ETV Bharat / sports

ಪೂಜಾರ, ಪಂತ್, ಅಶ್ವಿನ್​ ಅವರ ಮಹತ್ವ ಎಲ್ಲರಿಗೂ ಅರಿವಾಗಿದೆ: ಸೌರವ್​ ಗಂಗೂಲಿ

author img

By

Published : Jan 11, 2021, 7:08 PM IST

ಚೇತೇಶ್ವರ್ ಪೂಜಾರ (77) ರಿಷಭ್ ಪಂತ್ (97) ಮತ್ತು ಅಶ್ವಿನ್​ ಆಸ್ಟ್ರೇಲಿಯಾದ ಬೌಲಿಂಗ್​ ದಾಳಿಯನ್ನು ಅದ್ಭುತವಾಗಿ ಎದುರಿಸಿ ಟೆಸ್ಟ್​ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗಗಳಿಸುವ ಮೂಲಕ ಸಿಡ್ನಿ ಟೆಸ್ಟ್​ ಪಂದ್ಯವನ್ನು ಸ್ಮರಣೀಯವನ್ನಾಗಿಸಿದರು.

ಸೌರವ್​ ಗಂಗೂಲಿ -ಭಾರತ ತಂಡ
ಸೌರವ್​ ಗಂಗೂಲಿ -ಭಾರತ ತಂಡ

ನವದೆಹಲಿ: ಭಾರತ ತಂಡ 3ನೇ ಟೆಸ್ಟ್​ ಪಂದ್ಯದಲ್ಲಿ ಡ್ರಾ ಸಾಧಿಸಲು ಕಾರಣರಾದ ಅಶ್ವಿನ್, ಚೇತೇಶ್ವರ್ ಪೂಜಾರ ಮತ್ತು ರಿಷಭ್ ಪಂತ್​ ಆಟವನ್ನು ಶ್ಲಾಘಿಸಿದ್ದು, ಮುಂಬರುವ ಬ್ರಿಸ್ಬೇನ್​ ಟೆಸ್ಟ್​ ಗೆದ್ದು ಟೆಸ್ಟ್​ ಸರಣಿ ಗೆಲ್ಲಬೇಕೆಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

  • Hope all of us realise the importance of pujara,pant and Ashwin in cricket teams..batting at 3 in test cricket against quality bowling is not always hitting through the line ..almost 400 test wickets don't come just like that..well fought india..time to win the series @bcci

    — Sourav Ganguly (@SGanguly99) January 11, 2021 " class="align-text-top noRightClick twitterSection" data=" ">

"ನಮಗೆಲ್ಲಾ ಭಾರತ ತಂಡದಲ್ಲಿ ಪೂಜಾರ, ಪಂತ್ ಮತ್ತು ಅಶ್ವಿನ್ ಪ್ರಾಮುಖ್ಯತೆ ಏನು ಎಂಬುದು ಅರಿವಾಗಿದೆ ಎಂದು ನಾನು ಭಾವಿಸುತ್ತೇನೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಅತ್ಯುತ್ತಮ ಗುಣಮಟ್ಟದ ಬೌಲರ್​ಗಳನ್ನು ಎದುರಿಸುವುದೆಂದರೆ ಅದು ಯಾವಾಗಲು ದೊಡ್ಡ ಹೊಡೆತ ಬಾರಿಸುವುದಲ್ಲ. ಹೆಚ್ಚು ಕಡಿಮೆ 400 ವಿಕೆಟ್​ ಸುಮ್ಮನೆ ಬಂದಿಲ್ಲ. ಭಾರತ ಅದ್ಭುತವಾದ ಹೋರಾಟ ನಡೆಸಿದೆ. ಇದು ಸರಣಿ ಗೆಲ್ಲುವ ಸಮಯ" ಎಂದು ಮುಂದಿನ ಪಂದ್ಯವನ್ನು ಗೆಲ್ಲಬೇಕೆಂದು ಟ್ವೀಟ್ ಮೂಲಕ ಟೀಮ್ ಇಂಡಿಯಾಗೆ ಕಿವಿಮಾತು ಹೇಳಿದ್ದಾರೆ.

ನಾಲ್ಕು ಪಂದ್ಯಗಳ ಸರಣಿಯಲ್ಲಿ ಮೂರು ಪಂದ್ಯಗಳು ಈಗಾಗಲೇ ಮುಗಿದಿವೆ. ಉಭಯ ತಂಡಗಳು ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿವೆ. ಆಸ್ಟ್ರೇಲಿಯಾ ತಂಡದ ಭದ್ರಕೋಟೆಯಾಗಿರುವ ಬ್ರಿಸ್ಬೇನ್​ನ ಗಬ್ಬಾದಲ್ಲಿ ಶುಕ್ರವಾರದಿಂದ ಕೊನೆಯ ಟೆಸ್ಟ್​ ಪಂದ್ಯ ನಡೆಯಲಿದ್ದು, ಈ ಟೆಸ್ಟ್​ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಹಾಗೂ ಸರಣಿ ನಿರ್ಣಾಯಕ ಪಂದ್ಯವಾಗಲಿದೆ.

ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ: ಅಪ್ಪನಾದ ಖುಷಿಯಲ್ಲಿ ವಿರಾಟ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.