ETV Bharat / sports

ಸೆಹ್ವಾಗ್​ಗಿಂತಲೂ ರೋಹಿತ್​ ಶರ್ಮಾ ಉತ್ತಮ ಬ್ಯಾಟ್ಸ್​ಮನ್​: ಪಾಕ್​ ಮಾಜಿ ಬೌಲರ್ ಅಭಿಮತ​

author img

By

Published : Oct 7, 2019, 4:50 PM IST

ರೋಹಿತ್​ ಶರ್ಮಾ ಆರಂಭಿಕನಾಗಿ ಪದಾರ್ಪಣೆ ಮಾಡಿದ ದಾಖಲೆಯ ಶತಕ ಸಿಡಿಸುತ್ತಿದ್ದಂತೆ ಹಲವಾರು ಮಾಜಿ ಕ್ರಿಕೆಟಿಗರು ರೋಹಿತ್​ರನ್ನು  ಸೆಹ್ವಾಗ್​ಗೆ ಹೋಲಿಕೆ ಮಾಡಿ ಕೊಂಡಾಡುತ್ತಿದ್ದಾರೆ. ಆದರೆ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನದ ಮಾಜಿ ವೇಗಿ ಶೋಯಬ್​ ಅಖ್ತರ್​ ರೋಹಿತ್​ ಶರ್ಮಾ ಸೆಹ್ವಾಗ್​ಗಿಂತೂ ಉತ್ತಮ ತಂತ್ರಗಾರಿಕೆಯುಳ್ಳ ಬ್ಯಾಟ್ಸ್​ಮನ್​ ಎಂದು ಹೇಳುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

IND vs SA

ಮುಂಬೈ: ರೋಹಿತ್​ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಎರಡೂ ಇನ್ನಿಂಗ್ಸ್​ನಲ್ಲೂ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದರು.

ರೋಹಿತ್​ ಶರ್ಮಾ ಆರಂಭಿಕನಾಗಿ ಪದಾರ್ಪಣೆ ಮಾಡಿದ ದಾಖಲೆಯ ಶತಕ ಸಿಡಿಸುತ್ತಿದ್ದಂತೆ ಹಲವಾರು ಮಾಜಿ ಕ್ರಿಕೆಟಿಗರು ರೋಹಿತ್​ರನ್ನು ಸೆಹ್ವಾಗ್​ಗೆ ಹೋಲಿಕೆ ಮಾಡಿ ಕೊಂಡಾಡುತ್ತಿದ್ದಾರೆ. ಆದರೆ, ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನದ ಮಾಜಿ ವೇಗಿ ಶೋಯಬ್​ ಅಖ್ತರ್​ ರೋಹಿತ್​ ಶರ್ಮಾ ಸೆಹ್ವಾಗ್​ಗಿಂತೂ ಉತ್ತಮ ತಂತ್ರಗಾರಿಕೆಯುಳ್ಳ ಬ್ಯಾಟ್ಸ್​ಮನ್​ ಎಂದು ಹೇಳುವ ಮೂಲಕ ಎಲ್ಲರ ಅಚ್ಚರಿ ಮೂಡಿಸಿದ್ದಾರೆ.

" ಸೆಹ್ವಾಗ್​ ಬ್ಯಾಟಿಂಗ್​ ಇಳಿದರೆ ಅಗ್ರೆಸಿವ್​ ಬ್ಯಾಟಿಂಗ್​ ನಡೆಸಿ ಬೌಂಡರಿಗಳ ಸುರಿಮಳೆ ಸುರಿಸುತ್ತಾರೆ. ಆದರೆ ರೋಹಿತ್​ ಸ್ಫೋಟಕ ಬ್ಯಾಟಿಂಗ್​ ಆಡುವುದರ ಜೊತೆಗೆ ಉತ್ತಮ ತಂತ್ರಗಾರಿಕೆಯನ್ನು ಹೊಂದಿದ್ದಾರೆ" ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ತಿಳಿಸಿದ್ದಾರೆ.

ರೋಹಿತ್​ ತಮ್ಮ ಇನ್ನಿಂಗ್ಸ್​ಗಾಗಿ ಸಮಯ ತೆಗೆದುಕೊಳ್ಳುತ್ತಾರೆ. ವಿವಿಧ ಶಾರ್ಟ್ಸ್​​​ಗಳ ಪ್ರಯೋಗ ಮಾಡುವುದನ್ನು ಕರಗತಮಾಡಿಕೊಂಡಿದ್ದಾರೆ. ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ಕಡಿಮೆ ಅಭಿರುಚಿ ಹೊಂದಿದ್ದರೂ ಎಲ್ಲಾ ಕ್ರಿಕೆಟ್​ನಲ್ಲಿ ತಾವೊಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್ ಎಂಬುದನ್ನು ಸಾಬೀತು ಪಡಿಸಲು ಬಯಸಿದ್ದರು. ಆದರೆ ಎಲ್ಲ ಅಲೋಚನೆಗಳನ್ನು ತಲೆಯಿಂದ ಹೊರಗಿಟ್ಟು ಸೆಂಚುರಿ ಸಿಡಿಸುವ ಮೂಲಕ ಅಂದುಕೊಂಡಿದ್ದನ್ನು ಸಾಬೀತುಪಡಿಸಿದ್ದಾರೆ ಎಂದು ಅಖ್ತರ್​ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  • " class="align-text-top noRightClick twitterSection" data="">
Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.