ETV Bharat / sports

ಭಾರತ ಎ ತಂಡದ ಸಾಂಘಿಕ ಪ್ರದರ್ಶನಕ್ಕೆ ಒಲಿದ ಜಯ

author img

By

Published : Jan 22, 2020, 1:34 PM IST

3 ಪಂದ್ಯಗಳ ಅನಧಿಕೃತ ಸರಣಿಯ ಬುಧವಾರ ನಡೆದ ಮೊದಲ ಪಂದ್ಯದಲ್ಲೇ ಭಾರತ ತಂಡ ಆತಿಥೇಯರ ವಿರುದ್ಧ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿ ಗೆಲುವು ಸಾಧಿಸಿದೆ. ಮೊದಲು ಕಿವೀಸ್​ ತಂಡವನ್ನು ಕೇವಲ 230 ರನ್​ಗಳಿಗೆ ಆಲೌಟ್​ ಮಾಡಿದ ಗಿಲ್​ ಪಡೆ 231 ರನ್​ಗಳ ಗುರಿಯನ್ನು ಕೇವಲ 29.3 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು ತಲುಪಿ ಜಯ ಸಾಧಿಸಿತು.

India A beat New Zealand A
India A beat New Zealand A

ಲಿಂಕಾನ್​: ನ್ಯೂಜಿಲ್ಯಾಂಡ್ ಎ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ 5 ವಿಕೆಟ್​ಗಳ ಭರ್ಜರಿ ಜಯಗಳಿಸಿದ್ದು, ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಕಿವೀಸ್​ ಪರ ರಚಿನ್​ ರವೀಂದ್ರ 49, ಟಾಮ್​ ಬ್ರಸ್​ 47 ಹಾಗೂ ಕೋಲ್​ ಮೆಕಾಂಚಿ 34 ರನ್​ಗಳಿಸಿ ತಂಡದ ಮೊತ್ತವನ್ನು 200 ಗಡಿದಾಟಿಸಿದರು. ಭಾರತದ ಪರ ಮೊಹಮ್ಮದ್​ ಸಿರಾಜ್​ 3, ಖಲೀಲ್​ ಅಹ್ಮದ್​ 2, ಅಕ್ಷರ್​ ಪಟೇಲ್​ 2, ವಿಜಯ್​ ಶಂಕರ್ ಹಾಗೂ ರಾಹುಲ್ ಚಹಾರ್​ ತಲಾ ಒಂದೊಂದು ವಿಕೆಟ್​ ಪಡೆದರು.

231 ರನ್​ಗಳ ಸುಲಭ ಗುರಿ ಪಡೆದ ಭಾರತ ತಂಡಕ್ಕೆ ಆರಂಭಿಕರಾದ ಪೃಥ್ವಿ ಶಾ 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್​, ಹಾಗೂ ಮಯಾಂಕ್​(29) ಮೊದಲ ವಿಕೆಟ್​ಗೆ 79 ರನ್​ ಸೇರಿಸಿ ಉತ್ತಮ ಆರಂಭ ನೀಡಿದರು.​

ಇವರಿಬ್ಬರೂ ಜಮ್ಮಿ ನೀಶಮ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ನಾಯಕ ಶುಬ್ಮನ್​ ಗಿಲ್(30)​ ಹಾಗೂ ಸಂಜು ಸಾಮ್ಸನ್​ ಕೂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗಿಲ್​ 36 ಎಸೆತಗಳಲ್ಲಿ 30 ರನ್​ಗಳಿಸಿದರೆ, ಕೀವೀಸ್​ ವಿರುದ್ಧ ಸೀನಿಯರ್​ ಟಿ20 ತಂಡಕ್ಕೆ ಆಯ್ಕೆಯಾಗಿರುವ ಸ್ಯಾಮ್ಸನ್​ ಕೇವಲ 21 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 3 ಬೌಂಡರಿ ನೆರವಿನಿಂದ 39 ರನ್​ಗಳಿಸಿದರು. ನಂತರ ಬಂದ ಸೂರ್ಯಕುಮಾರ್​ ಯಾದವ್​ ಕೇವಲ 18 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್​ ಸಹಿತ 35 ರನ್​ಗಳಿಸಿ ಔಟಾದರು.

ವಿಜಯ್​ ಶಂಕರ್​ ಔಟಾಗದೆ 20, ಕೃನಾಲ್​ ಪಾಂಡ್ಯ ಔಟಾಗದೆ 13 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.