ETV Bharat / sports

ವಾಂಖೆಡೆಯಲ್ಲಿ ನಿರ್ಣಾಯಕ ಸಮರ... ಸರಣಿ ಗೆಲುವಿಗೆ ಉಭಯ ತಂಡಗಳ ಫೈನಲ್​​​ ಫೈಟ್​​​

author img

By

Published : Dec 11, 2019, 8:43 AM IST

ಮೊದಲ ಟಿ-20 ಪಂದ್ಯದಲ್ಲಿ 208 ರನ್​​ ಬೆನ್ನತ್ತಿ ಗೆದ್ದಿದ್ದ ಭಾರತ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 170 ರನ್ ಗಳಿಸಿತ್ತು. ಈ ಮೊತ್ತವನ್ನು ಪ್ರವಾಸಿಗರು ಸುಲಭವಾಗಿ ಚೇಸ್ ಮಾಡಿ ಸರಣಿಯಲ್ಲಿ ಸಮಬಲ ಸಾಧಿಸಿದ್ದರು.

India vs West Indies
ನಿರ್ಣಾಯಕ ಟಿ20 ಪಂದ್ಯ

ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ನಡುವಿನ ಅಂತಿಮ ಹಾಗೂ ನಿರ್ಣಾಯಕ ಟಿ-20 ಪಂದ್ಯ ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ.

ಹೈದರಾಬಾದ್​​ನಲ್ಲಿ ಗೆದ್ದು, ತಿರುವನಂತಪುರಂನಲ್ಲಿ ಬಿದ್ದ ಭಾರತಕ್ಕೆ ಸದ್ಯ ಸರಣಿ ಸೋಲಿನ ಭಯ ಎದುರಾಗಿದೆ. ಇತ್ತ ಬಲಿಷ್ಠ ಭಾರತಕ್ಕೆ ತವರಿನಲ್ಲೇ ಟಕ್ಕರ್ ನೀಡಿ ಪ್ರಶಸ್ತಿಗೆ ಮುತ್ತಿಕ್ಕಲು ಪೊಲಾರ್ಡ್​ ಬಳಗ ತಯಾರಿ ನಡೆಸಿದೆ.

ಮೊದಲ ಟಿ-20 ಪಂದ್ಯದಲ್ಲಿ 208 ರನ್​​ ಬೆನ್ನತ್ತಿ ಗೆದ್ದಿದ್ದ ಭಾರತ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 170 ರನ್ ಗಳಿಸಿತ್ತು. ಈ ಮೊತ್ತವನ್ನು ಪ್ರವಾಸಿಗರು ಸುಲಭವಾಗಿ ಚೇಸ್ ಮಾಡಿ ಸರಣಿ ಸಮಬಲ ಸಾಧಿಸಿದ್ದರು.

ಭಾರತದ ಪ್ಲಸ್ ಮತ್ತು ಮೈನಸ್​​:

ಮೊದಲ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತವನ್ನು ಚೇಸ್ ಮಾಡಿದ್ದರೂ ಬೌಲಿಂಗ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ ಎನ್ನುವುದಕ್ಕೆ 200ಕ್ಕೂ ಅಧಿಕ ಟಾರ್ಗೆಟ್ ಸಾಕ್ಷಿ. ಇದರ ಜೊತೆಗೆ ಟೀಂ ಇಂಡಿಯಾದ ಕ್ಷೇತ್ರ ರಕ್ಷಣೆ ಸಹ ಅತ್ಯಂತ ಕಳಪೆಯಾಗಿದೆ. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೌಲಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಭಾರತ ತನ್ನ ಬ್ಯಾಟಿಂಗ್​ ಬಲವನ್ನೇ ಹೆಚ್ಚಾಗಿ ನಂಬಿದೆ. ಆದರೂ ಹಿಟ್​ಮ್ಯಾನ್​ ರೋಹಿತ್ ಶರ್ಮಾ ಎರಡೂ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಕೆ.ಎಲ್.ರಾಹುಲ್. ನಾಯಕ ಕೊಹ್ಲಿ, ಶಿವಂ ದುಬೆ ಹಾಗೂ ರಿಷಭ್ ಪಂತ್ ಬ್ಯಾಟಿನಿಂದ ಮಾತ್ರ ರನ್ ಬಂದಿದ್ದು, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಮಿಂಚು ಹರಿಸಿಲ್ಲ.

