ETV Bharat / sports

ಸಿಎ ಜನಾಂಗೀಯ ನಿಂದನೆ ವಿರುದ್ಧ ಕೈಗೊಂಡ ಕ್ರಮದ ವರದಿ ಕೇಳಿದ ಐಸಿಸಿ

author img

By

Published : Jan 10, 2021, 7:59 PM IST

ಭಾನುವಾರ ಭಾರತದ ವೇಗದ ಬೌಲರ್​ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್​ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಪ್ರೇಕ್ಷಕರ ಗುಂಪೊಂದು ಅವಾಚ್ಯ ಶಬ್ಧಗಳಿಂದ ನಿಂದಿಸಿತ್ತು. ಈ ಘಟನೆ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಭಾರತೀಯ ಕ್ರಿಕೆಟಿಗರ ಕ್ಷಮೆ ಕೋರಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

ಸಿಡ್ನಿ ಟೆಸ್ಟ್​ನಲ್ಲಿ ಜನಾಂಗೀಯ ನಿಂದನೆ
ಸಿಡ್ನಿ ಟೆಸ್ಟ್​ನಲ್ಲಿ ಜನಾಂಗೀಯ ನಿಂದನೆ

ದುಬೈ: ಭಾರತೀಯ ಆಟಗಾರರ ಮೇಲಿನ ಜನಾಂಗೀಯ ನಿಂದನೆಯ ಘಟನೆಯನ್ನು ತೀವ್ರವಾಗಿ ಖಂಡಡಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿರುವ ವರದಿ ನೀಡುವಂತೆ ಸರಣಿಗೆ ಆತಿಥ್ಯ ವಹಿಸಿರುವ ಕ್ರಿಕೆಟ್​ ಆಸ್ಟ್ರೇಲಿಯಾಗೆ ಸೂಚನೆ ನೀಡಿದೆ.

"ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್​ ಪಂದ್ಯದ ವೇಳೆ ನಡೆದಿರುವ ಜನಾಂಗೀಯ ನಿಂದನೆ ಘಟನೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕಟುವಾಗಿ ಖಂಡಿಸುತ್ತದೆ. ಈ ಘಟನೆ ಕುರಿತು ತನಿಖೆ ನಡೆಸಲು ಕ್ರಿಕೆಟ್​ ಆಸ್ಟ್ರೇಲಿಯಾಕ್ಕೆ ಅಗತ್ಯವಾದ ಬೆಂಬಲ ನೀಡಲು ಐಸಿಸಿ ಬದ್ಧವಾಗಿದೆ" ಎಂದು ಅಪೆಕ್ಸ್​ ಬಾಡಿ ಹೇಳಿಕೆ ಬಿಡುಗಡೆ ಮಾಡಿದೆ.

ಜಸ್ಪ್ರೀತ್ ಬುಮ್ರಾ- ಮೊಹಮ್ಮದ್ ಸಿರಾಜ್​
ಜಸ್ಪ್ರೀತ್ ಬುಮ್ರಾ-ಮೊಹಮ್ಮದ್ ಸಿರಾಜ್​

ಈ ರೀತಿಯ ತಾರತಮ್ಯದ ವಿರುದ್ಧ ಐಸಿಸಿ ಶೂನ್ಯ ಸಹಿಷ್ಣು ನೀತಿಯನ್ನು ಅನುಸರಿಸುತ್ತದೆ ಎಂದು ಐಸಿಸಿಯ ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನಿ ಹೇಳಿದ್ದಾರೆ.

"ನಮ್ಮ ಕ್ರೀಡೆಯಲ್ಲಿ ತಾರತಮ್ಯಕ್ಕೆ ಸ್ಥಳವಿಲ್ಲ ಮತ್ತು ಕೆಲವು ಅಭಿಮಾನಿಗಳು ಈ ಅಸಹ್ಯಕರ ವರ್ತನೆಯನ್ನು ಸ್ವೀಕಾರಾರ್ಹ ಎಂದು ಭಾವಿಸಿರುವುದರಿಂದ ನಾವು ನಿರಾಶೆಗೊಂಡಿದ್ದೇವೆ. ನಮ್ಮಲ್ಲಿ ಸಮಗ್ರವಾದ ತಾರತಮ್ಯ ವಿರೋಧಿ ನೀತಿ ಇದೆ. ಅದನ್ನು ಸದಸ್ಯರು ಪಾಲಿಸಬೇಕು ಮತ್ತು ಅಭಿಮಾನಿಗಳು ನೀತಿಗಳಿಗೆ ಬದ್ಧವಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಗ್ರೌಂಡ್​ನ ಅಧಿಕಾರಿಗಳು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಜನಾಂಗೀಯ ಘಟನೆ ಬಗ್ಗೆ ತೆಗೆದುಕೊಂಡಿರುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ" ಎಂದಿದ್ದಾರೆ.

"ನಮ್ಮ ಕ್ರೀಡೆಯಲ್ಲಿ ಯಾವುದೇ ವರ್ಣಭೇದ ನೀತಿಯನ್ನು ನಾವು ಸಹಿಸುವುದಿಲ್ಲವಾದ್ದರಿಂದ ನಾವು ಮುಂದಿನ ಯಾವುದೇ ತನಿಖೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಸಂಬಂಧಿತ ಅಧಿಕಾರಿಗಳಿಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ" ಎಂದು ತಿಳಿಸಿದ್ದಾರೆ.

ಭಾನುವಾರ ಭಾರತದ ವೇಗದ ಬೌಲರ್​ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್​ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಪ್ರೇಕ್ಷಕರ ಗುಂಪೊಂದು ಅವಾಚ್ಯ ಶಬ್ಧಗಳಿಂದ ನಿಂದಿಸಿತ್ತು. ನಂತರ ಭದ್ರತಾ ಸಿಬ್ಬಂದಿ 6 ಮಂದಿಯನ್ನು ಮೈದಾನದಿಂದ ಹೊರಹಾಕಿ ನ್ಯೂ ಸೌತ್ ವೇಲ್ಸ್​ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನು ಓದಿ:ಇದು ಗೂಂಡಾ ವರ್ತನೆಯ ಪರಮಾವಧಿ: ಜನಾಂಗೀಯ ನಿಂದನೆ ವಿರುದ್ಧ ಕೊಹ್ಲಿ ಕೆಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.