ETV Bharat / sports

ಇಂದಿನಿಂದ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್​: ವಿರಾಟ್​ ಪಡೆ ಮುಂದಿದೆ ದುರ್ಗಮ ಹಾದಿ

author img

By

Published : Feb 13, 2021, 6:17 AM IST

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉಳಿದ 3 ಪಂದ್ಯಗಳ ಪೈಕಿ ಎರಡರಲ್ಲಿ ಜಯಿಸಬೇಕಿದೆ. ಒಂದೂ ಕೂಡ ಸೋಲುವಂತಿಲ್ಲ. ಕ್ಲಿಷ್ಟಕರ ಹಾದಿಯ ಪ್ರಥಮ ಸವಾಲು ಇಂದು ಎದುರಾಗಲಿದೆ. ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ರೂಟ್​ ಪಡೆ ಎದುರು 2ನೇ ಟೆಸ್ಟ್ ಪಂದ್ಯವ ಆಡಲು ಕೊಹ್ಲಿ ಬಳಗವು ಕಣಕ್ಕಿಳಿಯಲಿದೆ.

India vs England 2nd Test
India vs England 2nd Test

ಚೆನ್ನೈ: ಇಂದಿನಿಂದ ಭಾರತ ಇಂಗ್ಲೆಂಡ್​ ನಡುವೆ ಎರಡನೇ ಟೆಸ್ಟ್ ಇಲ್ಲಿನ ಎಂ ಎ ಚಿದಂಬರಂ​ ಕ್ರೀಡಾಂಗಣದಲ್ಲಿ ನಡೆಯಲಿದೆ. 21 ವರ್ಷಗಳಲ್ಲಿ ಮೊದಲ ಬಾರಿಗೆ ಒಂದು ತಂಡವು ಭಾರತವನ್ನು ಸೋಲಿಸಲಾಗದ ಚೆಪಾಕ್ ಕ್ರೀಡಾಂಗಣದಲ್ಲಿ ಸೋಲಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್​ ಪ್ರವೇಶಿಸುವ ವಿರಾಟ್ ಬಳಗದ ಹಾದಿಯನ್ನು ಕಠಿಣವಾಗಿಸಿದೆ​.

ಇಂದಿನಿಂದ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಮತೋಲನದ ತಂಡದ ಆಯ್ಕೆಯ ಮೇಲೆ ಕೊಹ್ಲಿಯ ಚಿತ್ತ ನೆಟ್ಟಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉಳಿದ 3 ಪಂದ್ಯಗಳ ಪೈಕಿ ಎರಡರಲ್ಲಿ ಜಯಿಸಬೇಕಿದೆ. ಒಂದೂ ಕೂಡ ಸೋಲುವಂತಿಲ್ಲ. ಕ್ಲಿಷ್ಟಕರ ಹಾದಿಯ ಪ್ರಥಮ ಸವಾಲು ಇಂದು ಎದುರಾಗಲಿದೆ. ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ರೂಟ್​ ಪಡೆ ಎದುರು 2ನೇ ಟೆಸ್ಟ್ ಪಂದ್ಯವ ಆಡಲು ಕೊಹ್ಲಿ ಬಳಗವು ಕಣಕ್ಕಿಳಿಯಲಿದೆ.

ಇದನ್ನೂ ಓದಿ: ಐಪಿಎಲ್ ಹರಾಜಿನಿಂದ ಹೊರಗುಳಿಯುವುದು ಬಹಳ ಕಷ್ಟದ ನಿರ್ಧಾರ: ರೂಟ್

ಇದೇ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ227 ರನ್‌ಗಳಿಂದ ಭಾರತ ತಂಡವು ಸೋತು, ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಕುಸಿದಿತ್ತು. ಇಂಗ್ಲೆಂಡ್ ತಂಡವು ಅಗ್ರಸ್ಥಾನಕ್ಕೇರಿತ್ತು.

ಭಾರತ: ವಿರಾಟ್ ಕೊಹ್ಲಿ (ಕ್ಯಾಪ್ಟನ್​), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೆಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಆರ್. ಅಶ್ವಿನ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಮಯಂಕ್ ಅಗರವಾಲ್.

ಇಂಗ್ಲೆಂಡ್: ಜೋ ರೂಟ್ (ಕ್ಯಾಪ್ಟನ್​), ರೋರಿ ಬರ್ನ್ಸ್, ಡಾಮ್ ಸಿಬ್ಲಿ, ಡ್ಯಾನ್ ಲಾರೆನ್ಸ್, ಬೆನ್ ಸ್ಟೋಕ್ಸ್‌, ಒಲಿ ಪೋಪ್,ಬೆನ್ ಫೋಕ್ಸ್‌ (ವಿಕೆಟ್‌ಕೀಪರ್), ಮೋಯಿನ್ ಅಲಿ, ಜ್ಯಾಕ್ ಲೀಚ್, ಕ್ರಿಸ್ ವೋಕ್ಸ್‌, ಸ್ಟುವರ್ಟ್ ಬ್ರಾಡ್, ಒಲಿ ಸ್ಟೋನ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.