ETV Bharat / sports

ಅಂಡರ್​​​-19 ವಿಶ್ವಕಪ್-2020​​: 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ತಂಡ ಪ್ರಕಟ

author img

By

Published : Dec 2, 2019, 4:07 PM IST

ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ವರ್ಷ ನಡೆಯಲಿರುವ ಅಂಡರ್​-19 ವಿಶ್ವಕಪ್​ ಟೂರ್ನಮೆಂಟ್​ಗಾಗಿ ಹಾಲಿ ಚಾಂಪಿಯನ್​ ಟೀಂ ಇಂಡಿಯಾ ತಂಡ ಪ್ರಕಟಗೊಂಡಿದ್ದು, ಉತ್ತರಪ್ರದೇಶದ ಎಡಗೈ ಬ್ಯಾಟ್ಸ್​​ಮನ್​ ಪ್ರಿಯಂ ಗಾರ್ಗ್​​ ಸಾರಥ್ಯ ವಹಿಸಿಕೊಂಡಿದ್ದಾರೆ.

U-19 Cricket World Cup
ಟೀಂ ಇಂಡಿಯಾ ತಂಡ ಪ್ರಕಟ

ಮುಂಬೈ: ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್​​-19 ವಿಶ್ವಕಪ್​​​ ಟೂರ್ನಿಗಾಗಿ ಟೀಂ ಇಂಡಿಯಾ 15 ಸದಸ್ಯರನ್ನೊಳಗೊಂಡ ತಂಡ ಪ್ರಕಟಗೊಂಡಿದ್ದು, ಉತ್ತರಪ್ರದೇಶದ ಯುವ ಬ್ಯಾಟ್ಸ್​​ಮನ್​ ಪ್ರಿಯಂ ಗಾರ್ಗ್​ಗೆ ನಾಯಕತ್ವ ನೀಡಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಜನವರಿ 17ರಿಂದ ಫೆಬ್ರವರಿ 9ರವರೆಗೆ ಅಂಡರ್​-19 ವಿಶ್ವಕಪ್​ ಟೂರ್ನಮೆಂಟ್​ ನಡೆಯಲಿದ್ದು, ಅದಕ್ಕಾಗಿ ಭಾರತೀಯ ಕ್ರಿಕೆಟ್​ನ ಜೂನಿಯರ್​ ಆಯ್ಕೆ​ ಮಂಡಳಿ ಟೀಂ ಇಂಡಿಯಾ ಪ್ರಕಟಗೊಳಿಸಿದೆ. ಪ್ರಿಯಂ ಗಾರ್ಗ್​​ ಎಡಗೈ ಬ್ಯಾಟ್ಸ್​​ಮನ್​ ಆಗಿದ್ದು, ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ದ್ವಿಶತಕ ಹಾಗೂ ಲಿಸ್ಟ್​​ A ಕ್ರಿಕೆಟ್​​ನಲ್ಲಿ ಶತಕ ಸಾಧನೆ ಮಾಡಿದ್ದಾರೆ. ಡಿಯೋಧರ್​ ಟ್ರೋಫಿಯಲ್ಲಿ ಭಾರತದ C ತಂಡದ ಪರ ಬ್ಯಾಟ್​ ಬೀಸಿ ಫೈನಲ್​ ಪಂದ್ಯದಲ್ಲಿ 74 ರನ್ ​ಗಳಿಸಿದ್ದರು. ಈ ವೇಳೆ B ತಂಡದ ವಿರುದ್ಧ ಸೋತ C ತಂಡ ರನ್ನರ್ ಅಪ್​​​ ಆಗಿ ಹೊರಹೊಮ್ಮಿತ್ತು.

U-19 Cricket World Cup
ಟೀಂ ಇಂಡಿಯಾ ತಂಡ ಪ್ರಕಟ

ಈಗಾಗಲೇ ನಾಲ್ಕು ಸಲ ಚಾಂಪಿಯನ್​ ಆಗಿರುವ ಭಾರತ ತಂಡ ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಜಪಾನ್ ಜತೆಗೆ ಎ ಗುಂಪಿನಲ್ಲಿ ಸೆಣಸಾಟ ನಡೆಸಲಿದೆ.

ವಿಶ್ವಕಪ್‌ಗೆ ಭಾರತ ಕಿರಿಯರ ತಂಡ:
ಪ್ರಿಯಂ ಗಾರ್ಗ್ (ನಾಯಕ), ಧ್ರುವ್ ಚಂದ್ ಜುರೆಲ್ (ಉಪ ನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಾಕ್ ವರ್ಮಾ, ದಿವ್ಯಾಂಶ್ ಸಕ್ಸೆನಾ, ಶುಭಾಂಗ್ ಹೆಗ್ಡೆ, ರವಿ ಬಿಶ್ನೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲಕರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ ಮತ್ತು ವಿದ್ಯಾದರ್ ಪಾಟೀಲ್​.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ತಂಡ
ಪ್ರಿಯಂ ಗಾರ್ಗ್ (ನಾಯಕ), ಧ್ರುವ್ ಚಂದ್ ಜುರೆಲ್ (ಉಪ ನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಾಕ್ ವರ್ಮಾ, ದಿವ್ಯಾಂಶ್ ಸಕ್ಸೆನಾ, ಶುಭಾಂಗ್ ಹೆಗ್ಡೆ, ರವಿ ಬಿಶ್ನೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲಕರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ ಮತ್ತು ವಿದ್ಯಾದರ್ ಪಾಟೀಲ್​, ದಿವ್ಯಾಂಶ್​ ಜೋಶಿ.

