಟ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರೋಸ್ಟನ್ ಚೇಸ್, ರಖೀಂ ಕಾರ್ನ್‌ವಾಲ್, ಜಹಮರ್ ಹ್ಯಾಮಿಲ್ಟನ್, ಶನಾನ್ ಗೇಬ್ರಿಯಲ್, ಶಿಮ್ರಾನ್ ಹೆಟ್ಮಾಯೆರ್, ಶಾಯ್ ಹೋಪ್ (ವಿಕೆಟ್ ಕೀಪರ್), ಕೀಮೊ ಪೌಲ್, ಕೆಮರ್ ರೂಚ್.

ಇದು ಐಸಿಸಿ ಟೆಸ್ಟ್​ ಚಾಂಪಿಯನ್​ ಕೂಡ ಆಗಿರುವ ಕಾರಣ ಟೀಂ ಇಂಡಿಯಾ ಮೊದಲ ಪಂದ್ಯದಲ್ಲೇ 318 ರನ್​ಗಳ ಗೆಲುವು ದಾಖಲು ಮಾಡಿ 60 ಪಾಯಿಂಟ್​ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಇನ್ನು ಎರಡನೇ ಟೆಸ್ಟ್​​ ಪಂದ್ಯಕ್ಕಾಗಿ ಈಗಾಗಲೇ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಿದ್ದು, ಕೆಲವೊಂದು ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

Intro:Body:

ಭಾರತ ವಿರುದ್ಧದ 2ನೇ ಟೆಸ್ಟ್​ಗೆ ಬಲಿಷ್ಠ ತಂಡ ಪ್ರಕಟಿಸಿದ ಕೆರಿಬಿಯನ್​​... ತಂಡ ಸೇರಿದ ಕೀಮೋ ಪೌಲ್​! 



ಜಮೈಕಾ: ಟೀಂ ಇಂಡಿಯಾ ವಿರುದ್ಧ ಬರುವ ಶುಕ್ರವಾರದಿಂದ ಆರಂಭಗೊಳ್ಳಲಿರುವ ಎರಡನೇ ಟೆಸ್ಟ್​​ ಪಂದ್ಯಕ್ಕಾಗಿ ಕೆರಿಬಿಯನ್​ ತಂಡ ಪ್ರಕಟಗೊಂಡಿದ್ದು, 13 ಸದಸ್ಯರನ್ನೊಳಗೊಂಡ ಬಲಿಷ್ಠ ಪಡೆಯನ್ನ ಅಲ್ಲಿನ ಆಯ್ಕೆ ಸಮಿತಿ ಪ್ರಕಟಗೊಳಿಸಿದೆ. 



ಈಗಾಗಲೇ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ವಿರಾಟ್​​ ಕೊಹ್ಲಿ ಪಡೆ ಬರೋಬ್ಬರಿ 318ರನ್​ಗಳ ಗೆಲುವು ದಾಖಲು ಮಾಡಿದೆ. ಇದೀಗ ಬರುವ ಶುಕ್ರವಾರದಿಂದ ಉಭಯ ತಂಡಗಳ ನಡುವೆ ಎರಡನೇ ಟೆಸ್ಟ್​ ಪಂದ್ಯ ಜಮೈಕಾದ ಸಬಿನಾ ಪಾರ್ಕ್​​ನಲ್ಲಿ ನಡೆಯಲಿದೆ. ವೆಸ್ಟ್​ ಇಂಡೀಸ್​ ತಂಡದಲ್ಲಿ ಕೀಮೋ ಪೌಲ್​ ಸೇರ್ಪಡೆಗೊಂಡಿದ್ದು, ಅವರಿಗಾಗಿ ಮಿಗ್ಯುವಲ್ ಕಮಿನ್ಸ್ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ. 



ವೆಸ್ಟ್ಇಂಡೀಸ್ ತಂಡ: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾತ್‌ವೇಟ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರೋಸ್ಟನ್ ಚೇಸ್, ರಖೀಂ ಕಾರ್ನ್‌ವಾಲ್, ಜಹಮರ್ ಹ್ಯಾಮಿಲ್ಟನ್, ಶನಾನ್ ಗೇಬ್ರಿಯಲ್, ಶಿಮ್ರಾನ್ ಹೆಟ್ಮಾಯೆರ್, ಶಾಯ್ ಹೋಪ್ (ವಿಕೆಟ್ ಕೀಪರ್), ಕೀಮೊ ಪೌಲ್, ಕೆಮರ್ ರೂಚ್. 



ಇದು ಐಸಿಸಿ ಟೆಸ್ಟ್​ ಚಾಂಪಿಯನ್​ ಕೂಡ ಆಗಿರುವ ಕಾರಣ ಟೀಂ ಇಂಡಿಯಾ ಮೊದಲ ಪಂದ್ಯದಲ್ಲೇ 318ರನ್​ಗಳ ಗೆಲುವು ದಾಖಲು ಮಾಡಿ 60 ಪಾಯಿಂಟ್​ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು ಎರಡನೇ ಟೆಸ್ಟ್​​ ಪಂದ್ಯಕ್ಕಾಗಿ ಈಗಾಗಲೇ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಿದ್ದು, ಕೆಲವೊಂದು ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.