ತಂಡಕ್ಕೆ ಕಂಬ್ಯಾಕ್ ಮಾಡಿರುವ ಭುವನೇಶ್ವರ್ ಕುಮಾರ್ ವಿಕೆಟ್ ಕೀಳುವಲ್ಲಿ ವಿಫಲರಾಗುತ್ತಿದ್ದಾರೆ. ರನ್ ನಿಯಂತ್ರಣವೂ ಅಷ್ಟಾಗಿ ಆಗುತ್ತಿಲ್ಲ. ಹ್ಯಾಟ್ರಿಕ್ ಹೀರೋ ದೀಪಕ್ ಚಹರ್ ಹಾಗೂ ರವೀಂದ್ರ ಜಡೇಜಾ ಈ ಸರಣಿಯಲ್ಲಿ ಕ್ಲಿಕ್ ಆಗಿಲ್ಲ. ಯಜುವೇಂದ್ರ ಚಹಲ್ ಹಾಗೂ ವಾಷಿಂಗ್ಟನ್ ಸುಂದರ್ ಇನ್ನುಷ್ಟು ಪರಿಣಾಮಕಾರಿಯಾಗಬೇಕಿದೆ.

ವಿಂಡೀಸ್ ಪ್ಲಸ್ ಮತ್ತು ಮೈನಸ್:

ಭಾರತದಂತೆ ಪ್ರವಾಸಿ ತಂಡ ಸಹ ಬೌಲಿಂಗ್​ ವಿಭಾಗದಲ್ಲಿ ಕಂಚ ವೀಕ್ ಆಗಿದೆ. ಬ್ಯಾಟಿಂಗ್​​ನಲ್ಲಿ ದೊಡ್ಡ ಮೊತ್ತ ಕಲೆಹಾಕಿದ್ದರೂ ಪೊಲಾರ್ಡ್​ ಪಡೆಯ ಬೌಲರ್ಸ್​ ಸರಾಗವಾಗಿ ರನ್ ಬಿಟ್ಟುಕೊಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಕೇಸ್ರಿಕ್ ವಿಲಿಯಮ್ಸ್ ಹಾಗೂ ಎರಡನೇ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಬೌಲಿಂಗ್​ನಲ್ಲಿ ದುಬಾರಿಯಾದರು.

ಬ್ಯಾಟಿಂಗ್​​​ ವಿಭಾಗವನ್ನೇ ನೆಚ್ಚಿಕೊಂಡಿರುವ ವಿಂಡೀಸ್ ತಂಡಕ್ಕೆ ಲೆಂಡ್ಲ್​​ ಸಿಮನ್ಸ್, ಎವಿನ್ ಲೆವಿಸ್, ನಿಕೋಲಸ್ ಪೂರನ್, ನಾಯಕ ಕೀರನ್ ಪೊಲಾರ್ಡ್​ ಆಧಾರಸ್ತಂಭ. ಇವರ ಜೊತೆಯಲ್ಲಿ ಹೋಲ್ಡರ್, ಹೆಟ್ಮಯರ್ ಸಹ ಯಾವುದೇ ಕ್ಷಣದಲ್ಲೂ ಅಪಾಯಕಾರಿಯಾಗಬಲ್ಲರು.

ಪಿಚ್ ಹೇಗಿದೆ..?

ಮುಂಬೈನ ವಾಂಖೆಡೆ ಮೈದಾನ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಮೊದಲು ಬ್ಯಾಟ್ ಮಾಡಿದ ತಂಡ ಸುಲಭವಾಗಿ 200ರ ಗಡಿ ದಾಟಬಹುದು. 230 ರನ್ ಈ ಮೈದಾನದಲ್ಲಿನ ಅತ್ಯಧಿಕ ಸ್ಕೋರ್. ವಾಂಖೆಡೆ ಮೈದಾನದಲ್ಲಿ 200 ರನ್ ಸಹ ಚೇಸ್ ಮಾಡಲು ಸಾಧ್ಯವಿದ್ದು, ಮೊದಲು ಬ್ಯಾಟ್ ಮಾಡಿದ ತಂಡ ಬಿಗ್ ಸ್ಕೋರ್ ಗಳಿಸಲೇಬೇಕಿದೆ.

