ETV Bharat / sports

ಶಾಯ್​ ಹೋಪ್​ ವೇಗವಾಗಿ 3000 ರನ್ ಸಿಡಿಸಿದ ವಿಶ್ವದ 2ನೇ ಆಟಗಾರ

author img

By

Published : Dec 22, 2019, 5:37 PM IST

ಪ್ರಸ್ತುತ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಶಾಯ್​ ಹೋಪ್​ ಕೇವಲ 67 ಇನ್ನಿಂಗ್ಸ್​ಗಳಲ್ಲಿ 3000 ರನ್​ ಪೂರೈಸುವ ಮೂಲಕ ಪಾಕಿಸ್ತಾನದ ಬಾಬರ್​ ಅಜಂ(68)ರನ್ನು ಇಂದಿಕ್ಕಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

fastest batsman to score 3000 ODI runs
fastest batsman to score 3000 ODI runs

ಕಟಕ್​: ಭಾರತದ ವಿರುದ್ಧ ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯದಲ್ಲಿ ಶಾಯ್​ ಹೋಪ್​ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 3000 ರನ್​ಗಳಿಸಿದ 2ನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು.

ಪ್ರಸ್ತುತ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಶಾಯ್​ ಹೋಪ್​ ಕೇವಲ 67 ಇನ್ನಿಂಗ್ಸ್​ಗಳಲ್ಲಿ 3000 ರನ್​ ಪೂರೈಸುವ ಮೂಲಕ ಪಾಕಿಸ್ತಾನದ ಬಾಬರ್​ ಅಜಂ(68)ರನ್ನು ಇಂದಿಕ್ಕಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

ಹೋಪ್ ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ 102,ಎರಡನೇ ಪಂದ್ಯದಲ್ಲಿ 78 ಹಾಗೂ ಮೂರನೇ ಪಂದ್ಯದಲ್ಲಿ 42 ರನ್​ಗಳಿಸಿದ್ದರು.

ದಕ್ಷಿಣ ಆಫ್ರಿಕಾದ ಹಾಸಿಂ ಆಮ್ಲ 57 ಇನ್ನಿಂಗ್ಸ್​ಗಳಲ್ಲಿ 3000 ರನ್​ ಗಳಿಸಿರುವುದು ವಿಶ್ವದಾಖಲೆಯಾಗಿದೆ. ಹೋಪ್(67)​ ಎರಡನೇ ಸ್ಥಾನದಲ್ಲಿದ್ದರೆ, ಬಾಬರ್​ ಅಜಂ(68), ವಿವಿ ರಿಚರ್ಡ್ಸ್​(69) ಇನ್ನಿಂಗ್ಸ್​ಗಳಲ್ಲಿ ಈ ಸಾದನೆ ಮಾಡಿದ್ದಾರೆ.

ಭಾರತೀಯರಲ್ಲಿ ಶಿಖರ್​ ಧವನ್ ​72 ಇನ್ನಿಂಗ್ಸ್​ಗಳಲ್ಲಿ 3000 ರನ್​ ಬಾರಿಸಿದ್ದಾರೆ. ಕೊಹ್ಲಿ ಈ ದಾಖಲೆಗಾಗಿ 75 ಇನ್ನಿಂಗ್ಸ್​ ತೆಗೆದುಕೊಂಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.