Intro:Body:

ಅಂಡರ್​​​-19 ವಿಶ್ವಕಪ್-2020​​: 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟ



ಮುಂಬೈ: ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್​​-19 ವಿಶ್ವಕಪ್​​​ ಟೂರ್ನಿಗಾಗಿ ಟೀಂ ಇಂಡಿಯಾ 15 ಸದಸ್ಯರನ್ನೊಳಗೊಂಡ ತಂಡ ಪ್ರಕಟಗೊಂಡಿದ್ದು, ಉತ್ತರಪ್ರದೇಶದ ಯುವ ಬ್ಯಾಟ್ಸ್​​ಮನ್​ ಪ್ರಿಯಂ ಗಾರ್ಗ್​ಗೆ ನಾಯಕತ್ವ ನೀಡಲಾಗಿದೆ. 



ದಕ್ಷಿಣ ಆಫ್ರಿಕಾದಲ್ಲಿ ಜನವರಿ 17ರಿಂದ ಫೆಬ್ರವರಿ 9ರವರೆಗೆ ಅಂಡರ್​-19 ವಿಶ್ವಕಪ್​ ಟೂರ್ನಾಮೆಂಟ್​ ನಡೆಯಲಿದ್ದು, ಅದಕ್ಕಾಗಿ ಭಾರತೀಯ ಕ್ರಿಕೆಟ್​ನ ಜೂನಿಯರ್​ ಆಯ್ಕೆ​ ಮಂಡಳಿ ಟೀಂ ಇಂಡಿಯಾ ಪ್ರಕಟಗೊಳಿಸಿದೆ. 



ಪ್ರಿಯಂ ಗಾರ್ಗ್​​ ಎಡಗೈ ಬ್ಯಾಟ್ಸ್​​ಮನ್​ ಆಗಿದ್ದು, ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ದ್ವಿಶತಕ ಹಾಗೂ ಲಿಸ್ಟ್​​ A ಕ್ರಿಕೆಟ್​​ನಲ್ಲಿ ಶತಕ ಸಾಧನೆ ಮಾಡಿದ್ದಾರೆ.  ಡಿಯೋಧರ್​ ಟ್ರೋಫಿಯಲ್ಲಿ ಭಾರತದ C ತಂಡದ ಪರ ಬ್ಯಾಟ್​ ಬೀಸಿ ಫೈನಲ್​ ಪಂದ್ಯದಲ್ಲಿ 74ರನ್​ಗಳಿಕೆ ಮಾಡಿದ್ದರು. ಈ ವೇಳೆ B ತಂಡದ ವಿರುದ್ಧ ಸೋತ C ತಂಡ ರನ್ನರ್​ ಆಗಿ ಹೊರಹೊಮ್ಮಿತ್ತು. 



ಈಗಾಗಲೇ ನಾಲ್ಕು ಸಲ ಚಾಂಪಿಯನ್​ ಆಗಿರುವ ಭಾರತ ತಂಡ ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಜಪಾನ್ ಜತೆಗೆ ಎ ಗುಂಪಿನಲ್ಲಿ ಸೆಣಸಾಟ ನಡೆಸಲಿದೆ. 



ವಿಶ್ವಕಪ್‌ಗೆ ಭಾರತ ಕಿರಿಯರ ತಂಡ:

ಪ್ರಿಯಂ ಗಾರ್ಗ್ (ನಾಯಕ), ಧ್ರುವ್ ಚಂದ್ ಜುರೆಲ್ (ಉಪನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಾಕ್ ವರ್ಮಾ, ದಿವ್ಯಾಂಶ್ ಸಕ್ಸೆನಾ, ಶುಭಾಂಗ್ ಹೆಗ್ಡೆ, ರವಿ ಬಿಶ್ನೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲಕರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ ಮತ್ತು ವಿದ್ಯಾದರ್ ಪಾಟೀಲ್​



ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ತಂಡ

ಪ್ರಿಯಂ ಗಾರ್ಗ್ (ನಾಯಕ), ಧ್ರುವ್ ಚಂದ್ ಜುರೆಲ್ (ಉಪನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಾಕ್ ವರ್ಮಾ, ದಿವ್ಯಾಂಶ್ ಸಕ್ಸೆನಾ, ಶುಭಾಂಗ್ ಹೆಗ್ಡೆ, ರವಿ ಬಿಶ್ನೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲಕರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ ಮತ್ತು ವಿದ್ಯಾದರ್ ಪಾಟೀಲ್​, ದಿವ್ಯಾಂಶ್​ ಜೋಶಿ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.