ಸಂಭಾವ್ಯ ಭಾರತ ತಂಡ:

ರೋಹಿತ್ ಶರ್ಮಾ, ಕೆ.ಎಲ್​.ರಾಹುಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಯಜುವೇಂದ್ರ ಚಹಲ್

ಸಂಭಾವ್ಯ ವಿಂಡೀಸ್ ತಂಡ:

ಲೆಂಡ್ಲ್ ಸಿಮನ್ಸ್, ಎವಿನ್ ಲೆವಿಸ್, ಶಿಮ್ರನ್ ಹೆಟ್ಮಯರ್, ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ಕೀರನ್ ಪೊಲಾರ್ಡ್​, ಜೇಸನ್ ಹೋಲ್ಡರ್, ಖ್ಯಾರಿ ಪೀರ್, ಹೇಡನ್ ವಾಲ್ಶ್, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್

Intro:Body:

ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ನಡುವಿನ ಅಂತಿಮ ಹಾಗೂ ನಿರ್ಣಾಯಕ ಟಿ20 ಪಂದ್ಯ ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ.



ಹೈದರಾಬಾದ್​​ನಲ್ಲಿ ಗೆದ್ದು, ತಿರುವನಂತಪುರಂನಲ್ಲಿ ಬಿದ್ದ ಭಾರತಕ್ಕೆ ಸದ್ಯ ಸರಣಿ ಸೋಲಿನ ಭಯ ಎದುರಾಗಿದೆ. ಇತ್ತ ಬಲಿಷ್ಠ ಭಾರತಕ್ಕೆ ತವರಿನಲ್ಲೇ ಟಕ್ಕರ್ ನೀಡಿ ಪ್ರಶಸ್ತಿ ಮುತ್ತಿಕ್ಕಲು ಪೊಲಾರ್ಡ್​ ಬಳಗ ತಯಾರಿ ನಡೆಸಿದೆ.



ಮೊದಲ ಟಿ20 ಪಂದ್ಯದಲ್ಲಿ 208 ರನ್​​ ಬೆನ್ನತ್ತಿ ಗೆದ್ದಿದ್ದ ಭಾರತ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 170 ರನ್ ಗಳಿಸಿತ್ತು. ಈ ಮೊತ್ತವನ್ನು ಪ್ರವಾಸಿಗರು ಸುಲಭವಾಗಿ ಚೇಸ್ ಮಾಡಿ ಸರಣಿ ಸಮಬಲ ಸಾಧಿಸಿದ್ದರು.



ಭಾರತದ ಪ್ಲಸ್ ಮತ್ತು ಮೈಸನ್:



ಮೊದಲ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತವನ್ನು ಚೇಸ್ ಮಾಡಿದ್ದರೂ ಬೌಲಿಂಗ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ ಎನ್ನುವುದಕ್ಕೆ 200ಕ್ಕೂ ಅಧಿಕ ಟಾರ್ಗೆಟ್ ಸಾಕ್ಷಿ. ಇದರ ಜೊತೆಗೆ ಟೀಂ ಇಂಡಿಯಾದ ಕ್ಷೇತ್ರರಕ್ಷಣೆ ಸಹ ಅತ್ಯಂತ ಕಳಪೆಯಾಗಿದೆ. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸಹ ಬೇಸರ ವ್ಯಕ್ತಪಡಿಸಿದ್ದಾರೆ. 



ಬೌಲಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಭಾರತ ತನ್ನ ಬ್ಯಾಟಿಂಗ್​ ಬಲವನ್ನೇ ಹೆಚ್ಚಾಗಿ ನಂಬಿದೆ. ಆದರೂ ಹಿಟ್​ಮ್ಯಾನ್​ ರೋಹಿತ್ ಶರ್ಮಾ ಎರಡೂ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಕೆ.ಎಲ್.ರಾಹುಲ್. ನಾಯಕ ಕೊಹ್ಲಿ, ಶಿವಂ ದುಬೆ ಹಾಗೂ ರಿಷಭ್ ಪಂತ್ ಬ್ಯಾಟಿನಿಂದ ಮಾತ್ರ ರನ್ ಬಂದಿದ್ದು, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಮಿಂಚು ಹರಿಸಿಲ್ಲ.



