ETV Bharat / sports

ಮೊದಲ 100 ಎಸೆತ ಎದುರಿಸಿ ಕಡಿಮೆ ರನ್​: 57 ವರ್ಷಗಳ ನಂತರ ವಿಶೇಷ ದಾಖಲೆ ಬರೆದ ವಿಹಾರಿ

author img

By

Published : Jan 11, 2021, 5:25 PM IST

ಕೊನೆಯ ದಿನ ಪಂತ್​ ಮತ್ತು ಪೂಜಾರ ಅವರ ಭರ್ಜರಿ ಆಟದ ನೆರವಿನಿಂದ ಗೆಲುವಿನತ್ತ ಸಾಗಿದ್ದ ಪಂದ್ಯ ಅವರಿಬ್ಬರ ನಂತರ ಸೋಲಿನತ್ತ ಮುಖ ಮಾಡಿತ್ತು. ಆದರೆ ಅಶ್ವಿನ್ ಹಾಗೂ ಗಾಯಾಳು ವಿಹಾರಿ ಅವರ ಸಾಹಸದಿಂದ ಡ್ರಾನಲ್ಲಿ ಅಂತ್ಯಗೊಂಡಿತು.

ಹನುಮ ವಿಹಾರಿ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್​
ಹನುಮ ವಿಹಾರಿ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್​

ಸಿಡ್ನಿ: ಭಾರತ ತಂಡ ಬಾರ್ಡರ್-ಗಾವಸ್ಕರ್ ಸರಣಿಯ ಮೂರನೇ ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಈ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಹನುಮ ವಿಹಾರಿ ಮೊದಲ 100 ಎಸೆತಗಳಲ್ಲಿ 6 ರನ್‌ಗಳಿಸಿದ್ದರು. ಇದು ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲೇ ಮೊದಲ 100 ಎಸೆಗಳಲ್ಲಿ ಗಳಿಸಿದ ಅತ್ಯಂತ ಕಡಿಮೆ ರನ್​ ಆಗಿದೆ.

ಕೊನೆಯ ದಿನ ಪಂತ್​ ಮತ್ತು ಪೂಜಾರ ಅವರ ಭರ್ಜರಿ ಆಟದ ನೆರವಿನಿಂದ ಗೆಲುವಿನತ್ತ ಸಾಗಿದ್ದ ಪಂದ್ಯ ಅವರಿಬ್ಬರ ನಂತರ ಸೋಲಿನತ್ತ ಮುಖ ಮಾಡಿತ್ತು. ಆದರೆ ಅಶ್ವಿನ್ ಹಾಗೂ ಗಾಯಾಳು ವಿಹಾರಿ ಅವರ ಸಾಹಸದಿಂದ ಡ್ರಾನಲ್ಲಿ ಅಂತ್ಯಗೊಂಡಿತು.

ವಿಹಾರಿ ಈ ಇನ್ನಿಂಗ್ಸ್​ನಲ್ಲಿ ಮೊದಲ 100 ಎಸೆಗಳಲ್ಲಿ 6 ರನ್​ ಸಿಡಿಸಿದ್ದರು. ಕೊನೆಗೆ 161 ಎಸೆತಗಲಲ್ಲಿ ಅಜೇಯ 23 ರನ್​ ಸಿಡಿಸಿ ಡ್ರಾ ಆಗುವಂತೆ ನೆರವಾದರು. ಇದು ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಇಂಗ್ಲೆಂಡ್​ನ ಜಾನ್ ಮರ್ರೆ ಅವರ ನಂತರ ಬ್ಯಾಟ್ಸ್​ಮನ್​ ಒಬ್ಬ 100 ಎಸೆತಗಳಲ್ಲಿ ಗಳಿಸಿದ 2ನೇ ಕನಿಷ್ಟ ಮೊತ್ತ ಎನಿಸಿಕೊಂಡಿತು. ಮರ್ರೆ 100 ಎಸೆತಗಳಲ್ಲಿ ಇದೇ ಕ್ರೀಡಾಂಗಣದಲ್ಲಿ 3 ರನ್​ಗಳಿಸಿದ್ದರು.

ಚೇತೇಶ್ವರ್​ ಪೂಜಾರ ವಿಕೆಟ್​ ನಂತರ ಮೈದಾನಕ್ಕೆ ಬಂದಿದ್ದ ಅವರು ಹ್ಯಾಮ್​ಸ್ಟ್ರಿಂಗ್​ಗೆ ಒಳಗಾಗಿದ್ದರು. ಆದರೂ ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರಿಸಿದ್ದ ಅಶ್ವಿನ್​ ಜೊತೆಗೆ ಎರಡೂವರೆ ಗಂಟೆಗಳ ಕಾಲ ಆಡಿ ಆಸೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.

ಇದನ್ನು ಓದಿ:2002ರ ನಂತರ 4ನೇ ಇನ್ನಿಂಗ್ಸ್​ನಲ್ಲಿ 100ಕ್ಕೂ ಹೆಚ್ಚು ಓವರ್ ಬ್ಯಾಟ್ ಬೀಸಿದ ಟೀಂ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.