ETV Bharat / sports

2021ರ ಟಿ -20 ವಿಶ್ವಕಪ್​ ಆತಿಥ್ಯ ಭಾರತಕ್ಕಾ ಇಲ್ಲಾ ಆಸ್ಟ್ರೇಲಿಯಾ ಮಂಡಳಿಗಾ? ಐಸಿಸಿ ಹೇಳಿದ್ದೇನು?

author img

By

Published : Jul 21, 2020, 12:41 PM IST

ಸದ್ಯದ ಮಾಹಿತಿ ಪ್ರಕಾರ 2021ರ ಟಿ-20 ವಿಶ್ವಕಪ್​ನ ಆತಿಥ್ಯವನ್ನು ಭಾರತ ವಹಿಸಿಕೊಳ್ಳಲಿದೆ. ಆದರೆ, 2020ರ ಆವೃತ್ತಿಯನ್ನು ಆಸ್ಟ್ರೇಲಿಯಾ ನಡೆಸಲು ಸಾಧ್ಯವಾಗದ ಕಾರಣ , ಅವರು 2021ರ ವಿಶ್ವಕಪ್​ ಆತಿಥ್ಯವನ್ನು ತಮಗೆ ನೀಡಿ 2022 ರ ಆತಿಥ್ಯವನ್ನು ಭಾರತಕ್ಕೆ ನೀಡುವಂತೆ ಐಸಿಸಿಗೆ ಮನವಿ ಮಾಡಿಕೊಂಡಿದ್ದಾರೆ.

2021 ವಿಶ್ವಕಪ್​
2021 ವಿಶ್ವಕಪ್​

ನವದೆಹಲಿ: ಕೋವಿಡ್ 19 ಭೀತಿಯಿಂದ ಐಸಿಸಿ 2020ರ ಟಿ-20 ವಿಶ್ವಕಪ್​ ಕೂಟವನ್ನು ಮುಂದೂಡಿದೆ.​ ಇದೇ ಸಂದರ್ಭದಲ್ಲಿ 2023 ರ 50 ಓವರ್​ಗಳ ವಿಶ್ವಕಪ್​ ಅಕ್ಟೋಬರ್​- ನವೆಂಬರ್​ನಲ್ಲಿ ಭಾರತದಲ್ಲಿ ನಡೆಯಲಿದೆ ಎಂದು ಘೋಷಣೆ ಮಾಡಿದೆ.

ಸದ್ಯದ ಮಾಹಿತಿ ಪ್ರಕಾರ 2021ರ ಟಿ-20 ವಿಶ್ವಕಪ್​ನ ಆತಿಥ್ಯವನ್ನು ಭಾರತ ವಹಿಸಿಕೊಳ್ಳಲಿದೆ. ಆದರೆ, 2020ರ ಆವೃತ್ತಿಯನ್ನು ಆಸ್ಟ್ರೇಲಿಯಾ ನಡೆಸಲು ಸಾಧ್ಯವಾಗದ ಕಾರಣ , ಅವರು 2021ರ ವಿಶ್ವಕಪ್​ ಆತಿಥ್ಯ ತಮಗೆ ನೀಡಿ 2022ರ ಆತಿಥ್ಯವನ್ನು ಭಾರತಕ್ಕೆ ನೀಡುವಂತೆ ಐಸಿಸಿಗೆ ಮನವಿ ಮಾಡಿಕೊಂಡಿದ್ದಾರೆ.

ಐಸಿಸಿ 2021 ಮತ್ತು 2022ರ ಟಿ-20 ವಿಶ್ವಕಪ್​ ಆಥಿತ್ಯ ವಹಿಸುವ ಸ್ಥಳವನ್ನು ಇನ್ನು ಘೋಷಣೆ ಮಾಡಿಲ್ಲ. ಕಾರಣ ಮುಂದಿನ ವರ್ಷದ ವಿಶ್ವಕಪ್​ ಹಕ್ಕು ಹೊಂದಿರುವ ಭಾರತ ಆಸ್ಟ್ರೇಲಿಯಾಕ್ಕೆ ಹಸ್ತಾಂತರಿಸುತ್ತದೆಯೇ ಎಂಬುದರ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಐಸಿಸಿ ಸದಸ್ಯರೊಬ್ಬರು ಹೇಳಿದ್ದಾರೆ.

BCCI
ಬಿಸಿಸಿಐ

"ಟಿ20 ವಿಶ್ವಕಪ್​ಗಳ ಸ್ಥಳವನ್ನು ಗೊತ್ತು ಮಾಡದಿರುವುದು ಮತ್ತು 2023ರ ವಿಶ್ವಕಪ್ ಟೂರ್ನಿಯನ್ನು ಕೆಲವು ತಿಂಗಳು ಮುಂದೂಡಿರುವ ಕಾರಣ 2021ರ ಆತಿಥ್ಯ ಆಸ್ಟ್ರೇಲಿಯಾಕ್ಕೆ ಹೋದರೆ ಮತ್ತು ಭಾರತ 2023ರ ಆತಿಥ್ಯವನ್ನು ಭಾರತ ವಹಿಸಿದರೆ ಬ್ರಾಡ್​ಕಾಸ್ಟರ್​ಗಳಿಗೆ ಉಸಿರಾಡಲು ಜಾಗಮಾಡಿಕೊಟ್ಟಂತಾಗುತ್ತದೆ. ಅಲ್ಲದೇ 2022ರ ಟಿ -20 ಹಾಗೂ 2023ರ ಏಕದಿನ ವಿಶ್ವಕಪ್​ಗಳನ್ನು 6 ತಿಂಗಳಲ್ಲಿ ಭಾರತದಲ್ಲಿ ಆಯೋಜಿಸುವುದು ಕಷ್ಟ ಸಾಧ್ಯವಾಗುತ್ತದೆ" ಎಂದು ಅವರು ವಿವರಿಸಿದ್ದಾರೆ.

ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ಇದು ಭಾರತೀಯ ಮಂಡಳಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಎರಡೂ ಒಗ್ಗಟ್ಟಿನಿಂದ ತೆಗೆದುಕೊಳ್ಳುವ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ.

" ಬಿಸಿಸಿಐ ಮತ್ತು ಸಿಎ ಬಹಳ ಬಲವಾದ ಸಂಬಂಧ ಹೊಂದಿವೆ ಮತ್ತು ಈ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ಪರಸ್ಪರ ನಂಬಿಕೆಯನ್ನು ಇಟ್ಟುಕೊಂಡು ಎರಡು ಮಂಡಳಿಗಳ ನಡುವಿನ ಚರ್ಚೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ " ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.