ತಂಡಕ್ಕೆ ಕಂಬ್ಯಾಕ್ ಮಾಡಿರುವ ಭುವನೇಶ್ವರ್ ಕುಮಾರ್ ವಿಕೆಟ್ ಕೀಳುವಲ್ಲಿ ವಿಫಲರಾಗುತ್ತಿದ್ದಾರೆ. ರನ್ ನಿಯಂತ್ರಣವೂ ಅಷ್ಟಾಗಿ ಆಗುತ್ತಿಲ್ಲ. ಹ್ಯಾಟ್ರಿಕ್ ಹೀರೋ ದೀಪಕ್ ಚಹರ್ ಹಾಗೂ ರವೀಂದ್ರ ಜಡೇಜಾ ಈ ಸರಣಿಯಲ್ಲಿ ಕ್ಲಿಕ್ ಆಗಿಲ್ಲ. ಯಜ್ವೇಂದ್ರ ಚಹಲ್ ಹಾಗೂ ವಾಷಿಂಗ್ಟನ್ ಸುಂದರ್ ಇನ್ನುಷ್ಟು ಪರಿಣಾಮಕಾರಿಯಾಗಬೇಕಿದೆ.



ವಿಂಡೀಸ್ ಪ್ಲಸ್ ಮತ್ತು ಮೈನಸ್:



ಭಾರತದಂತೆ ಪ್ರವಾಸಿ ತಂಡ ಸಹ ಬೌಲಿಂಗ್​ ವಿಭಾಗದಲ್ಲಿ ಕಂಚ ವೀಕ್ ಆಗಿದೆ. ಬ್ಯಾಟಿಂಗ್​​ನಲ್ಲಿ ದೊಡ್ಡ ಮೊತ್ತ ಕಲೆಹಾಕಿದ್ದರೂ ಪೊಲಾರ್ಡ್​ ಪಡೆಯ ಬೌಲರ್ಸ್​ ಸರಾಗವಾಗಿ ರನ್ ಬಿಟ್ಟುಕೊಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಕೇಸ್ರಿಕ್ ವಿಲಿಯಮ್ಸ್ ಹಾಗೂ ಎರಡನೇ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಬೌಲಿಂಗ್​ನಲ್ಲಿ ದುಬಾರಿಯಾದರು.



ಬ್ಯಾಟಿಂಗ್​​​ ವಿಭಾಗವನ್ನೇ ನೆಚ್ಚಿಕೊಂಡಿರುವ ವಿಂಡೀಸ್ ತಂಡಕ್ಕೆ ಲೆಂಡ್ಲ್​​ ಸಿಮನ್ಸ್, ಎವಿನ್ ಲೆವಿಸ್, ನಿಕೋಲಸ್ ಪೂರನ್, ನಾಯಕ ಕೀರನ್ ಪೊಲಾರ್ಡ್​ ಆಧಾರಸ್ತಂಭ. ಇವರ ಜೊತೆಯಲ್ಲಿ ಹೋಲ್ಡರ್, ಹೇಟ್ಮಯರ್ ಸಹ ಯಾವುದೇ ಕ್ಷಣದಲ್ಲೂ ಅಪಾಯಕಾರಿಯಾಗಬಲ್ಲರು.



ಪಿಚ್ ಹೇಗಿದೆ..?



ಮುಂಬೈನ ವಾಂಖೆಡೆ ಮೈದಾನ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಮೊದಲು ಬ್ಯಾಟ್ ಮಾಡಿದ ತಂಡ ಸುಲಭವಾಗಿ 200ರ ಗಡಿ ದಾಟಬಹುದು. 230 ರನ್ ಈ ಮೈದಾನ ಅತ್ಯಧಿಕ ಸ್ಕೋರ್. ಚೇಸಿಂಗ್ ಸಹ ಇಲ್ಲಿ ಸಾಧ್ಯವಿದ್ದು, ದೊಡ್ಡ ಮೊತ್ತ ಕಲೆಹಾಕದೇ ಹೋದಲ್ಲಿ ಸೋಲು ಖಚಿತ.



ಸಂಭಾವ್ಯ ಭಾರತ ತಂಡ:



ರೋಹಿತ್ ಶರ್ಮಾ, ಕೆ.ಎಲ್​.ರಾಹುಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಯಜ್ವೇಂದ್ರ ಚಹಲ್



ಸಂಭಾವ್ಯ ವಿಂಡೀಸ್ ತಂಡ:



ಲೆಂಡ್ಲ್ ಸಿಮನ್ಸ್, ಎವಿನ್ ಲೆವಿಸ್, ಶಿಮ್ರನ್ ಹೇಟ್ಮಯರ್, ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ಕೀರನ್ ಪೊಲಾರ್ಡ್​, ಜೇಸನ್ ಹೋಲ್ಡರ್, ಖ್ಯಾರಿ ಪೀರ್, ಹೇಡನ್ ವಾಲ್ಶ್, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್ 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.